ಮಂಗಳೂರು:ರಾಜ್ಯದಲ್ಲಿ 14 ದಿನಗಳ ಕಠಿಣ ಕರ್ಫ್ಯೂ ಇಂದು ರಾತ್ರಿ 9 ಗಂಟೆಯಿಂದ ಆರಂಭವಾಗಿದ್ದು, ಮಂಗಳೂರಿನಲ್ಲಿ ನಗರ ಪೊಲೀಸ್ ಕಮಿಷನರ್ ಪರಿಶೀಲನೆ ನಡೆಸಿದರು.
14 ದಿನಗಳ ಕಠಿಣ ಕರ್ಫ್ಯೂ ಆರಂಭ: ಮಂಗಳೂರಿನಲ್ಲಿ ಪೊಲೀಸ್ ಕಮಿಷನರ್ ಪರಿಶೀಲನೆ - ಮಂಗಳೂರು ಸುದ್ದಿ
ರಾತ್ರಿ 9 ಗಂಟೆ ಆರಂಭವಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಸಂಚರಿಸದಂತೆ ತಡೆಯಲಾಗಿದೆ.

Mangalore
ರಾತ್ರಿ 9 ಗಂಟೆ ಆರಂಭವಾಗುತ್ತಿದ್ದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ವಾಹನ ಸಂಚರಿಸದಂತೆ ತಡೆಯಲಾಗಿದೆ. ವಿವಿಧೆಡೆ ಪೊಲೀಸ್ ಬಂದೋಬಸ್ತ್ ನಡೆಸಲಾಗಿದ್ದು ಬರುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.
ವಿವಿಧೆಡೆ ಹಾಕಲಾದ ಚೆಕ್ ಪೋಸ್ಟ್ಗಳಲ್ಲಿ ಬರುವ ವಾಹನಗಳನ್ನು ಪರಿಶೀಲಿಸಿ ಬಿಡಲಾಗುತ್ತಿದೆ. ಅನಗತ್ಯ ತಿರುಗಾಡುವವರನ್ನು ವಾಪಸ್ ಕಳುಹಿಸಲಾಗುತ್ತಿದೆ. ಮಂಗಳೂರು ನಗರ ಪೊಲೀಸ್ ಕಮೀಷನರ್ ಅವರು ನಗರದ ವಿವಿಧೆಡೆ ಬಂದೋಬಸ್ತ್ ಪರಿಶೀಲನೆ ನಡೆಸಿದರು.