ನವದೆಹಲಿ:ಇನ್ನೊಂದು ವಾರದಲ್ಲಿ ಪಾಕಿಸ್ತಾನ ಮೇಲೆ ಭಾರತ ದಾಳಿ ನಡೆಸಲಿದೆ ಎನ್ನುವ ಪಾಕ್ ವಿದೇಶಾಂಗ ಸಚಿವರ ಹೇಳಿಕೆಯನ್ನು ಭಾರತ ತಳ್ಳಿಹಾಕಿದೆ.
ಭಾರತೀಯ ವಿದೇಶಾಂಗ ಇಲಾಖೆ ಭಾನುವಾರ ಸಂಜೆ ಪಾಕ್ ಹೇಳಿಕೆಗೆ ತನ್ನ ಪ್ರತಿಕ್ರಿಯೆ ನೀಡಿದ್ದು, ಪಾಕ್ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಮಾತು ಬೇಜವಾಬ್ದಾರಿ ಎಂದು ಬಣ್ಣಿಸಿರುವ ವಿದೇಶಾಂಗ ಇಲಾಖೆ, ಇದು ಉಭಯ ದೇಶಗಳ ನಡುವೆ ಶಾಂತಿ ಕದಡುವ ಪ್ರಯತ್ನ ಹಾಗೂ ಪಾಕ್ ಪ್ರಚೋದಿತ ಉಗ್ರರರನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಪಾಕ್ ಮಾಡುತ್ತಿರುವ ನಾಟಕ ಎಂದು ಪ್ರಕಟಣೆಯಲ್ಲಿ ಹೇಳಿದೆ.