ಕರ್ನಾಟಕ

karnataka

ETV Bharat / briefs

ನಾಪತ್ತೆಯಾದ ಐಎಎಫ್​ ವಿಮಾನ ಹುಡುಕಾಟ ಮತ್ತಷ್ಟು ಚುರುಕು... ಕಾರ್ಯಾಚರಣೆಗೆ ಕೈಜೋಡಿಸಿದ ಭೂಸೇನೆ - ಸುಖೋಯ್

ಹದಿಮೂರು ಪ್ರಯಾಣಿಕರಿದ್ದ ಎಎನ್​-32 ವಿಮಾನ ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸೋಂನ ಜೋರ್ಹತ್​​ನಿಂದ ಟೇಕಾಫ್ ಆಗಿತ್ತು. ಮಧ್ಯಾಹ್ನ ಒಂದು ಗಂಟೆಗೆ ಈ ವಿಮಾನದ ಸಂಪರ್ಕ ಕಡಿತಗೊಂಡಿತ್ತು.

ಹುಡುಕಾಟ

By

Published : Jun 3, 2019, 11:30 PM IST

Updated : Jun 4, 2019, 4:17 PM IST

ನವದೆಹಲಿ: ನಾಪತ್ತೆಯಾಗಿರುವ ಎಎನ್​​-32 ವಿಮಾನ ಹುಡುಕಾಟವನ್ನು ಭಾರತೀಯ ವಾಯುಸೇನೆ ಮತ್ತಷ್ಟು ಚುರುಕುಗೊಳಿಸಿದೆ.

13 ಪ್ರಯಾಣಿಕರಿದ್ದ ಎಎನ್​-32 ವಿಮಾನ ಸೋಮವಾರ ಮಧ್ಯಾಹ್ನ 12.25ಕ್ಕೆ ಅಸ್ಸೋಂನ ಜೋರ್ಹತ್​​ನಿಂದ ಟೇಕಾಫ್ ಆಗಿತ್ತು. ಮಧ್ಯಾಹ್ನ ಒಂದು ಗಂಟೆಗೆ ಈ ವಿಮಾನದ ಸಂಪರ್ಕ ಕಡಿತಗೊಂಡಿತ್ತು.

ಟೇಕಾಫ್​ ಆದ ಅರ್ಧ ಗಂಟೆಯಲ್ಲಿ ಐಎಎಫ್ ವಿಮಾನ ನಾಪತ್ತೆ..!

ಸಂಪರ್ಕ ಕಡಿತಗೊಂಡ ಕೆಲವೇ ಹೊತ್ತಿನಲ್ಲಿ ವಾಯುಸೇನೆ ಹುಡುಕಾಟ ಆರಂಭಿಸಿತ್ತು. ಇದಕ್ಕಾಗಿ ಯುದ್ಧ ವಿಮಾನ ಸುಖೋಯ್​ ಹಾಗೂ ಎರಡು ಹೆಲಿಕಾಪ್ಟರ್​​​​​ಗಳನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು.

ಸದ್ಯದ ಮಾಹಿತಿಯ ಪ್ರಕಾರ ಹೆಲಿಕಾಪ್ಟರ್​​ಗಳು ವಿಮಾನ ಸ್ಥಳವನ್ನು ಪತ್ತೆ ಹಚ್ಚಿವೆ. ಆದರೆ ಯಾವುದೇ ರೀತಿಯ ಪತನದ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಭಾರತೀಯ ವಾಯುಸೇನೆ ಮಾಹಿತಿ ನೀಡಿದೆ.

ಈ ಕಾರ್ಯಾಚರಣೆ ರಾತ್ರಿಯಿಡೀ ನಡೆಯಲಿದ್ದು, ವಿಮಾನ ಪತ್ತೆ ಆಗುವವರೆಗೂ ಮುಂದುವರೆಯಲಿದೆ. ವಾಯುಸೇನೆ ಜೊತೆಗೆ ಭೂಸೇನೆ ಸಹ ಈ ಹುಡುಕಾಟದಲ್ಲಿ ಕೈಜೋಡಿಸಿದೆ ಎಂದು ವಾಯುಸೇನೆ ಹೇಳಿದೆ.

ಮಾಹಿತಿ ಪಡೆದ ರಕ್ಷಣಾ ಸಚಿವ:

ವಿಮಾನ ನಾಪತ್ತೆ ಕುರಿತಾಗಿ ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಪೂರ್ಣ ಮಾಹಿತಿಯನ್ನು ವಾಯು ಸೇನೆಯಿಂದ ಪಡೆದುಕೊಂಡಿದ್ದಾರೆ. ಎಲ್ಲ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.

Last Updated : Jun 4, 2019, 4:17 PM IST

ABOUT THE AUTHOR

...view details