ಬೆಂಗಳೂರು:ಒಂದು ಹೆಣ ಹೊತ್ತು ಅಂತ್ಯಸಂಸ್ಕಾರ ಮಾಡಲು ಬನ್ನಿ. ನಂತರ ಕೋಮುವಾದದ ಬಗ್ಗೆ ಮಾತನಾಡಿ ಎಂದು ಆಲ್ ಮೈಟಿ ಎನ್‌ಜಿಒದ ಸಯ್ಯದ್ ರಿಸಲಾತ್, ಸಂಸದ ತೇಜಸ್ವಿ ಸೂರ್ಯ ಅವರಿಗೆ ಸವಾಲು ಹಾಕಿದರು.
ನಗರದ ದಕ್ಷಿಣ ವಲಯದ ವಾರ್ ರೂಂ ನಲ್ಲಿ ನಡೆದ ಬೆಡ್ ದಂಧೆ ಪ್ರಕರಣದಲ್ಲಿ, 205 ಜನರ ಪೈಕಿ ಕೆಲವು ಒಂದೇ ಕೋಮಿನ ಹೆಸರುಗಳನ್ನು ಸಂಸದ ತೇಜಸ್ವಿ ಸೂರ್ಯ ಬಹಿರಂಗಪಡಿಸಿದ್ದರು. ನಂತರದಲ್ಲಿ ಅವರ ಹೆಸರಿನೊಡನೆ ಅಮಾಯಕರ ಜೀವ ತೆಗೆಯುತ್ತಿರುವ ಟೆರರಿಸ್ಟ್ಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಿದಾಡತೊಡಗಿದವು.
ಈ ಬಗ್ಗೆ ಮಾತನಾಡಿದ ಆಲ್ ಮೈಟಿ ಎನ್‌ಜಿಒದ ಸಯ್ಯದ್ ರಿಸಲಾತ್, ತೇಜಸ್ವಿ ಸೂರ್ಯ ಕೋಮುವಾದದಿಂದ ಮುಸಲ್ಮಾನ್ ಬಾಂಧವರ ಹೆಸರು ಮಾತ್ರ ಹೇಳಿದ್ದಾರೆ. ಆದರೆ ಏನೇ ಹೇಳಿದರೂ ನಮ್ಮ ಜನ ಸೇವೆ ನಿಲ್ಲಿಸುವುದಿಲ್ಲ. ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದೇವೆ ಹೊರತು ಜಾತಿ, ಧರ್ಮ ನೋಡಿ ಕೆಲಸ ಮಾಡುತ್ತಿಲ್ಲ.
ಒಂದು ದಿನ, ಒಂದು ಹಿಂದೂ ಹೆಣ ಹೊರಲು, ಅಂತ್ಯಸಂಸ್ಕಾರ ಮಾಡಲು ಬನ್ನಿ. ಆವಾಗ ಅದರ ಬಗ್ಗೆ ಅರಿವು ಮೂಡುತ್ತದೆ. ಕೋವಿಡ್ ಸಂಕಷ್ಟದ ಬಗ್ಗೆ ಅರಿವು ಮೂಡುತ್ತದೆ. ನಂತರ ಕೋಮುವಾದದ ಬಗ್ಗೆ ಮಾತನಾಡಿ ಎಂದು ಸವಾಲು ಹಾಕಿದ್ದಾರೆ.
ಹೆಣದ ಅಂತ್ಯಸಂಸ್ಕಾರ ಮಾಡಿ, ನಂತರ ಕೋಮುವಾದದ ಬಗ್ಗೆ ಮಾತನಾಡಿ: ತೇಜಸ್ವಿಸೂರ್ಯಗೆ ಎನ್ಜಿಒ ಸವಾಲ್
ತೇಜಸ್ವಿ ಸೂರ್ಯ ಕೋಮುವಾದದಿಂದ ಮುಸಲ್ಮಾನರ ಬಾಂಧವರ ಹೆಸರು ಮಾತ್ರ ಹೇಳಿದ್ದಾರೆ. ಆದರೆ, ಏನೇ ಹೇಳಿದರೂ ನಮ್ಮ ಜನ ಸೇವೆ ನಿಲ್ಲಿಸುವುದಿಲ್ಲ. ಮಾನವೀಯತೆಗಾಗಿ ಕೆಲಸ ಮಾಡುತ್ತಿದ್ದೇವೆ ಹೊರತು ಜಾತಿ, ಧರ್ಮ ನೋಡಿ ಕೆಲಸ ಮಾಡುತ್ತಿಲ್ಲ. ಒಂದು ದಿನ, ಒಂದು ಹಿಂದೂ ಹೆಣ ಹೊರಲು, ಅಂತ್ಯಸಂಸ್ಕಾರ ಮಾಡಲು ಬನ್ನಿ. ಆವಾಗ ಅದರ ಬಗ್ಗೆ ಅರಿವು ಮೂಡುತ್ತದೆ.
ಸಂಸದರಾಗಿ ರಾಜ್ಯಕ್ಕೆ ಉತ್ತಮ ಸಲಹೆ ಕೊಡಿ
ಈವರೆಗೆ ಚುನಾವಣಾ ಪ್ರಚಾರಗಳಲ್ಲಿ, ರ್ಯಾಲಿಗಳಲ್ಲಿ ಬ್ಯುಸಿ ಇದ್ದು, ಈಗ ಬೆಂಗಳೂರು ವಾರ್ ರೂಂ ಸಮಸ್ಯೆ ಬಗ್ಗೆ ಹೇಳುವುದಕ್ಕೆ ಬಂದಿದ್ದೀರಿ. ಒಂದು ಸಮಾಜದ ಬಗ್ಗೆ ದೂರುವ ಮೊದಲು, ಎಷ್ಟು ಸಮಾಜಮುಖಿ ಕೆಲಸ ಮಾಡುತ್ತಿದ್ದೇವೆ ಎಂಬುದನ್ನು ನೋಡಿ ಎಂದು ಪ್ರಶ್ನಿಸಿದರು.
ಮರ್ಸಿ ಫೌಂಡೇಶನ್ನ ಸಮಾಜಮುಖಿ ಕೆಲಸಗಳು
ಆಲ್ ಮೈಟಿ ಸಂಘಟನೆ ಈಗಾಗಲೇ ಹಜ್ ಭವನ ಕ್ವಾರಂಟೈನ್ ಸೆಂಟರ್ ಆಗಿದೆ. ಶೇ 90ರಷ್ಟು ಮುಸ್ಲಿಂಮೇತರ ಜನ ಕೋವಿಡ್ ಚಿಕಿತ್ಸೆ ಈಗಾಗಲೇ ಪಡೆಯುತ್ತಿದ್ದಾರೆ. ಇದೀಗ ಟ್ಯಾನರಿ ರಸ್ತೆ ಈದ್ಗಾ ಚೌಟರಿಯನ್ನು ಕೊರೊನಾ ಕ್ಲಿನಿಕ್ ಮಾಡಿ, 1 ಟನ್ ಆಕ್ಸಿಜನ್ ವ್ಯವಸ್ಥೆ ಮಾಡಲಾಗ್ತಿದೆ ಎಂದರು.
ಆರ್. ಎಸ್ .ಎಸ್ ಮುಖಂಡರೊಬ್ಬರ ಅಂತ್ಯ ಸಂಸ್ಕಾರ ಮಾಡಿದ್ದೇವೆ
ಒಬ್ಬರಿಂದ ತಪ್ಪಾಗಿದೆ ಎಂದು ಇಡೀ ಸಮುದಾಯವನ್ನು ದೂಷಿಸುವುದು ಸರಿಯಲ್ಲ. ಇನ್ನು ಕೋವಿಡ್ ಮೊದಲನೇ ಅಲೆಗೆ ಸೋಂಕಿನಿಂದ ಸಾವನ್ನಪ್ಪಿದ್ದ ಆರ್. ಎಸ್. ಎಸ್ ಮುಖಂಡರೊಬ್ಬರನ್ನು ಕೆಂಗೇರಿ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಸಿ, ಬೂದಿ ತಂದುಕೊಟ್ಟು, ಮನೆಯ ಸುತ್ತಲೂ ಸ್ಯಾನಿಟೈಸ್ ಮಾಡಲಾಗಿದೆ. ಅವರ ಮಡದಿ, ಮಗ ಪಾಸಿಟಿವ್ ಇದ್ದಾಗ, ತಮ್ಮ ಕೈಲಾದ ಸಹಾಯ ಮಾಡಿದ್ದೆ ಎಂದು ಸಯ್ಯದ್ ತಿಳಿಸಿದರು.