ಕರ್ನಾಟಕ

karnataka

ETV Bharat / briefs

ಮಳೆಗಾಲಕ್ಕೂ ಮೊದಲೇ ತುಂಬಿದ ತುಂಬೆ ಆಣೆಕಟ್ಟು : ಮಂಗಳೂರಿಗರಿಗೆ ನೀರಿಗೆ ಬರವಿಲ್ಲ! - Mangalore rain news

ಬಂಟ್ವಾಳದ ತುಂಬೆಯಲ್ಲಿ ಕಟ್ಟಿದ ಅಣೆಕಟ್ಟು ಭರ್ತಿಯಾಗಿದ್ದು, ಪ್ರತಿ ವರ್ಷ ನೀರಿನ ಸಮಸ್ಯೆ ಎದುರಿಸುತ್ತಿದ್ದ ಮಂಗಳೂರಿಗೆ ನೀರಿನ ಕೊರತೆ ಈ ಬಾರಿ ಇಲ್ಲದಂತಾಗಿದೆ.

Tumbe water reservoir
Tumbe water reservoir

By

Published : Jun 1, 2020, 10:45 PM IST

ಬಂಟ್ವಾಳ: ಕಳೆದ ವರ್ಷ ನೀರಿಲ್ಲದೆ ಸೊರಗಿದ್ದ ತುಂಬೆ ಡ್ಯಾಂ ಈ ಬಾರಿ ಮಳೆಗಾಲ ಆರಂಭಕ್ಕೂ ಮುನ್ನವೇ ಭರ್ತಿಯಾಗಿದೆ.

ಮಳೆಯ ಮುನ್ನೆಚ್ಚರಿಕೆಯಾಗಿ ಡ್ಯಾಂನಲ್ಲಿ ಅರ್ಧ ಮೀಟರ್​​ನಷ್ಟು ನೀರನ್ನು ಕಡಿಮೆ ನಿಲ್ಲಿಸಲಾಗಿದೆ. ತುಂಬೆ ಡ್ಯಾಂನಲ್ಲಿ 5.5 ಮೀ. ನೀರಿದ್ದು, ಇನ್ನು ಸುಮಾರು ಒಂದೂವರೆ ತಿಂಗಳು ಮಳೆ ವಿಳಂಬವಾದರೂ ಮಂಗಳೂರಿನ ಜನತೆ ಆತಂಕ ಪಡಬೇಕಿಲ್ಲ. ಜತೆಗೆ ಶಂಭೂರು ಡ್ಯಾಂನಲ್ಲಿಯೂ 18.9 ಮೀ. ಭರ್ತಿ ನೀರಿದೆ.

ತುಂಬೆ ಜಲಾಶಯ
ಕಳೆದ ಕೆಲವು ಸಮಯಗಳ ಹಿಂದೆ ತುಂಬೆ ಡ್ಯಾಂನಲ್ಲಿ 6 ಮೀ.ಭರ್ತಿ ನೀರು ನಿಲ್ಲಿಸಲಾಗಿದ್ದು, ಹೆಚ್ಚುವರಿ ನೀರು ಹೊರಗೆ ಹರಿದು ಹೋಗುತ್ತಿತ್ತು. ಆದರೆ ಮಳೆಯ ನಿರೀಕ್ಷೆ ಇರುವ ಕಾರಣ ಯಾವುದೇ ತೊಂದರೆ ಎದುರಾಗಬಾರದು ಎಂಬ ದೃಷ್ಟಿಯಿಂದ ಅರ್ಧ ಮೀಟರ್ ನೀರನ್ನು ಕಡಿಮೆ ಮಾಡಲಾಗಿದೆ.ಮುಂದೆ ಮಳೆಯನ್ನು ನೋಡಿಕೊಂಡು ಡ್ಯಾಂನ ಗೇಟ್​​ಗಳನ್ನ ಲಿಫ್ಟ್ ಮಾಡುವ ಕಾರ್ಯವೂ ನಡೆಯಲಿದೆ. ಮಳೆಯ ನೀರಿನ ಜತೆಗೆ ಮರದ ದಿಮ್ಮಿ ಸೇರಿದಂತೆ ಕಸಕಡ್ಡಿ ಹರಿದು ಬರುವುದರಿಂದ ಡ್ಯಾಂ ಸ್ವಚ್ಛವಾಗಬೇಕು ಎನ್ನುವ ಉದ್ದೇಶದಿಂದ ಒಂದೊಂದೇ ಗೇಟ್​​​ಗಳನ್ನ ತೆರೆಯಲಾಗುತ್ತದೆ. ನದಿಯಲ್ಲಿ ಪೂರ್ತಿ ನೀರು ತುಂಬಿದರೆ ಎಲ್ಲ ಗೇಟ್​ಗಳನ್ನ ಲಿಫ್ಟ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ABOUT THE AUTHOR

...view details