ಬೆಂಗಳೂರು:ಜಮೀನು ವಿವಾದ ಹಿನ್ನೆಲೆಯಲ್ಲಿ ನಟ ಮದನ್ ಪಟೇಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಗೀತಾ ಹಾಗೂ ಮಂಜುನಾಥ್ ಎಂಬುವವರಿಂದ ಬಿಡಿಎ ಸೈಟ್ ಖರೀದಿ ಮಾಡಿದ್ದರು.
ಜೀವ ಬೆದರಿಕೆ ಹಿನ್ನೆಲೆ: ಪೊಲೀಸ್ ಠಾಣೆ ಮೆಟ್ಟಿಲೇರಿದ ನಟ ಮದನ್ ಪಟೇಲ್ - KN_BNG_03_6_MADAN_BHAVYA_7204498
ಜಮೀನು ವಿವಾದ ಹಿನ್ನೆಲೆಯಲ್ಲಿ ನಟ ಮದನ್ ಪಟೇಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಟ ಮದನ್ ಪಟೇಲ್
ಈ ಸೈಟ್ ಖರೀದಿ ಮಾಡುವಾಗ ಮದನ್ ಜೊತೆ ಮಗ ಮಯೂರ್ ಪಟೇಲ್, ಪತ್ನಿ ರೇಖಾ ಕೂಡ ಇದ್ದರು. ಆದರೆ, ಇತ್ತೀಚಿಗೆ ಮದನ್ ದೊಮ್ಮಲೂರು ಬಳಿ ಕಟ್ಟಡ ನಿರ್ಮಾಣ ಮಾಡ್ತಿದ್ದ ವೇಳೆ ಗೀತಾ ಹಾಗೂ ಮಂಜುನಾಥ್ ಜೊತೆ ಕೆಲ ಸಹಚರರು ಮದನ್ ಪಟೇಲ್ಗೆ ಜೀವ ಬೆದರಿಕೆ ಹಾಕಿದ್ದಾರೆ.
ಅಷ್ಟು ಮಾತ್ರವಲ್ಲದೇ ಕೆಲಸ ಮಾಡ್ತಿದ್ದ ಕಟ್ಟಡ ಕಾರ್ಮಿಕರಿಗೆ ಕೆಲಸ ಮಾಡದಂತೆ ಧಮ್ಕಿ ಹಾಕಿದ್ದಾರೆ. ಹೀಗಾಗಿ ಮೇಲೆ ತಮ್ಮ ಮೇಲೆ ಗೀತಾ ಹಾಗೂ ಮಂಜುನಾಥ ಜೀವ ಬೆದರಿಕೆ ಹಾಕಿಸುತ್ತಿದ್ದಾರೆ ಎಂದು ಆರೋಪಿಸಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಈ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ.