ಕಂದಮಾಲ್(ಒಡಿಶಾ):ಚುನಾವಣಾ ಕರ್ತವ್ಯಕ್ಕೆ ತೆರಳುತ್ತಿದ್ದ ಮಹಿಳಾ ಅಧಿಕಾರಿಯನ್ನು ನಕ್ಸಲರು ಗುಂಡಿಕ್ಕೆ ಹತ್ಯೆಗೈದಿದ್ದಾರೆ.
ಮತ್ತೆ ನಕ್ಸಲರ ಅಟ್ಟಹಾಸ... ಮಹಿಳಾ ಚುನಾವಣಾಧಿಕಾರಿಗೆ ಗುಂಡಿಟ್ಟು ಹತ್ಯೆ - ನಕ್ಸಲರು
ಸಂಜುಕ್ತಾ ದಿಗಾಲ್ ಎನ್ನುವ ಮಹಿಳಾ ಚುನಾವಣಾಧಿಕಾರಿ ತಮ್ಮ ತಂಡದೊಂದಿಗೆ ಕಾಡಿನ ಮಾರ್ಗವಾಗಿ ಚಲಿಸುತ್ತಿದ್ದ ವೇಳೆ ಮಹಿಳಾ ಅಧಿಕಾರಿ ಸಂಜುಕ್ತಾರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ನಕ್ಸಲರ ಅಟ್ಟಹಾಸ
ಸಂಜುಕ್ತಾ ದಿಗಾಲ್ ಎನ್ನುವ ಮಹಿಳಾ ಚುನಾವಣಾಧಿಕಾರಿ ತಮ್ಮ ತಂಡದೊಂದಿಗೆ ಕಾಡಿನ ಮಾರ್ಗವಾಗಿ ಚಲಿಸುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತುವನ್ನು ಗಮನಿಸಿದ ಸಂಜುಕ್ತಾ ವಾಹನ ನಿಲ್ಲಿಸಿ ಕೆಳಗಿಳಿದಿದ್ದಾರೆ. ಇದೇ ಸಂರ್ಭದಲ್ಲಿ ಮಹಿಳಾ ಅಧಿಕಾರಿ ಸಂಜುಕ್ತಾರನ್ನು ನಕ್ಸಲರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
ವಾಹನದಲ್ಲಿದ್ದ ಇತರರಿಗೆ ಯಾವುದೇ ಹಾನಿಯಾಗಿಲ್ಲ. ಒಡಿಶಾದ ಫುಲ್ಬಾನಿ ವಿಧಾನಸಭಾ ಕ್ಷೇತ್ರದಲ್ಲಿ ನಾಳೆ ಮತದಾನ ನಡೆಯಲಿದ್ದು ಇದಕ್ಕಾಗಿ ಅಧಿಕಾರಿಗಳು ತೆರಳುತ್ತಿದ್ದರು.