ಕರ್ನಾಟಕ

karnataka

ETV Bharat / briefs

ಪತಿ ರಾಜ್ ಕೌಶಲ್ ನೆನೆದು ಮಂದಿರಾ ಬೇಡಿ ಭಾವನಾತ್ಮಕ​ ಟ್ವೀಟ್ - ಪತಿ ರಾಜ್ ಕೌಶಲ್

ನಟಿ ಮಂದಿರ ಬೇಡಿ ಅವರು ಪತಿ ರಾಜ್ ಕೌಶಲ್ ಅವರ ಬಗ್ಗೆ ಭಾವನಾತ್ಮಕ ಪೋಸ್ಟ್ ಅನ್ನು ಟ್ವಿಟ್ಟರ್‌ನಲ್ಲಿ ಶೇರ್​ ಮಾಡಿದ್ದಾರೆ.

  ಪತಿ ರಾಜ್ ಕೌಶಲ್ ಅವರನ್ನು ನೆನೆದು ಫೋಸ್ಟ್​ ಹಾಕಿದ ಮಂದಿರಾ ಬೇಡಿ
ಪತಿ ರಾಜ್ ಕೌಶಲ್ ಅವರನ್ನು ನೆನೆದು ಫೋಸ್ಟ್​ ಹಾಕಿದ ಮಂದಿರಾ ಬೇಡಿ

By

Published : Jul 6, 2021, 4:33 PM IST

ಮುಂಬೈ (ಮಹಾರಾಷ್ಟ್ರ):ಇತ್ತೀಚೆಗೆಸಾವಿಗೀಡಾದ ಪತಿ ರಾಜ್ ಕೌಶಲ್ ನೆನೆದು ನಟಿ ಮಂದಿರ ಬೇಡಿ ಅವರು ಭಾವನಾತ್ಮಕ ಪೋಸ್ಟ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಪ್ಯಾರ್ ಮೇ ಕಭಿ ಕಭಿ' ಮತ್ತು 'ಶಾದಿ ಕಾ ಲಡ್ಡೂ' ಚಿತ್ರಗಳ ನಿರ್ದೇಶನ ಮಾಡಿ ಹೆಸರುವಾಸಿಯಾಗಿದ್ದ ಕೌಶಲ್ ಜೂನ್ 30 ರಂದು ಹೃದಯಾಘಾತದಿಂದ ನಿಧನರಾಗಿದ್ದರು. ಈ ಸಂಬಂಧ ಪತ್ನಿ ಬೇಡಿ ಸೋಮವಾರ ತಡರಾತ್ರಿ ಟ್ವಿಟರ್‌ನಲ್ಲಿ ಕೌಶಲ್ ಅವರೊಂದಿಗೆ ಒಂದು ಚಿತ್ರವನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ನಿರ್ದೇಶಕರು ನಗುತ್ತಾ ಕ್ಯಾಮರಾ ಕಡೆಗೆ ನೋಡುತ್ತಿದ್ದಾರೆ.

'Rip ಮೈ ರಾಜಿ' ಎಂದು ಚಿತ್ರಕ್ಕೆ ಅವರು ಶೀರ್ಷಿಕೆ ನೀಡಿದ್ದಾರೆ. 1999ರಲ್ಲಿ ವಿವಾಹವಾದ ಈ ಜೋಡಿಗೆ ಮಗ ವೀರ್ ಮತ್ತು ಮಗಳು ತಾರಾ ಎಂಬಿಬ್ಬರು ಮಕ್ಕಳಿದ್ದಾರೆ.

ABOUT THE AUTHOR

...view details