ಕರ್ನಾಟಕ

karnataka

ETV Bharat / briefs

ರಾಜಧಾನಿಯಲ್ಲಿ ನಮೋ ಮತಬೇಟೆ: ರಾಜ್ಯದಲ್ಲಿಗ ಶೇ.20ರ ಸರ್ಕಾರ... ದೋಸ್ತಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ - ಭಾಷಣ

ಪ್ರಧಾನಿ ಮೋದಿ ಭಾಷಣ

By

Published : Apr 13, 2019, 7:42 PM IST

Updated : Apr 13, 2019, 9:06 PM IST

2019-04-13 19:00:36

ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಧಾನಿ ಮೋದಿ ಭಾಷಣ

ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭರ್ಜರಿ ಮತಬೇಟೆ ನಡೆಸಿದರು. ಈ ವೇಳೆ ಕಾಂಗ್ರೆಸ್​ ಸರ್ಕಾರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಮೋದಿ, ಯಾರೇ ತಪ್ಪು ಮಾಡಿದ್ರೂ ಶಿಕ್ಷೆ ಅನುಭವಿಸಲೇಬೇಕು ಎಂದು ಹೇಳಿದರು. 

ಕರ್ನಾಟದಲ್ಲಿಗ ಇಬ್ಬರು ಸಿಎಂಗಳಿದ್ದು, ಓರ್ವ ಸೂಪರ್ ಸಿಎಂ,ರಿಮೋಟ್​ ಕಂಟ್ರೋಲ್​ ಸಿಎಂ, ಕಾಂಗ್ರೆಸ್​ ಸರ್ಕಾರವಿದ್ದಾಗ ಶೇ.10ರ ಸರ್ಕಾರವಾಗಿತ್ತು. ಇದೀಗ ಶೇ.20ರ ಸರ್ಕಾರವಾಗಿದೆ. ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದಿಂದ ನಿಮ್ಮನ್ನೆಲ್ಲ ಮುಕ್ತಗೊಳಿಸಬೇಕಾಗಿದ್ದು, ಅದಕ್ಕೆ ನಿಮ್ಮ ಮತದಾನದ  ಅವಶ್ಯಕತೆ ಇದೆ ಎಂದರು

ಇದೇ ವೇಳೆ ಕಾಂಗ್ರೆಸ್​ ಪ್ರಣಾಳಿಕೆ ವಿರುದ್ದ ಹರಿಹಾಯ್ದ ಮೋದಿ, ಅದೊಂದು ಸುಳ್ಳಿನ ಪತ್ರ. ಆಪತ್ರದ ಮೂಲಕ ದೇಶದ ಜನರ ಹಾದಿ ತಪ್ಪಿಸುತ್ತಿದೆ. ಜತೆಗೆ ವೋಟ್​ ಬ್ಯಾಂಕ್​ ರಾಜಕಾರಣ ಮಾಡುತ್ತಿದೆ ಎಂದರು.

ಪ್ರಧಾನಿ ಮೋದಿ ಭಾಷಣದ ಪ್ರಮುಖಾಂಶ

  • ಮೈ ಭಿ ಚೌಕಿದಾರ್​, ನನ್ನ ಜೊತೆಯಲ್ಲಿ ಹೇಳಿ, ಎಲ್ಲರೂ ಚೌಕಿದಾರ್​
  • ನಗರ ನಗರ, ಹಿರಿಯರೂ ಕೂಡ, ತಾಯಿ, ಅಕ್ಕ,ತಂಗಿ, ಆಳುವ ಭೂಮಿಯಲ್ಲೂ, ದೇಶದ ಎಲ್ಲ ಗಡಿಯಲ್ಲೂ, 
  • ಡಾಕ್ಟರ್​, ಜರ್ನಲಿಸ್ಟ್​,ರೈತ-ಕಾರ್ಮಿಕರು, ವಕೀಲರೂ ಕೂಡ ಚೌಕಿದಾರ್​​
  • ಚೌಕಿದಾರ್​ ಸರಿಯಾದ ರಸ್ತೆಯಲ್ಲೇ ಸಾಗುತ್ತಿದ್ದು, ನಿಮಗಾಗಿ ಕೆಲಸ ಮಾಡುತ್ತಿದ್ದಾನೆ
  • ಬೆಂಗಳೂರಿನ ಅಭಿವೃದ್ಧಿಗಾಗಿ ಬಿಜೆಪಿ ಸರ್ಕಾರ ಹೆಚ್ಚು ಒತ್ತು ನೀಡಿದೆ.
  • 10 ಪರ್ಸೆಂಟ್​ ಸರ್ಕಾರ ಇದೀಗ 20 ಪರ್ಸೆಂಟ್​ ಸರ್ಕಾರವಾಗಿದೆ
  • ಕಾಂಗ್ರೆಸ್​ ಕೇವಲ ವೋಟ್​ ರಾಜಕಾರಣ ಮಾಡುತ್ತಿದೆ
  • ಮತದಾನದ ದಿನ ನಿವೆಲ್ಲರೂ ಸೇರಿ ಅತಿ ಹೆಚ್ಚು ಹೆಚ್ಚು ಮತದಾನ ಮಾಡಬೇಕು
  • ರಾಜ್ಯದಿಂದ ನನಗೆ ಹೆಚ್ಚಿನ ಸಂಸದರ ಅವಶ್ಯಕತೆ ಇದೆ. ಅದು ನಿಮ್ಮಿಂದ ಮಾತ್ರ ಸಾಧ್ಯ
  • ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರದಿಂದ ನಿಮ್ಮನ್ನೆಲ್ಲ ಮುಕ್ತಗೊಳಿಸಬೇಕಾಗಿದೆ
  • ದೇಶದ ಅನೇಕ ಯುವಜನತೆ ಡಿಜಿಟಲ್​ ಇಂಡಿಯಾದ ಲಾಭ ಪಡೆದುಕೊಂಡಿದ್ದಾರೆ.
  • ಮಧ್ಯಮ ವರ್ಗದವರಿಗೆ ಕಾಂಗ್ರೆಸ್​ ಅನೇಕ ತೊಂದರೆ ನೀಡಿದೆ
  • ಮಧ್ಯಮ ವರ್ಗಕ್ಕಾಗಿ ಬಜೆಟ್​ನಲ್ಲಿ 5ಲಕ್ಷದವರೆಗೆ ತೆರಿಗೆ ಮುಕ್ತಗೊಳಿಸಿದ್ದೇವೆ
  • 4ನೇ ಉದ್ಯೋಗ ಕ್ರಾಂತಿ ಇದೀಗ ಡಿಜಿಟಲ್​ ಇಂಡಿಯಾದಿಂದ ಆರಂಭವಾಗಿದೆ
  • 10 ವರ್ಷಗಳ ಹಿಂದೆ ವೀರ ಯೋಧರು ಬುಲೆಟ್​ ಪ್ರೂಫ್​​​ ಜಾಕೆಟ್​ ಕೇಳಿದ್ದರು, ಆದರೆ ನೀಡಿದ್ದು ನಮ್ಮ ಸರ್ಕಾರ
  • ಕೇರಳದಲ್ಲಿ ಅಯ್ಯಪ್ಪನ ಹೆಸರು ಹೇಳಿದರೆ ಜೈಲಿಗೆ ಹಾಕುತ್ತಾರೆ.
  • ಕೇರಳದಲ್ಲಿ ಶಬರಿಮಲೆ, ಅಯ್ಯಪ್ಪನ ಹೆಸರು ಹೇಳದಂತೆ ಫರ್ಮಾನು ಹೊರಡಿಸಿದ್ದಾರೆ.
  • ಕಾಂಗ್ರೆಸ್​ ಮೇಲೆ ಇಷ್ಟೊಂದು ವರ್ಷ ಭರವಸೆಯಿಟ್ಟು, ಎಲ್ಲವನ್ನೂ ಕಳೆದುಕೊಂಡಿದ್ದೀರಿ
  • ಕಾಂಗ್ರೆಸ್​ ಆಡಳಿತಕ್ಕೆ ಬಂದರೆ ದೇಶದ್ರೋಹದ ಕಾನೂನು ತೆಗೆದು ಹಾಕುತ್ತದೆಯಂತೆ
  • ತಂತ್ರಜ್ಞಾನದಲ್ಲಿ ಬೆಂಗಳೂರಿನ ಕೂಡುಗೆ ಅಪಾರ, ಅದಕ್ಕೆ ನೀವು ಹೆಮ್ಮೆ ಪಡಿ
  • 60 ವರ್ಷದಲ್ಲಿ ಎಲ್ಲವನ್ನು ಕಾಂಗ್ರೆಸ್​ ಲೂಟಿ ಮಾಡಿದೆ, ಆದರೆ ನಾವು ಅಭಿವೃದ್ಧಿಯತ್ತ ಸಾಗಿಸುತ್ತಿದ್ದೇವೆ
  • ಹೊಸ ಹೊಸ ತಂತ್ರಜ್ಞಾನಗಳು ದೇಶದಲ್ಲಿ ಲಗ್ಗೆಯಿಟ್ಟಿವೆ-ಮೋದಿ
  • ಇಡೀ ದೇಶವೇ ಇಂದು ಡಿಜಿಟಲ್​ ಇಂಡಿಯಾ ಆಗಿದೆ, ಇದು ಮೋದಿ ಡಿಜಿಟಲ್​ ಭಾರತ
  • ಕಾಂಗ್ರೆಸ್​ ಆಡಳಿತವಿದ್ದಾಗ 1ಜಿಬಿಗೆ 300ರೂ. ನೀಡ್ತಿದ್ದೀರಿ, ಇದೀಗ ಕೇವಲ 5ರೂ ಇದೆ
  • ರಾಷ್ಟ್ರೀಯ ಯುದ್ಧ ಸ್ಮಾರಕ ನಿರ್ಮಿಸಿರುವ ಶ್ರೇಯ ನಮ್ಮದು, ನೀವು ದೆಹಲಿಗೆ ಹೋದ್ರೆ ಭೇಟಿ ನೀಡಿ
  • ಬುಲೆಟ್​ ಪ್ರೂಫ್​ ಜಾಕೆಟ್​ ಸಹ ನೀಡಲು ಕಾಂಗ್ರೆಸ್​ಗೆ ಆಗಿದ್ದಿಲ್ಲ. ನಾವು ಅದನ್ನ ಮಾಡಿ ತೋರಿಸಿದ್ದೇವೆ
  • ಮೋದಿ ಸೇನೆಯ ಹೆಸರು ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ. ಒನ್​ ರ್ಯಾಂಕ್​ ಒನ್​ ಪೆನ್ಸನ್​ ನೀಡಿದ್ದು ಯಾರು?
  • ಕಳೆದ 40 ವರ್ಷಗಳಿಂದ ಒನ್​ ರ್ಯಾಂಕ್​ ಒನ್ ಪೆನ್ಸನ್​ಗಾಗಿ ಯೋಧರು ಹೋರಾಟ ನಡೆಸಿದ್ದರು.
  • ಅದಕ್ಕೆ ಮೋದಿ ಸರ್ಕಾರ ಬಂದ ಮೇಲೆ ಅನುಮೋದನೆ ನೀಡಲಾಗಿದೆ
  • ಕಳೆದ ಐದು ವರ್ಷಗಳಲ್ಲಿ ನಿಮ್ಮ ಸುರಕ್ಷತೆಗಾಗಿ ಕ್ರಮ ಕೈಗೊಳ್ಳಲಾಗಿದೆ
  • ಒಂದು ಜಮ್ಮು-ಕಾಶ್ಮೀರ ಪ್ರಧಾನಿ, ಮತ್ತೊಬ್ಬರು ದೆಹಲಿ ಪ್ರಧಾನಿ ದೇಶಕ್ಕೆ ಬೇಕಾ?
  • ಜಮ್ಮು-ಕಾಶ್ಮೀರದಿಂದ ಸೇನೆಯಲ್ಲಿ ಹೊರಗಿಡುವುದಾಗಿ ಕಾಂಗ್ರೆಸ್​ ಹೇಳಿದೆ
  • ದೇಶದ ಭವಿಷ್ಯದ ವಿಚಾರ, ಹಾಗೂ ನಿಮ್ಮ ಮಕ್ಕಳ ಭವಿಷ್ಯದ ಕುರಿತು ವಿಚಾರ ಮಾಡಿ
  • ಈ ಹಿಂದೆ ರಷ್ಯಾ ಮಾತ್ರ ನಮ್ಮೊಂದಿಗೆ ಇರುತ್ತಿತ್ತು. ಆದರೆ ಇಡೀ ವಿಶ್ವವೇ ನಮ್ಮ ಜೊತೆಗಿದೆ
  • ಪಾಕ್​ನೊಂದಿಗೆ ಕೇವಲ ಚೀನಾ ಮಾತ್ರ ಇದೆ
  • ಪಾಕಿಸ್ತಾನದಿಂದ ಹಣ ಪಡೆದು, ಅವರಿಗೆ ಸಹಾಯ ಮಾಡುವವರ ಜತೆ ಕಾಂಗ್ರೆಸ್​ ಸೇರಿಕೊಂಡಿದೆ
  • ಜಮ್ಮು-ಕಾಶ್ಮೀರದಲ್ಲಿ ನಮ್ಮ ಯೋಧರಿಗೆ ಕಲ್ಲಿನಿಂದ ಹೊಡೆಯುತ್ತಾರೆ.
  • ದೇಶದಲ್ಲಿ ಇಬ್ಬರ ಪ್ರಧಾನಿಗಳ ಅವಶ್ಯತೆ ಇದೆ ಎಂದು ಕಾಶ್ಮೀರ ಮುಖಂಡ ಹೇಳ್ತಾರೆ
  • ಜಮ್ಮು-ಕಾಶ್ಮೀರ ಸುಲಭವಾಗಿ ಪಾಕಿಸ್ತಾನಕ್ಕೆ ಹೋಗಲು ಬಿಡ್ತೀರಾ? 
  • ಕರ್ನಾಟಕದ ಅನೇಕ ಯೋಧರು ಕಾಶ್ಮೀರಕ್ಕಾಗಿ ರಕ್ತ ಹರಿಸಿದ್ದಾರೆ.
  • ಪಂಡಿತ್​ ನೆಹರು ಜಮ್ಮು-ಕಾಶ್ಮೀರ ಸಮಸ್ಯೆ ಉದ್ಭವಿಸಿ ಹೋಗಿದ್ದಾರೆ. ಆದರೆ ಇಂದು ದೇಶವೇ ತೊಂದರೆ ಅನುಭವಿಸುತ್ತಿದೆ
  • ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಕಾಶ್ಮೀರದಿಂದ ಯೋಧರನ್ನೇ ತೆಗೆದು ಹಾಕುತ್ತದೆ
  • ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಅನೇಕ ಸುಳ್ಳು ಭರವಸೆ ನೀಡಿದೆ, 
  • ಅವರ ಸರ್ಕಾರ ಬಂದರೆ, ಹೊಸ ಹೊಸ ನೀತಿ ಜಾರಿಗೆ ತರುವುದಾಗಿ ಹೇಳಿದೆ
  • ಅವರು ನೀಡಿರುವ ಪ್ರಣಾಳಿಕೆಯನ್ನ ನಾವು ತುಂಬಾ ಗಂಭೀರವಾಗಿ ತೆಗೆದುಕೊಳ್ಳುಬೇಕು
  • ಕಾಂಗ್ರೆಸ್​ ಸ್ಟ್ರೈಕ್​ಗಳನ್ನ ಸಹಿಸಿಕೊಳ್ಳುತ್ತಿಲ್ಲ.
  • ವಿಶ್ವಕ್ಕೆ ಇಂದು ನಾವು ಏನು ಎಂದು ತೋರಿಸಿಕೊಟ್ಟಿದ್ದೇವೆ.
  • ನಾವು ಸರ್ಜಿಕಲ್​ ಸ್ಟ್ರೈಕ್,ಏರ್​ಸ್ಟ್ರೈಕ್​ ಹಾಗೂ ಸೆಟ್​ಲೈಟ್​ನಲ್ಲಿ ದಾಳಿ ನಡೆಸಿದ್ದೇವೆ. 
  • ವಿಶ್ವದ ಎಲ್ಲ ದೇಶಗಳು ಇದೀಗ ನಮ್ಮೊಂದಿಗೆ ಇವೆ. 
  • ಕಾಂಗ್ರೆಸ್​ ಸರ್ಜಿಕಲ್​ ಸ್ಟ್ರೇಕ್​ ನಡೆಸಿದ್ದೇವೆಂದು ಹೇಳಿದೆ. ಆದರೆ ಅದನ್ನ ಮುಚ್ಚಿಟ್ಟಿದ್ಯಾಕೆ!?
  • ಬಯೋತ್ಪಾದಕರು ಅವಿತಿದ್ದ ಜಾಗಕ್ಕೆ ತೆರಳಿ ಸರ್ಜಿಕಲ್​ ಸ್ಟ್ರೈಕ್​ ಹಾಗೂ ಏರ್​ಸ್ಟ್ರೈಕ್​ ನಡೆಸಿದ್ದೇವೆ
  • 2019ರಲ್ಲಿ ನನಗೆ ನಿಮ್ಮ ಆಶೀರ್ವಾದ ಬೇಕಾಗಿದೆ, ದೇಶದಲ್ಲಿ ಮತ್ತಷ್ಟು ಬದಲಾವಣೆ ಬರಲಿದೆ
  • ರಿಮೋಟ್​ ಸರ್ಕಾರವಿದ್ದಾಗ ದೇಶದಲ್ಲಿ ಬಾಂಬ್​ ಸ್ಫೋಟಗೊಂಡಿವೆ, ಚೌಕಿದಾರ್​ ಆಡಳಿತದಲ್ಲಿ ಅಂತಹ ಸ್ಫೋಟ ಸಂಭವಿಸಿಲ್ಲ
  • 2014ರಲ್ಲಿ ನೀವು ನನಗೆ ಕೊಟ್ಟ ಜವಾಬ್ದಾರಿಯನ್ನ ಸರಿಯಾಗಿ ನಿರ್ವಹಿಸಿರುವೆ, ಅದರ ಫಲವೇ ಈ ಬದಲಾವಣೆ
  • ನಾನು ಕಳೆದ ಐದು ವರ್ಷದಲ್ಲಿ ಮಾಡಿರುವೆ ಅದಕ್ಕೆ ನೀವೇ ಮುಖ್ಯ ಕಾರಣ
  • ಐದು ವರ್ಷದ ಹಿಂದೆ ನಿವೆಲ್ಲರೂ ಒಂದು ಬಹುಮತದ ಸರ್ಕಾರ ನೀಡಿದ್ದೀರಿ, ಅದರ ಫಲವೇ ಈ ಅಭಿವೃದ್ಧಿಯ ಕೆಲಸ
  • ಐದು ವರ್ಷ ನಾನು ಯಾವುದೇ ಕೆಲಸ ಮಾಡಿಲ್ಲ, ನಿಮ್ಮ ವೋಟಿನ ತಾಕ್ಕತ್ತು ಅದನ್ನೆಲ್ಲ ಮಾಡಿಸಿದೆ
  • ಚೌಕಿದಾರ್​ನ ಐದು ವರ್ಷದ ಕೆಲಸದಲ್ಲಿ ಯಾವುದಾದರೂ ಬಾಂಬ್​ ಸ್ಫೋಟ ದಾಳಿ ಆಗಿವೆಯಾ?
  • ನಿಮಗೆ ಬಿ.ಆರ್​ ಅಂಬೇಡ್ಕರ್ ದಿನಾಚರಣೆಯ ಶುಭಾಶಯಗಳು
  • ಚಿಕ್ಕಬಳ್ಳಾಪೂರ, ಕೋಲಾರದ ಜನತೆಗೆ ನಮ್ಮ ನಮಸ್ಕಾರಗಳು
  • ಕೇಂದ್ರ ಸಚಿವರಾಗಿದ್ದ ದಿವಂಗತ ಅನಂತಕುಮಾರ್ ಹಾಗೂ ಶಾಸಕ ಬಿ ಎನ್​ ವಿಜಯ ಕುಮಾರ್​ ಅವರಿಗೆ ಶ್ರದ್ಧಾಂಜಲಿ ಅರ್ಪಣೆ 
  • ಪ್ರಧಾನಿ ನರೇಂದ್ರ ಮೋದಿ ಭಾಷಣ ಆರಂಭ 
  • ಇಲ್ಲೂ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ 
  • ಬೆಂಗಳೂರು ದಕ್ಷಿಣ, ಕೇಂದ್ರ, ಉತ್ತರ ಹಾಗೂ ಗ್ರಾಮಂತರ ಜನರಿಗೆ ನಮಸ್ಕಾರ ಹೇಳಿದ ಪ್ರಧಾನಿ 
  • ಎಸ್​ ಎಂ ಕೃಷ್ಣ ಅವರ ಹೆಸರು ಹೇಳಿದ ಮೋದಿ 
  • ಸಮಾರಂಭಕ್ಕೆ ಆಗಮಿಸಿದ ಮತದಾರರಿಗೆ ಧನ್ಯವಾದ ಸಮರ್ಪಿಸಿದ ನರೇಂದ್ರ ಮೋದಿ 
  • ನಾಡಪ್ರಭು ಕೆಂಪೇಗೌಡ ಅವರನ್ನ ಸ್ಮರಿಸಿ, ಅಭಿವೃದ್ಧಿಗೆ ಕೊಟ್ಟ ಕೊಡುಗೆ ಸ್ಮರಣೆ
  • 60 ವರ್ಷ ಮೀರಿದ ರೈತರಿಗೆ ಪಿಂಚಣಿ, ಬಡ್ಡಿ ರಹಿತ ಸಾಲ 
  • ಹೀಗೇ ಸಾಲು ಸಾಲು ಯೋಜನೆ ಘೋಷಣೆ ಮಾಡಿದೆ ಬಿಜೆಪಿ 
  • ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಲು ಮೋದಿ ನಿರ್ಧರಿಸಿದ್ದಾರೆ
  • ಆರ್ಟಿಕಲ್​ 370 ರದ್ದು ಮಾಡುವ ತೀರ್ಮಾನವನ್ನ ಕೇಂದ್ರ ಕೈಗೊಳ್ಳಲಿದೆ
  • ನಾವು ರಾಜ್ಯದಲ್ಲಿ 22 ಸ್ಥಾನ ಗೆಲ್ಲುತ್ತೇವೆ :ಮಾಜಿ ಮುಖ್ಯಮಂತ್ರಿ  ಬಿಎಸ್​​ವೈ ವಿಶ್ವಾಸ 
  • ಕುಮಾರಸ್ವಾಮಿ ವಿರುದ್ಧ ಬಿಎಸ್​ವೈ ವಾಗ್ದಾಳಿ,ಕೆಆರ್​ಎಸ್​ನಲ್ಲಿ ಸಿಎಂರಿಂದ ಪತ್ರಕರ್ತರಿಗೆ ಬೆದರಿಕೆ 
  • ಕುಮಾರಸ್ವಾಮಿ ತಲೆ ತಿರುಗಿ ಮಾತನಾಡುತ್ತಿದ್ದಾರೆ,ಜೆಡಿಎಸ್​ ಕಾಂಗ್ರೆಸ್​ ನಡುವೆ ಬಿಗ್​ ಫೈಟ್​ ನಡೆಯುತ್ತಿದೆ
  • ಸಮ್ಮಿಶ್ರ ಸರ್ಕಾರದ ಅಧಿಕಾರದ ಅವಧಿ ಮುಗಿಯುತ್ತಿದೆ:  ಬಿಎಸ್​ವೈ 
  • ಈ ದೇಶದಲ್ಲಿ ಮೊದಲ ಬಾರಿಗೆ ಹಿಂದುಳಿದ ವರ್ಗದ ವ್ಯಕ್ತಿ ಪ್ರಧಾನಿ ಆಗಿದ್ದಾರೆ
  • ವಿರೋಧ ಪಕ್ಷಗಳ ಟೀಕೆಗೆ ಉತ್ತರವೇ ಪ್ರಧಾನಿ ನರೇಂದ್ರ ಮೋದಿ  
  • ಅಲ್ಪಸಂಖ್ಯಾತ ಬಂಧುಗಳೇ ಅಬ್ದುಲ್​ ಕಲಾಂ ಅವರನ್ನ ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಪಕ್ಷ
  • ಕೇಂದ್ರದಲ್ಲಿ ಈ ಸಲವೂ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಕಾರಕ್ಕೆ ಬರಲಿದೆ
  • ದೇಶದ ಉದ್ದಗಲಕ್ಕೂ ಮೋದಿ ಮೋದಿ ಎಂಬ ಕೂಗು ಕೇಳಿ ಬರುತ್ತಿದೆ
  • ದೇಶಾದ್ಯಂತ 300ಕ್ಕೂ ಹೆಚ್ಚು ಸ್ಥಾನ ಹಾಗೂ ರಾಜ್ಯದಲ್ಲಿ 22 ಕ್ಷೇತ್ರಗಲ್ಲಿ ಬಿಜೆಪಿ ಗೆಲ್ಲಲ್ಲಿದೆ
  • ಸಭೆಯಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿಎಸ್​ ಯಡಿಯೂರಪ್ಪ ಭಾಷಣ
  • ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ವೈ ಸೇರಿ ಅನೇಕ ಮುಖಂಡರು ಭಾಗಿ
  • ಮುನಿಸು ಮರೆತು ಮೋದಿ ಸಭೆಯಲ್ಲಿ ಭಾಗಿಯಾದ ತೇಜಸ್ವಿನಿ
  • ರಾಜ್ಯ ಬಿಜೆಪಿ ಘಟಕದಿಂದ ಪ್ರಧಾನಿ ಮೋದಿಗೆ ಬೆಳ್ಳಿ ಕಮಲ ಉಡುಗೊರೆ
  • ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಧಾನಿ ಮೋದಿಗೆ ಸನ್ಮಾನ
  • ಲಕ್ಷಾಂತರ ಸಂಖ್ಯೆಯಲ್ಲಿ ನೆರೆದ ಬಿಜೆಪಿ ಕಾರ್ಯಕರ್ತರು
  • ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜನೆಗೊಂಡಿರುವ ಬೃಹತ್​ ಸಮಾವೇಶ
  • ಬೆಂಗಳೂರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ,ಕೆಐಎಎಲ್​ ವಿಮಾನ ನಿಲ್ದಾಣದಲ್ಲಿ ಆಗಮನ
Last Updated : Apr 13, 2019, 9:06 PM IST

ABOUT THE AUTHOR

...view details