ಚಾಮರಾಜನಗರ:ಲೋಕಸಮರದ ಬಳಿಕ ಜಿಲ್ಲೆಯ ಗುಂಡ್ಲುಪೇಟೆ, ಯಳಂದೂರು ಹಾಗೂ ಹನೂರಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಚಿತ್ರನಟ ಹಾಗೂ ನಿರ್ದೇಶಕ ಪ್ರೇಮ್ ಹನೂರಿನ ಬೆಟ್ಟಳ್ಳಿ ಮಾರಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ, ಪಟ್ಟಣ ಪಂಚಾಯಿತಿಯ 8 ಹಾಗೂ 9ನೇ ವಾರ್ಡಿನ ಜೆಡಿಎಸ್ ಅಭ್ಯರ್ಥಿಗಳಾದ ಆನಂದ್ ಮತ್ತು ಮಹಾದೇವಸ್ವಾಮಿ ಪ್ರಚಾರ ಮಾಡಿದರು.
ಸ್ಥಳೀಯ ಸಂಸ್ಥೆಗಳ ಚುನಾವಣೆ... ಜೆಡಿಎಸ್ ಅಭ್ಯರ್ಥಿಗಳ ಪರ ಮತ ಯಾಚಿಸಿದ ಪ್ರೇಮ್ - Jogi, prem, hanur,mmhills, chnagar
ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿಗಳಿಗೆ ನಿರ್ದೇಶಕ ಪ್ರೇಮ್ ಶುಭ ಹಾರೈಸಿ, ಅವರ ಪರ ಮತಯಾಚನೆ ಮಾಡಿದರು.
ಪ್ರೇಮ್ ಅವರ ಮತಯಾಚನೆ
ಉತ್ತಮ ಅಭ್ಯರ್ಥಿಗಳು ಕಣಕ್ಕಳಿದಿದ್ದು, ಜೆಡಿಎಸ್ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಸೇರಿದ್ದ ಜನತೆಯಲ್ಲಿ ವಿನಂತಿಸಿಕೊಂಡರು. ಬಳಿಕ ಪ್ರೇಮ್ ಹಾಗೂ ರಕ್ಷಿತಾ ದಂಪತಿ ಮಲೆಮಹದೇಶ್ವರ ಬೆಟ್ಟಕ್ಕೆ ಪ್ರಯಾಣ ಬೆಳೆಸಿದರು ಎಂದು ಮೂಲಗಳು ತಿಳಿಸಿವೆ.