ಕರ್ನಾಟಕ

karnataka

ETV Bharat / briefs

ಅರಣ್ಯಧಿಕಾರಿಗಳಿಂದ ಮನೆ ಧ್ವಂಸ... ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ - etv bharat

ಅರಣ್ಯಧಿಕಾರಿಗಳು ಮನೆ ಧ್ವಂಸ ಮಾಡಿದ್ದರಿಂದ ಮನನೊಂದ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶಿವಮೊಗ್ಗದ ಸೊರಬದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಯತ್ನ

By

Published : May 7, 2019, 1:18 AM IST

ಶಿವಮೊಗ್ಗ:ಅರಣ್ಯ ಇಲಾಖೆಯ ಅಧಿಕಾರಿಗಳು ಮನೆ ಧ್ವಂಸ ಮಾಡಿದ ಹಿನ್ನಲೆಯಲ್ಲಿ ಸೊರಬ ತಾಲ್ಲೂಕಿನ ಬಾಡದ ಬೈಲು ನಿವಾಸಿ ಗಣಪತಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಆತ್ಮಹತ್ಯೆಗೆ ಯತ್ನ

ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿಯನ್ನ ಗಣಪತಿ ಎಂದು ಗುರುತಿಸಲಾಗಿದ್ದು, ಆತನನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಳೆದ ಐದು ತಿಂಗಳದಿಂದ ಬಾಡಬೈಲಿನಲ್ಲಿ ಮನೆಯನ್ನ ಕಟ್ಟಿಕೊಂಡಿದ್ದನು. ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಇದೀಗ ಮನೆ ಧ್ವಂಸ ಮಾಡಿದ್ದಾರೆ.

ಇದರಿಂದ ಮನನೊಂದ ರೈತ ಆತ್ಮಹತ್ಯೆಗೆ ಯತ್ನಿಸಿದ್ದು, ತಕ್ಷಣ ಆತನನ್ನ ಮೆಗ್ಗಾನ್ ಆಸ್ಪತ್ರೆಯಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ABOUT THE AUTHOR

...view details