ಜೈಪುರ್:ಮುಂಬೈ ಹಾಗೂ ಪುಲ್ವಾಮಾ ಉಗ್ರ ದಾಳಿಯ ರೂವಾರಿ ಜೈಷ್-ಏ ಮೊಹ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್‌ನನ್ನು ಜಾಗತಿಕ ಭಯೋತ್ಪಾದಕನೆಂಬ ಪಟ್ಟಿಗೆ ಕೊನೆಗೂ ಸೇರಿಸಲಾಗಿದೆ.
ಚೀನಾ ತನ್ನ ಆಕ್ಷೇಪ ಹಿಂಪಡೆದ ಕಾರಣ, ವಿಶ್ವಸಂಸ್ಥೆ ಭದ್ರತಾ ಮಂಡಳಿ ಮಸೂದ್ಗೆ ಜಾಗತಿಕ ಉಗ್ರನ ಪಟ್ಟ ಕಟ್ಟಿದೆ. ಇದಕ್ಕೆ ಈಗಾಗಲೇ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದು, ರಾಜಸ್ಥಾನದ ಜೈಪುರ್ನಲ್ಲಿ ಚುನಾವಣಾ ರ್ಯಾಲಿ ನಡೆಸುತ್ತಿದ್ದ ಮೋದಿ ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸಂಭ್ರಮ UNSC ಮಸೂದ್ ಅಜರ್ಗೆ ಜಾಗತಿಕ ಉಗ್ರನ ಲಿಸ್ಟ್ಗೆ ಸೇರಿಸಿದ್ದು, ಅದು ಸ್ವಾಗತಾರ್ಹ. ಉಗ್ರರ ವಿರುದ್ಧದ ನಮ್ಮ ಹೋರಾಟ ಮುಂದುವರೆಯಲಿದ್ದು, ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಗೆಲುವು ಇದಾಗಿದೆ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿ ಮುಖಂಡ ರಾಮ್ ಮಾಧವ್ ಕೂಡ ವಿಶ್ವಸಂಸ್ಥೆ ನಿರ್ಧಾರವನ್ನ ಸ್ವಾಗತಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಅತೀ ದೊಡ್ಡ ಗೆಲುವು ಸಿಕ್ಕಿದೆ. ಇದಕ್ಕೆ ಜನರು ಖುಷಿ ಪಡುವಂತಾಗಿದೆ ಎಂದಿದ್ದಾರೆ.