ಕರ್ನಾಟಕ

karnataka

ETV Bharat / briefs

ಪಾಕಿಸ್ತಾನ ಸೇರಿದಂತೆ 14 ರಾಷ್ಟ್ರಗಳಲ್ಲಿ ಮೆಚ್ಚುಗೆ ಕಂಡ 'ಮೇಜರ್'..!​ - Major Movie Record It is trending in 14 countries including Pakistan

ಅಡವಿಶೇಷ್​ ಅಭಿನಯದ 'ಮೇಜರ್'​ ಚಿತ್ರವು ಪಾಕಿಸ್ತಾನ ಸೇರಿದಂತೆ 14 ದೇಶಗಳ ಟಾಪ್​ 10 ಸಿನೆಮಾಗಳ ಪೈಕಿ ಒಂದಾಗಿದೆ ಎಂದು ನೆಟ್​ಫ್ಲಿಕ್ಸ್​​ ತಿಳಿಸಿದೆ.

major film
ಮೇಜರ್ ಚಿತ್ರ

By

Published : Jul 16, 2022, 12:27 PM IST

Updated : Jul 17, 2022, 9:10 AM IST

ಅಡವಿಶೇಷ್​ ಅಭಿನಯದ 'ಮೇಜರ್'​ ಚಿತ್ರ ಕಳೆದ ತಿಂಗಳು ಜೂನ್​ 3ರಂದು ವಿಶ್ವಾದ್ಯಂತ 3 ಭಾಷೆಗಳಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. 26/11 ಮುಂಬೈನ ತಾಜ್ ಹೋಟೆಲ್​​​ ಮೇಲಿನ ಭಯೋತ್ಪಾದಕ ​ದಾಳಿಯಲ್ಲಿ ವೀರ ಮರಣ ಹೊಂದಿದ ಮೇಜರ್​ ಸಂದೀಪ್​ ಉನ್ನಿಕೃಷ್ಣನ್​ ಅವರ ಕುರಿತಾದ ಸಿನೆಮಾ ಇದಾಗಿದೆ.

ಜುಲೈ 3ರಂದು ಒಟಿಟಿ ವೇದಿಕೆ ನೆಟ್​ಪ್ಲಿಕ್ಸ್​​ನಲ್ಲಿ​ ಈ ಬಹುನಿರೀಕ್ಷಿತ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಇದೀಗ ನೆಟ್​ಫ್ಲಿಕ್ಸ್​ನಲ್ಲಿ ಸಿನೆಮಾವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸುವ ಮೂಲಕ ಉತ್ತಮ ರೆಸ್ಪಾನ್ಸ್​ ದೊರೆತಿದೆ.

ಮೇಜರ್ ಚಿತ್ರ ಪಾಕಿಸ್ತಾನ ಸೇರಿದಂತೆ ಬಹ್ರೇನ್, ಬಾಂಗ್ಲಾದೇಶ, ಕುವೈತ್, ಮಲೇಷ್ಯಾ, ಮಾಲ್ಡೀವ್ಸ್, ಓಮನ್, ಪಾಕಿಸ್ತಾನ, ಕತಾರ್, ಸಿಂಗಾಪುರ, ಶ್ರೀಲಂಕಾ ಮತ್ತು ಯುಎಇಗಳಲ್ಲಿ ಟಾಪ್​ 10 ಟ್ರೆಂಡಿಂಗ್​ ಸಿನೆಮಾಗಳ ಪಟ್ಟಿಯಲ್ಲಿ ಒಂದಾಗಿದೆ. ಅಲ್ಲದೆ, ಭಾರತ, ಮಾರಿಷಸ್, ನೈಜಿರಿಯಾಗಳಲ್ಲಿಯೂ ಚಿತ್ರ ಅಗ್ರಸ್ಥಾನದಲ್ಲಿದ್ದು, ಪಾಕಿಸ್ತಾನದಲ್ಲಿಯೂ ಹೆಚ್ಚಿನ ವೀಕ್ಷಣೆ ಕಾಣುತ್ತಿದೆ ಎಂದು ನೆಟ್​ಫ್ಲಿಕ್ಸ್​ ಸಂಸ್ಥೆ ತಿಳಿಸಿದೆ.

ಚಿತ್ರದ ಯಶಸ್ವಿ ಕುರಿತು ಮಾತನಾಡಿರುವ ನಟ ಅಡವಿಶೇಷ್,​ ವೀಕ್ಷಕರ ತೋರುತ್ತಿರುವ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಇದು ನಿಜಕ್ಕೂ ನಾವು ಹೆಮ್ಮೆ ಪಡುವ ಸಂದರ್ಭ. ಈ ಚಿತ್ರ ಯಾವಾಗಲೂ ವಿಶೇಷವಾಗಿರುತ್ತದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ.

ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಸಾಯಿ ಮಂಜ್ರೇಕರ್, ಸೋಭಿತಾ ಧೂಳಿಪಳ್ಳ, ರೇವತಿ, ಪ್ರಕಾಶ್ರಾಜ್ ಮತ್ತು ಮುರಳಿ ಶರ್ಮಾ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಸೂಪರ್ ಸ್ಟಾರ್ ಮಹೇಶ್ ಬಾಬು ನಿರ್ಮಾಣದ ಪಾಲುದಾರರಾಗಿದ್ದಾರೆ.

ಇದನ್ನೂ ಓದಿ:39ನೇ ಹುಟ್ಟು ಹಬ್ಬ: ಮಾಲ್ಡೀವ್ಸ್‌ಗೆ ಹಾರಿದ ಕತ್ರಿನಾ ಕೈಫ್-ವಿಕ್ಕಿ ಕೌಶಲ್

Last Updated : Jul 17, 2022, 9:10 AM IST

ABOUT THE AUTHOR

...view details