ನವದೆಹಲಿ: ಜೈಶ್-ಇ-ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆ 'ಜಾಗತಿಕ ಉಗ್ರ' ಎಂದು ಘೋಷಿಸಿದೆ. ಇದು ರಾಜತಾಂತ್ರಿಕವಾಗಿ ಭಾರತಕ್ಕೆ ಸಿಕ್ಕಿರುವ ಬಹುದೊಡ್ಡ ಗೆಲುವು ಎಂದು ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಬಣ್ಣಿಸಿದ್ದಾರೆ.
ಮಸೂದ್ಗೆ 'ಜಾಗತಿಕ ಉಗ್ರ'ನ ಪಟ್ಟ: ವಿಶ್ವಸಂಸ್ಥೆ ಕ್ರಮಕ್ಕೆ ಗಣ್ಯರ ಸಂತಸ
ಜಾಗತಿಕ ಮಟ್ಟದಲ್ಲಿ ಮಸೂದ್ ಅಜರ್ಗೆ ಉಗ್ರನ ಪಟ್ಟ ಕಟ್ಟಲಾಗಿದ್ದು, ಭಾರತಕ್ಕೆ ಸಿಕ್ಕಿರುವ ಬಹುದೊಡ್ಡ ರಾಜತಾಂತ್ರಿಕ ಗೆಲುವೆಂದು ಪರಿಗಣಿಸಲಾಗಿದೆ.
ಮಾಜಿ ಪ್ರಧಾನಿ ಸಿಂಗ್
ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಂಗ್, ಕೊನೆಗೂ ನಾವು ಪಟ್ಟ ಶ್ರಮ ಯಶಸ್ವಿಯಾಗಿದ್ದು, ವಿಶ್ವಸಂಸ್ಥೆಯ ಭದ್ರತಾ ಸಮಿತಿ ಮಸೂದ್ ಅಜರ್ಗೆ ಜಾಗತಿಕ ಉಗ್ರನ ಪಟ್ಟ ಕಟ್ಟಿರುವುದಕ್ಕೆ ನನಗೆ ಖುಷಿಯಾಗಿದೆ ಎಂದರು. ಇದೇ ವೇಳೆ ಅವರು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಭೇಟಿಯಾಗಿ ಹರ್ಷ ವ್ಯಕ್ತಪಡಿಸಿದರು.
ವಿಶ್ವಸಂಸ್ಥೆಯ ಮಹತ್ವದ ನಿರ್ಧಾರವನ್ನು ಫ್ರಾನ್ಸ್ ಕೊಂಡಾಡಿದೆ. ಮಸೂದ್ ಅಜರ್ ಮೇಲೆ ಜಾಗತಿಕ ಉಗ್ರನ ಪಟ್ಟ ಹೇರಿದ್ದು ಸ್ವಾಗತಾರ್ಹ ಎಂದು ತಿಳಿಸಿದೆ.