ಮಂಡ್ಯ: ಒಂದು ಕಾಲದ ಹುಚ್ಚು ನದಿ. ತೊರೆ ಬಂದರೆ ತನ್ನ ಅಕ್ಕ ಪಕ್ಕ ಇರೋದನ್ನೆಲ್ಲಾ ಸೆಳೆದುಕೊಂಡು ಹೋಗುತ್ತಿದ್ದಳು ಈ ಲೋಕಪಾವನಿ. ನೀರಿನ ಸೆಳೆತಕ್ಕೆ ರೈತರ ಬೆಳೆಗಳು ನಾಶವಾಗಿದ್ದೂ ಉಂಟು. ಆದರೆ ಈಗಿನ ಪರಿಸ್ಥಿತಿಯೇ ಬೇರೆ ಇದೆ.
ಲೋಕಪಾವನಿ ನದಿಯೇ ಒತ್ತುವರಿ... ಮೂಲ ಸ್ವರೂಪ ಕಳೆದುಕೊಂಡು ಹಳ್ಳದಂತಾದ ನದಿ! - ಒತ್ತುವರಿ
ಲೋಕದಿಂದಲೇ ಕಣ್ಮರೆ ಆಗುತ್ತಿರುವ ಲೋಕಪಾವನಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದಾಳೆ. ಬ್ರಿಟಿಷ್ ದಾಖಲೆ ಪ್ರಕಾರ ಸುಮಾರು 153 ಅಡಿಯಿಂದ 130 ಅಡಿಯ ಅಗಲವಾಗಿದ್ದ ಲೋಕಪಾವನಿ ಈಗ ಹೇಗಿದ್ದಾಳೆ ಎಂಬುದನ್ನ ಈ ಸ್ಟೋರಿ ನೋಡಿದರೆ ನಿಮಗೆ ಗೊತ್ತಾಗುತ್ತೆ.
153 ಅಡಿಯಿಂದ 140 ಅಡಿ ಅಗಲವಾಗಿದ್ದ ನದಿ ಈಗ ಕೇವಲ 30 ರಿಂದ 40 ಅಡಿಗೆ ಬಂದು ತಲುಪಿದೆ. ಕೆಲವು ಕಡೆ ನದಿಯ ಬಯಲೇ ಒತ್ತುವರಿಯಾಗಿದೆ. ನದಿ ಸಮೀಪದ ರೈತರು, ಭೂ ಮಾಫಿಯಾದವರು ನದಿಯನ್ನು ನುಂಗಿ ನೀರು ಕುಡಿದಿದ್ದರಿಂದಲೇ ನೀರೇ ಇಲ್ಲದಂತಾಗಿದೆ. ಅತ್ತ ಈ ನದಿ ತನ್ನ ಮೂಲ ಸ್ವರೂಪವನ್ನೇ ಕಳೆದುಕೊಂಡು ಬರಿದಾಗಿದ್ದಾಳೆ. ಇನ್ನು ಸಣ್ಣದಾಗಿ ಹಳ್ಳದಂತೆ ಕೆಲವು ಕಡೆ ಲೋಕಪಾವನಿ ನಿರ್ಮಾಣವಾಗಿದ್ದಾಳೆ. ಇದಕ್ಕೆ ಕಾರಣ ಭೂಮಿಯ ಮೇಲಿನ ವ್ಯಾಮೋಹವೇ ಅಂತಾರೆ ಇಲ್ಲಿನ ಸ್ಥಳೀಯರು.
ಮಳೆಗಾಲ ಆರಂಭವಾದ ಹಿನ್ನೆಲೆ ಕೆಲವು ಕಡೆ ನದಿಗೆ ಮಣ್ಣು ತುಂಬಿಸಿ ಸಮತಟ್ಟು ಮಾಡಲಾಗಿದೆ. ಕೆಲವರು ನದಿಯ ಮೇಲೆಯೇ ತೋಟವನ್ನು ಸೃಷ್ಟಿ ಮಾಡಿದ್ದಾರೆ. ಈಗಿನ ಪರಿಸ್ಥಿತಿ ನೋಡಿದರೆ ಮುಂದೆ ಇಲ್ಲಿ ನದಿ ಇತ್ತೇ ಎಂಬ ಪ್ರಶ್ನೆ ಹುಟ್ಟಿದರೂ ಆಶ್ಚರ್ಯವಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ನದಿಯ ಸಂರಕ್ಷಣೆಗೆ ಮುಂದಾಗಬೇಕಾಗಿದೆ. ನಾಶದ ಅಂಚಿನಲ್ಲಿರುವ ಲೋಕೆ ಪಾವನಿಯನ್ನ ಪಾವನಗೊಳಿಸುವ ಕೆಲಸ ಆಗಬೇಕು.