ಕರ್ನಾಟಕ

karnataka

ETV Bharat / briefs

ಭೋಪಾಲ್‌ನಿಂದ ಸಾಧ್ವಿ ಪ್ರಗ್ಯಾ ಸಿಂಗ್ ಕಣಕ್ಕೆ, ಬಿಜೆಪಿ ಅಚ್ಚರಿಯ ನಡೆ! - ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್​

ಲೋಕಸಭೆ ಚುನಾವಣೆಗೆ ಟಿಕೆಟ್​ ದೊರೆಯುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್, ನಾನು ಈಗಾಗಲೇ ನನ್ನ ಕೆಲಸ ಆರಂಭಿಸಿದ್ದೇನೆ, ನಾವು ಎಲ್ಲದಕ್ಕೂ ಸಿದ್ದ ಎಂದು ಹೇಳಿದರು.

ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್

By

Published : Apr 17, 2019, 6:11 PM IST

ನವದೆಹಲಿ:ಪ್ರತಿಷ್ಠಿತ ಭೋಪಾಲ್​ ಲೋಕಸಭಾ​ ಕ್ಷೇತ್ರದಿಂದ ಬಿಜೆಪಿ, ತನ್ನ ಅಭ್ಯರ್ಥಿಯಾಗಿ ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್​ ಅವರನ್ನು ಕಣಕ್ಕಿಳಿಸಿ ಅಚ್ಚರಿ ಮೂಡಿಸಿದೆ.

ಚುನಾವಣೆಗೆ ಸ್ಪರ್ಧಿಸಲು ಟಿಕೆಟ್​ ದೊರೆಯುತ್ತಿದ್ದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್,ನಾನು ಸ್ಥಳೀಯ ಮಹಿಳೆಯಾಗಿದ್ದೇನೆ. ಈ ಪ್ರದೇಶದ ಜನರ ಸಮಸ್ಯೆಗಳ ಪರಿಹಾರಕ್ಕೆ ಉತ್ತಮವಾಗಿ ಸ್ಪಂದಿಸಬಲ್ಲೆ ಎಂದರು.

ಸಾಧ್ವಿ ಪ್ರಗ್ಯಾ ಸಿಂಗ್​​ ಠಾಕೂರ್ ಹೆಸರು ಮಾಲೇಗಾಂವ್​ ಸ್ಫೋಟ ಪ್ರಕರಣದಲ್ಲಿ ಪ್ರಮುಖವಾಗಿ ಕೇಳಿಬಂದಿತ್ತು. ಪ್ರಸ್ತುತ ಈ ಕೇಸ್‌ನ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸದ್ಯ ಸಾಧ್ವಿ ಜಾಮೀನು ಪಡೆದು ಹೊರಬಂದಿದ್ದಾರೆ.

ಕಾಂಗ್ರೆಸ್‌ ಪಕ್ಷ ಭೋಪಾಲ್‌ ಕ್ಷೇತ್ರದಿಂದ ದಿಗ್ವಿಜಯ ಸಿಂಗ್​ರನ್ನು ಕಣಕ್ಕಿಳಿಸಿದ್ದು, ಇದೀಗ ಈ ಇಬ್ಬರ ಮಧ್ಯೆ ಪ್ರಬಲ ಪೈಪೋಟಿ ನಿರೀಕ್ಷಿಸಲಾಗಿದೆ.

ABOUT THE AUTHOR

...view details