ಕರ್ನಾಟಕ

karnataka

ETV Bharat / briefs

ಆನೇಕಲ್: ಮಲದ ಗುಂಡಿಗೆ ಬಿದ್ದು ಮೃತಪಟ್ಟ ವ್ಯಕ್ತಿಗೂ ಕೊರೊನಾ - Anekallu latest news

ಆನೇಕಲ್ ನ ಬಂಡಾಪುರದ ಮಲದ ಗುಂಡಿಯಲ್ಲಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ.

ಆನೇಕಲ್
ಆನೇಕಲ್

By

Published : Jun 10, 2020, 12:12 PM IST

ಆನೇಕಲ್:ಬಂಡಾಪುರದ ಮಲಗುಂಡಿಯಲ್ಲಿ ಬಿದ್ದು ಉಸಿರುಗಟ್ಟಿ ಸಾವನ್ನಪ್ಪಿದ ವ್ಯಕ್ತಿಗೂ ಕೊರೊನಾ ಇರುವುದು ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ತಾಲೂಕಿನ ಮಂಚನಹಳ್ಳಿ ಮೂಲದವರಾದ ವ್ಯಕ್ತಿ ಮಲದ ಗುಂಡಿಯಲ್ಲಿ ಬಿದ್ದು ಸಾವನ್ನಪ್ಪಿದ್ದರು. ಅವರ ಮರಣೋತ್ತರ ಪರೀಕ್ಷೆಗೂ ಮುನ್ನ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈಗ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಈ ಮೂಲಕ ತಾಲೂಕಿನಲ್ಲಿ ನಾಲ್ಕು ಕೊರೊನಾ ಪ್ರಕರಣಗಳು ದಾಖಲಾಗಿವೆ.

ABOUT THE AUTHOR

...view details