ಕರ್ನಾಟಕ

karnataka

ETV Bharat / briefs

ಖಲೀಲ್​ ಮಾರಕ ದಾಳಿಗೆ ತತ್ತರಿಸಿದ ಕೋಲ್ಕತ್ತಾ.... ಲಿನ್​ ಅರ್ಧಶತಕದ ನೆರವಿನಿಂದ SRHಗೆ159 ರನ್​ಗಳ ಟಾರ್ಗೆಟ್​ - ಕೆಕೆಆರ್​

ಕ್ರಿಸ್​ ಲಿನ್​ ಅರ್ಧಶತಕದ ನೆರವಿನಿಂದ ಕೋಲ್ಕತ್ತಾ ನೈಟ್​ರೈಡರ್ಸ್​ 20 ಓವರ್​​ಗಳಲ್ಲಿ 158 ರನ್​ಗಳಿಸಿದೆ.

kkr

By

Published : Apr 21, 2019, 6:07 PM IST

ಹೈದರಾಬಾದ್​: ಸನ್​ರೈಸರ್ಸ್​ ಬೌಲರ್​ಗಳ ದಾಳಿಗೆ ಸಿಲುಕಿದ ಕೋಲ್ಕತ್ತಾ ನೈಟ್​ರೈಡರ್ಸ್​ ಉತ್ತಮ ಆರಂಭ ಪಡೆಯಿತಾದರು ಬೃಹತ್​ ಮೊತ್ತ ಕಲೆಹಾಕುವಲ್ಲಿ ವಿಫಲವಾಗಿ 158 ರನ್​ಗಳಿಸಲಷ್ಟೇ ಶಕ್ತವಾಯಿತು.

ಆರಂಭಿಕರಾಗಿ ಕಣಕ್ಕಿಳಿದಿದ್ದ ಕ್ರಿಸ್​ ಲಿನ್​ 47 ಬಾಲಿಗೆ 51 ರನ್​ಗಳಿಸಿದರು. ಮತ್ತೊಬ್ಬ ಆರಂಭಿಕ ಆಟಗಾರ ಸುನಿಲ್​ ನರೈನ್​ ಕೇವಲ 8 ಎಸೆತಗಳಲ್ಲಿ 25 ರನ್​ಗಳಿಸಿ ಔಟಾದರು. ಇವರಿಬ್ಬರನ್ನು ಬಿಟ್ಟರೆ ಇಂದೇ ಮೊದಲ ಪಂದ್ಯವಾಡಿದ ರಿಂಕು ಸಿಂಗ್​ 25 ಎಸೆತಗಳಲ್ಲಿ 30 ರನ್​ಗಳಿಸಿದರು. ರಸೆಲ್​ 9 ಎಸೆತಗಳಲ್ಲಿ 2 ಸಿಕ್ಸರ್​ ಸಿಡಿಸಿ ಇನ್ನು 7 ಎಸೆತಗಳಿರುವಾಗಲೆ ವಿಕೆಟ್​ ಒಪ್ಪಿಸಿ ಕೆಕೆಆರ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.

ಹೈದರಾಬಾದ್​ ಪರ ಖಲೀಲ್​ ಅಹ್ಮದ್​ 3,ಭುವನೇಶ್ವರ್​ 2, ಸಂದೀಪ್​ ಸರ್ಮಾ ಹಾಗೂ ರಶೀದ್​ ಖಾನ್​ ತಲಾ ಒಂದು ವಿಕೆಟ್​ ಪಡೆದರು.

ABOUT THE AUTHOR

...view details