ಕರ್ನಾಟಕ

karnataka

ಮೆಗ್ಗಾನ್ ಗೆ ಹೊರ ಜಿಲ್ಲೆ ರೋಗಿಗಳ ಹಾವಳಿ: ಬೆಡ್ ಖಾಲಿ ಇಲ್ಲ ಎಂದ ಆಸ್ಪತ್ರೆ ಆಡಳಿತ ಮಂಡಳಿ

By

Published : May 7, 2021, 8:49 PM IST

Updated : May 7, 2021, 10:14 PM IST

ಹೀಗಾಗಿ ಜಿಲ್ಲೆಯ ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ಮೆಗ್ಗಾನ್ ಆಸ್ಪತ್ರೆಗೆ ಸವಾಲಾಗಿದೆ. ಹೊರ‌ಜಿಲ್ಲೆಯ ರೋಗಿಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದ್ದು, ಹೀಗಾಗಿ ಮೆಗ್ಗಾನ್ ಕೋವಿಡ್‌ ಆಸ್ಪತ್ರೆ ಎದುರು ಆಕ್ಸಿಜನ್ ಬೆಡ್ ಗಳು ಖಾಲಿ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ.

mcgann-hospital-shimoga-put-no-oxygen-in-hospital
mcgann-hospital-shimoga-put-no-oxygen-in-hospital

ಶಿವಮೊಗ್ಗ: ಹೊರ ಜಿಲ್ಲೆಯ ಸೋಂಕಿತರ ಆಗಮನದಿಂದ ಜಿಲ್ಲೆಯ ರೋಗಿಗಳಿಗೆ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವಾಗದ ಸ್ಥಿತಿ‌ ನಿರ್ಮಾಣವಾಗಿದ್ದು, ಇದನ್ನು ಮನಗಂಡ ಅಧಿಕಾರಿಗಳು ಹೊರ‌ಜಿಲ್ಲೆಗಳ ರೋಗಿಗಳನ್ನು ನಿಯಂತ್ರಿಸಲು ವಿನೂತನ ತಂತ್ರ ಉಪಯೋಗಿಸಿದ್ದಾರೆ.

ಮೆಗ್ಗಾನ್ ಗೆ ಹೊರ ಜಿಲ್ಲೆ ರೋಗಿಗಳ ಹಾವಳಿ: ಬೆಡ್ ಖಾಲಿ ಇಲ್ಲ ಎಂದ ಆಸ್ಪತ್ರೆ ಆಡಳಿತ ಮಂಡಳಿ

ಜಿಲ್ಲೆಗೆ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರುನಿಂದ ಪ್ರತಿದಿನ ನೂರಾರು ಕೊರೊನಾ ಸೋಂಕಿತರು ಜಿಲ್ಲೆಗೆ ಬರಲು ಆರಂಭಿಸಿದ್ದಾರೆ. ಶಿವಮೊಗ್ಗದಲ್ಲಿ ಕೊರೊನಾ ಪ್ರಕರಣಗಳು ಕಡಿಮೆ ಇದ್ದಿದ್ದರಿಂದ ಮೆಗ್ಗಾನ್ ನಲ್ಲಿ ಬೇರೆ ಜಿಲ್ಲೆಗಳ ರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಶಿವಮೊಗ್ಗದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ.

ಹೀಗಾಗಿ ಜಿಲ್ಲೆಯ ಸೋಂಕಿತರಿಗೆ ಚಿಕಿತ್ಸೆ ನೀಡುವುದೇ ಮೆಗ್ಗಾನ್ ಆಸ್ಪತ್ರೆಗೆ ಸವಾಲಾಗಿದೆ. ಹೊರ‌ ಜಿಲ್ಲೆಯ ರೋಗಿಗಳನ್ನು ನಿಯಂತ್ರಿಸುವುದು ಅನಿವಾರ್ಯವಾಗಿದ್ದು, ಹೀಗಾಗಿ ಮೆಗ್ಗಾನ್ ಕೋವಿಡ್‌ ಆಸ್ಪತ್ರೆ ಎದುರು ಆಕ್ಸಿಜನ್ ಬೆಡ್ ಗಳು ಖಾಲಿ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ.

ಜಿಲ್ಲೆಯಲ್ಲಿ ಪ್ರತಿದಿನ ಆರು ನೂರಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗುತ್ತಿವೆ. ಮೆಗ್ಗಾನ್ ಆಸ್ಪತ್ರೆಯಲ್ಲಿ 500 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಈ ಆಕ್ಸಿಜನ್ ಬೆಡ್​ಗಳ ಅಗತ್ಯತೆ ಶಿವಮೊಗ್ಗ ಜಿಲ್ಲೆಯ ರೋಗಿಗಳಿಗೇ ಇದೆ. ಹೊರಜಿಲ್ಲೆಯ ರೋಗಿಗಳು ಶಿವಮೊಗ್ಗಕ್ಕೆ ಆಗಮಿಸಬಾರದು ಎಂಬ ಕಾರಣಕ್ಕೆ ಮೆಗ್ಗಾನ್ ಮುಂದೆ ಆಕ್ಸಿಜನ್ ಇಲ್ಲ ಎಂಬ ಬೋರ್ಡ್ ಹಾಕಲಾಗಿದೆ. ಇದಲ್ಲದೇ ಬೇರೆ ಜಿಲ್ಲೆಯ ರೋಗಿಗಳು ಯಾವುದೇ‌ ಕಾರಣಕ್ಕೂ ಶಿವಮೊಗ್ಗಕ್ಕೆ ಆಗಮಿಸಬಾರದು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.

ಬೇರೆ ಜಿಲ್ಲೆಯ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಬೆಡ್ ನೀಡಿದ್ದರಿಂದಾಗಿ ಶಿವಮೊಗ್ಗ ಜಿಲ್ಲೆಯ ಸೋಂಕಿತರಿಗೆ ಆಕ್ಸಿಜನ್ ಸಿಗದೇ ಪರದಾಡುವ ಪರಿಸ್ಥಿತಿ ಎದುರಾಗಿತ್ತು ಹೀಗಾಗಿ ಇದೀಗ ಬೇರೆ ಜಿಲ್ಲೆಯ ಸೋಂಕಿತರನ್ನು‌ ಮೆಗ್ಗಾನ್​​​ಗೆ ನಿರ್ಬಂಧಿಸಿ ಶಿವಮೊಗ್ಗದ ಸೋಂಕಿತರಿಗೆ ಮಾತ್ರ ಮೆಗ್ಗಾನ್ ಗೆ ಅವಕಾಶ ನೀಡಲಾಗಿದೆ.

Last Updated : May 7, 2021, 10:14 PM IST

ABOUT THE AUTHOR

...view details