ಕರ್ನಾಟಕ

karnataka

ETV Bharat / briefs

‘ಮಂಗಳ ಗೌರಿ ಮದುವೆ’ ಧಾರಾವಾಹಿಗೆ ಎಂಟ್ರಿ ಕೊಟ್ಟ ಖ್ಯಾತ ನಟಿ! - Mangala Gouri maduve serial

ಮಹಾದೇವಿ ಧಾರಾವಾಹಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಟಿ ಮಾನಸ ಜೋಶಿ, ಮಂಗಳ ಗೌರಿ ಮದುವೆ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಚಿತ್ರೀಕರಣ ಹೈದರಾಬಾದ್’ನಲ್ಲಿ ನಡೆಯುತ್ತಿದ್ದು, ಮಾನಸ ಸೆಟ್’ಗೆ ಸೇರಿಕೊಂಡಿದ್ದಾರೆ.

ಮಾನಸ ಜೋಶಿ
ಮಾನಸ ಜೋಶಿ

By

Published : Jun 7, 2021, 10:14 PM IST

ಟಿಆರ್’ಪಿಯಲ್ಲಿ ಮುಂದಿರುವ ‘ಮಂಗಳ ಗೌರಿ ಮದುವೆ’ ಧಾರಾವಾಹಿ ದಿನಕ್ಕೊಂದು ರೋಚಕತೆ ಪಡೆದುಕೊಳ್ಳುತ್ತಿದ್ದು, ಇದರ ಮಧ್ಯೆ ಈ ಧಾರಾವಾಹಿಗೆ ಜನಪ್ರಿಯ ನಟಿಯ ಎಂಟ್ರಿ ಆಗಿದೆ.

ಹೌದು, ಮಹಾದೇವಿ ಧಾರಾವಾಹಿಯಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ನಟಿ ಮಾನಸ ಜೋಶಿ, ಮಂಗಳ ಗೌರಿ ಮದುವೆ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಧಾರಾವಾಹಿಯ ಚಿತ್ರೀಕರಣ ಹೈದರಾಬಾದ್’ನಲ್ಲಿ ನಡೆಯುತ್ತಿದ್ದು, ಮಾನಸ ಸೆಟ್’ಗೆ ಸೇರಿಕೊಂಡಿದ್ದಾರೆ.

ಮಾನಸ ಅವರು “ನಾನು ಮಹಾದೇವಿಯಲ್ಲಿ ನಟಿಸಿದ ನಂತರ, ನೃತ್ಯ ಅಕಾಡೆಮಿ ಸ್ಥಾಪಿಸುವತ್ತ ಗಮನಹರಿಸಲು ಪ್ರಾರಂಭಿಸಿದೆ. ಇದರಿಂದ ಕೆಲವು ವರ್ಷಗಳವರೆಗೆ ನಟನೆಯಿಂದ ದೂರವಿರಬೇಕಾಯಿತು. ಕೊರೊನಾ ಪರಿಣಾಮ ಪ್ರತಿಯೊಂದು ತರಗತಿಗಳು ಆನ್ಲೈನ್’ನಲ್ಲಿ ಮಾತ್ರ ನಡೆಯುತ್ತಿವೆ. ಅದನ್ನು ಎಲ್ಲಿ ಬೇಕಾದರೂ ನಡೆಸಬಹುದು. ಇದರಿಂದ ನನಗೆ ಮಂಗಳ ಗೌರಿ ಧಾರಾವಾಹಿಯಲ್ಲಿ ಹೊಸ ಪಾತ್ರದಲ್ಲಿ ನಟಿಸಲು ಅವಕಾಶವಾಯಿತು. ಈ ಪಾತ್ರ ಮಹಾದೇವಿಯಲ್ಲಿ ನಾನು ಮಾಡಿದ್ದಕ್ಕಿಂತ ಭಿನ್ನವಾಗಿದೆ” ಎಂದು ಮಾನಸ ಅವರು ತಿಳಿಸಿದ್ದಾರೆ.

“ಈ ಧಾರಾವಾಹಿಯಲ್ಲಿ ನಾನು ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಮೊಟ್ಟ ಮೊದಲನೆಯ ಬಾರಿಗೆ ಈ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಈ ಪಾತ್ರ ಧಾರಾವಾಹಿಗೆ ಹೊಸ ತಿರುವನ್ನು ನೀಡುತ್ತದೆ. ನಿಜ ಜೀವನಕ್ಕಿಂತ ಹೆಚ್ಚು ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಆದರೆ, ಇದು ನನ್ನನ್ನು ಕಾಡುವುದಿಲ್ಲ. ಸಣ್ಣ ಅಥವಾ ದೊಡ್ಡ ಪರದೆಯಿರಲಿ, ಇಂತಹ ಹೆಚ್ಚು ಆಸಕ್ತಿದಾಯಕ ಪಾತ್ರಗಳನ್ನು ಮಾಡಲು ನಾನು ಉತ್ಸುಕಳಾಗಿದ್ದೇನೆ” ಎಂದು ಮಾನಸ ತಿಳಿಸಿದ್ದಾರೆ.

ಧಾರಾವಾಹಿಯ ಪ್ರೊಮೋ ನೋಡಿದರೆ ಅವರು ರಾಜೇಶ್ವರಿ ಎಂಬ ಪಾತ್ರ ನಿರ್ವಹಿಸಲಿದ್ದಾರೆ. ನೀವು ‘ಮಂಗಳ ಗೌರಿ ಮದುವೆ’ ಧಾರಾವಾಹಿ ಅಭಿಮಾನಿಯಾಗಿದ್ದರೆ ಇಂದು ತೆರೆಯ ಮೇಲೆ ರಾಜೇಶ್ವರಿ ನಿಮ್ಮ ಮುಂದೆ ಕಾಣಿಸಿಕೊಳ್ಳಲಿದ್ದಾರೆ.

ABOUT THE AUTHOR

...view details