- ನಾನು ದೇಶವಾಸಿಗಳಿಗೆ ವಿಶ್ವಾಸ ನೀಡುತ್ತೇನೆ. ನೀವು ಈ ಫಕೀರನ ಜೋಳಿಗೆ ತುಂಬಿಸಿದ್ದೀರಾ.
- ತುಂಬಾ ನಿರೀಕ್ಷೆ ಇಟ್ಟುಕೊಂಡು ನನ್ನ ಶಕ್ತಿ ತುಂಬಿದ್ದೀರಿ ನನಗೆ ಗೊತ್ತಿದೆ.
- ನೀವು ನನಗೆ ಕೊಟ್ಟ ದಾಯಿತ್ವ, ಜವಾಬ್ದಾರಿಯನ್ನು ಅರ್ಥ ಮಾಡಿಕೊಂಡಿದ್ದೇನೆ.
- ಬರುವ ದಿನಗಳಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ. ಕೆಲಸ ಮಾಡುತ್ತಾ ಮಾಡುತ್ತಾ ತಪ್ಪುಗಳಾಗುತ್ತವೆ ನಿಜ
- ನನ್ನ ಶರೀರದ ಕಣಕಣವೂ ದೇಶವಾಸಿಗಳಿಗಾಗಿ ಅರ್ಪಣೆ
- ಈ ದೇಶದಲ್ಲೀಗ ಎರಡು ಜಾತಿಗಳು ಮಾತ್ರ ಉಳಿದಿವೆ. ಜಾತಿ ವಿಚಾರದಲ್ಲಿ ಆಟ ಆಡುವ ಜನರಿಗೆ ಇದು ದೊಡ್ಡ ಪಾಠವಾಗಿದೆ.ಒಂದು ಬಡತನ ಎರಡನೇದು ದೇಶವನ್ನು ಬಡತನದಿಂದ ಮುಕ್ತಗೊಳಿಸಲು ತಮ್ಮ ಕೈಲಾದಷ್ಟು ಕೊಡುಗೆ ನೀಡುವುದು. ಇದೇ ಎರಡು ಜಾತಿಗಳು.
- ಈ ಚುನಾವಣೆಯಲ್ಲಿ ಯಾವ ಪಕ್ಷ ಕೂಡಾ ಜಾತ್ಯತೀತತೆ ಹೆಸರಲ್ಲಿ ನಕಲಿ ವೇಷ ತೊಟ್ಟು ಎಲೆಕ್ಷನ್ ಎದುರಿಸುವ ಧೈರ್ಯ ಪ್ರದರ್ಶಿಸಿಲ್ಲ
- ಕಷ್ಟಪಟ್ಟು ದುಡಿದು ದೇಶದ ಅಭಿವೃದ್ದಿಗಾಗಿ ತೆರಿಗೆ ಕಟ್ಟುವ ಸಾಮಾನ್ಯ ಮಧ್ಯಮ ವರ್ಗದ ನಾಗರಿಕರಿಗೆ ಸಿಕ್ಕ ವಿಜಯ ಇದಾಗಿದೆ.
- ಇದು ದೇಶದ ಪರಿಶ್ರಮದಿಂದ ಕೆಲಸ ಮಾಡುತ್ತಿರುವ ಶ್ರಮಿಕರು, ಸಾಕಷ್ಟು ಆಸೆ, ಆಕಾಂಕ್ಷೆಗಳನ್ನು ಹೊಂದಿರುವ ಯುವಜನತೆಯ ವಿಜಯವಾಗಿದೆ. ಈ ವಿಜಯ ದೇಶದ ರೈತರ ವಿಜಯವಾಗಿದೆ.
- ಇವತ್ತು ನನಗೆ ಸ್ವಲ್ಪ ಆರೋಗ್ಯ ಸಮಸ್ಯೆ ಇತ್ತು, ಹಾಗಾಗಿ ನಾನು ಫಲಿತಾಂಶದ ಬಗ್ಗೆ ಗಮನ ಹರಿಸುವುದಕ್ಕೆ ಸಾಧ್ಯವಾಗಿರಲಿಲ್ಲ.
- ದೇಶದ ಕೋಟಿಗಟ್ಟಲೆ ಕಾರ್ಯಕರ್ತರಲ್ಲಿದ್ದಿದ್ದು ಒಂದೇ ಭಾರತ ಮಾತಾ ಕಿ ಜೈ ಅನ್ನುವ ಭಾವವಷ್ಟೇ.
- ದೇಶ ಸ್ವಾತಂತ್ರ್ಯಗೊಂಡ ನಂತರ ಈ ಬಾರಿ ಅತೀ ಹೆಚ್ಚು ಮತದಾನ ವಾಗಿತ್ತು.
- ಇಡೀ ವಿಶ್ವ ನಮ್ಮ ದೇಶದ ಪ್ರಜಾಪ್ರಭುತ್ವದ ಶಕ್ತಿಯನ್ನು ತಿಳಿದುಕೊಳ್ಳಬೇಕಿದೆ.
- ದೇಶದ 130 ಕೋಟಿ ಜನರು ಶ್ರೀಕೃಷ್ಣನ ರೂಪದಲ್ಲಿ ಉತ್ತರ ಕೊಟ್ಟಿದ್ದಾರೆ.
- ನಾನು ಹಸ್ತಿನಾಪುರದ ಶಕ್ತಿಯಾಗಿ ಹೋರಾಟ ನಡೆಸಿದ್ದೇನೆ.
- ಇವತ್ತು ಮಳೆರಾಯ ಕೂಡಾ ಸ್ವಯಂ ವಿಜಯೋತ್ಸವದಲ್ಲಿ ಭಾಗಿಯಾಗಿದ್ದಾನೆ.
- ನವ ಭಾರತಕ್ಕೋಸ್ಕರ ಜನರು ಈ ಜನಾದೇಶ ನೀಡಿದ್ದಾರೆ,
- ದೇಶದ 130 ಕೋಟಿ ಜನರಿಗೆ ತಲೆಬಗ್ಗಿಸಿ ನಾನು ಪ್ರಣಾಮಗಳನ್ನು ಸಲ್ಲಿಸುತ್ತೇನೆ.
- ಇದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲೇ ಅತ್ಯಂತ ದೊಡ್ಡ ಘಟನೆ
- ದೇಶ ಸ್ವಾತಂತ್ರ್ಯಗೊಂಡ ನಂತರ ಈ ಬಾರಿ ಅತೀ ಹೆಚ್ಚು ಮತದಾನ ವಾಗಿತ್ತು.
- ಚುನಾವಣಾ ಆಯೋಗ, ರಕ್ಷಣಾ ಸಿಬ್ಬಂದಿ ಹಾಗೂ ಪೊಲೀಸ್ ಇಲಾಖೆಗೆ ಧನ್ಯವಾದ ಹೇಳುತ್ತೆನೆ
- ಚುನಾವಣೆ ಪ್ರಕ್ರಿಯೆ ಯಶಸ್ವಿಯಾಗಿ ಮುಕ್ತಾಯಗೊಳ್ಳಲು ಇವರೆಲ್ಲರೂ ಶ್ರಮಿಸಿದ್ದಾರೆ.
ಗೆಲುವಿನ ವಿಜಯೋತ್ಸವದಲ್ಲಿ ನಮೋ ಭಾಗಿ... ಮೋದಿ, ಶಾ ಮೇಲೆ ಹೂವಿನ ಸುರಿಮಳೆ - ನವದೆಹಲಿ
2019-05-23 19:57:13
2019-05-23 19:23:46
- ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಗೆ ಪ್ರಧಾನಿ ಮೋದಿ ಆಗಮನ
- ಕಚೇರಿ ಎದುರು ನೆರೆದಿರುವ ಸಾವಿರಾರು ಮಂದಿ
- ಮೋದಿ ಕಚೇರಿಗೆ ಆಗಮಿಸುತ್ತಿದ್ದಂತೆ ಪುಷ್ಟ ವೃಷ್ಟಿ ಮಾಡಿದ ಕಾರ್ಯಕರ್ತರು
- ವಿಜಯೋತ್ಸವದಲ್ಲಿ ಅಮಿತ್ ಶಾ,ಸುಷ್ಮಾ ಸ್ವರಾಜ್, ಶಿವರಾಜ್ ಸಿಂಗ್ ಚೌಹಾಣ್, ಜೆಪಿ ನಡ್ಡಾ ಮತ್ತಿತರು ಭಾಗಿ
- ಬಿಜೆಪಿ ಕಚೇರಿ ಎದುರು ಮೊಳಗುತ್ತಿದೆ ವಂದೇ ಮಾತರಂ,ಭಾರತ್ ಮಾತಾಕಿ ಜೈ ಜೈಕಾರ
- ಬಿಜೆಪಿ ಕಚೇರಿ ಎದುರು ಮೊಳಗುತ್ತಿದೆ ವಂದೇ ಮಾತರಂ,ಭಾರತ್ ಮಾತಾಕಿ ಜೈ ಜೈಕಾರ
- ಪ್ರಧಾನಿ ಮೋದಿಗೆ ಬೃಹತ್ ಹೂ ಹಾರ ಅಭಿನಂದನೆ ಸಲ್ಲಿಸಿದ ಬಿಜೆಪಿ ಹಿರಿಯ ಮುಖಂಡರು
- ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡುತ್ತಿರುವ ಅಮಿತ್ ಶಾ
- ದೇಶದ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ
- ಸ್ವತಂತ್ರ್ಯಾ ನಂತರ ಬಿಜೆಪಿಗೆ ದೇಶದ ಮತದಾರರು ಐತಿಹಾಸಿಕ ಗೆಲುವು ಕೊಟ್ಟಿದ್ದಾರೆ.
- ಇದು ದೇಶದ ಜನತೆಯ ವಿಜಯ, ದೇಶದ ಕೋಟ್ಯಂತರ ಕಾರ್ಯಕರ್ತರ ವಿಜಯವಾಗಿದೆ.
- ಇದು ಪ್ರಧಾನಿ ಮೋದಿ ಅವರ ಜನಪ್ರೀಯತೆಗೆ ಸಿಕ್ಕ ವಿಜಯವಾಗಿದೆ
- ದೇಶದ ಜನರ ಬಡವರ ಜೀವನೋದ್ದಾರ, ಕೈಗೊಂಡ ಅಭಿವೃದ್ದಿಗೆ ಮೋದಿಜಿಗೆ ಸಿಕ್ಕ ವಿಜಯವಾಗಿದೆ.
- ಅರುಣಾಚಲ, ಚಂಡೀಗಢ, ಹಿಮಾಚಲ, ಕರ್ನಾಟಕ, ಮಧ್ಯಪ್ರದೇಶ, ಉತ್ತರ ಖಂಡ , ರಾಜಾಸ್ತಾನ ರಾಜ್ಯಗಳಲ್ಲಿ ನಮಗೆ ಶೇ 50 ಕ್ಕೂ ಹೆಚ್ಚು ಮತ ಸಿಕ್ಕಿದೆ.
- ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಸೊನ್ನೆ ಸುತ್ತಿರುವುದನ್ನು ನೀವು ಗಮನಿಸಬೇಕು. ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ ಖಾತೆಯನ್ನೂ ತೆರಯಲಾಗಿಲ್ಲ.
- ಕಾಂಗ್ರೆಸ್ ಕುಟುಂಬ ರಾಜಕಾರಣ, ತುಷ್ಟೀಕರಣ, ಜಾತೀವಾದ, ಭ್ರಷ್ಟಾಚಾರವನ್ನೇ ಮಾಡುತ್ತಿತ್ತು.
- ಕೆಲ ದಿನಗಳ ಹಿಂದೆ ಮತಗಟ್ಟೆ ಸಮೀಕ್ಷೆ ಬಿಡುಗಡೆಯಾಗಿತ್ತು. ಆದ್ರೆ ಕೆಲವರಿಗೆ ಅದೆ ಖುಷಿ ಕೊಟ್ಟಿಲ್ಲ. ನಂಬಿಕೆಯೂ ಇರಲಿಲ್ಲ.
- ಆದ್ರಿವತ್ತು ಅವೆಲ್ಲಾ ನಿಜವಾಗಿದೆ.
- ನಾನು ಆಂಧ್ರಪ್ರದೇಶದ ಜಗನ್ ರೆಡ್ಡಿ ಹಾಗು ಒಡಿಶಾದ ನವೀನ್ ಪಟ್ನಾಯಕ್ ಅವರನ್ನೂ ಅಭಿನಂದಿಸುತ್ತೇನೆ.
- ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಇದೇ ಮೊದಲ ಬಾರಿಗೆ ಪೂರ್ಣ ಬಹುಮತದೊಂದಿಗೆ ಅಧಿಕಾರ ನಡೆಸುವತ್ತೆ ದಾಪುಗಾಲು ಹಾಕಿದೆ.
- ಬಂಗಾಲದಲ್ಲಿ ಇದೇ ಮೊದಲ ಬಾರಿಗೆ 18 ಸ್ಥಾನಗಳನ್ನು ನಾವು ಪಡೆದಿದ್ದೇವೆ. ಇದು ಬಿಜೆಪಿಯ ಪ್ರಚಂಡ ವಿಜಯವಾಗಿದೆ.
- ಇದು ಟುಕುಡೇ ಟುಕುಡೇ ವಿಚಾರವಾದದ ವಿರುದ್ಧ ವಿಜಯವಾಗಿದೆ.
2019-05-23 19:02:11
ವಿಜಯೋತ್ಸವದ ಭಾಷಣದಲ್ಲಿ ನಮೋ ಭಾಗಿ
ನವದೆಹಲಿ: ಲೋಕಸಭೆ ಚುನಾವಣೆಯ ಫಲಿತಾಂಶ ಬಹುತೇಕ ಹೊರಬಿದ್ದಿದ್ದು, 542 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ 346 ಸ್ಥಾನಗಳನ್ನು ಪಡೆದು ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಿದೆ. ಸತತ ಎರಡನೇ ಅವಧಿಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ.
- ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ ಚಂದ್ರಬಾಬು ನಾಯ್ಡು
- ರಾಜ್ಯಪಾಲರಿಗೆ ನಾಮಪತ್ರ ಸಲ್ಲಿಕೆ ಮಾಡಿದ ಚಂದ್ರಬಾಬು ನಾಯ್ಡು
- 524 ಕ್ಷೇತ್ರಗಳ ಪೈಕಿ ಇಲ್ಲಿಯವರೆಗೆ ಬಿಜೆಪಿ 346 ಸ್ಥಾನ, ಕಾಂಗ್ರೆಸ್ 86 ಹಾಗೂ ಇತರೆ 110 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
- ಬಿಜೆಪಿಗೆ ಬಲ ನೀಡಿದ ರಾಜ್ಯಗಳು: ಗುಜರಾತ್ (26), ರಾಜಸ್ಥಾನ (24), ಮಧ್ಯಪ್ರದೇಶ (28), ಬಿಹಾರ (39), ಕರ್ನಾಟಕ (25) ಮಹಾರಾಷ್ಟ್ರ (42), ಉತ್ತರಪ್ರದೇಶ (62), ಪಶ್ಚಿಮ ಬಂಗಾಲ (19).
- ಉತ್ತರಪ್ರದೇಶದ ಪಿಲಿಭಿತ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಹೇಮ್ ರಾಜ್ ವರ್ಮಾ ವಿರುದ್ಧ ಗೆದ್ದ ವರುಣ್ ಗಾಂಧಿ
- ಮಥುರಾ ಕ್ಷೇತ್ರದಲ್ಲಿ ಗೆದ್ದು ಸಂಸತ್ತಿಗೆ ಪುನರಾಯ್ಕೆಯಾದ ಬಿಜೆಪಿಯ ಹೆಮಮಾಲಿನಿ. ಗೆಲುವಿನ ಅಂತರ 2.8 ಲಕ್ಷ ಮತ
- ಪಶ್ಚಿಮ ಬಂಗಾಲದ ಅಸಾನ್ಸೋಲ್ ಕ್ಷೇತ್ರದಲ್ಲಿ ಟಿಎಂಸಿಯ ಮೂನ್ ಮೂನ್ ಸೇನ್ ವಿರುದ್ಧ ಗೆದ್ದ ಬಿಜೆಪಿ ಬಾಬುಲ್ ಸುಪ್ರಿಯೋ.
- ಅಮೇಥಿಯಲ್ಲಿ ಜಯಗಳಿಸಿರುವ ಸ್ಮೃತಿ ಇರಾನಿ
- ನರೇಂದ್ರ ಮೋದಿ ಗೆಲುವಿಗೆ ನೇತನ್ಯಾಹು, ಇಮ್ರಾನ್ ಖಾನ್, ಕ್ಸಿ ಝಿಂಗ್ ಪಿಂಗ್ ಸೇರಿದಂತೆ ವಿಶ್ವನಾಯಕರ ಅಭಿನಂದನೆ.
- ಕೇರಳದ ವಯನಾಡ್ ಕ್ಷೇತ್ರದಿಂದ 416373 ಮತಗಳ ಅಂತರದಿಂದ ರಾಹುಲ್ ಗೆಲುವು
- ಗಾಂಧಿನಗರ ಕ್ಷೇತ್ರದಲ್ಲಿ ಐದೂವರೆ ಲಕ್ಷ ಮತಗಳ ಅಂತರದಲ್ಲಿ ಗೆದ್ದ ಅಮಿತ್ ಶಾ.
- ವಾರಣಾಸಿ ಕ್ಷೇತ್ರದಲ್ಲಿ 4 ಲಕ್ಷದ 75 ಸಾವಿರ ಮತಗಳ ಅಂತರದಿಂದ ಜಯಭೇರಿ ಬಾರಿಸಿದ ನರೇಂದ್ರ ಮೋದಿ.
- ಮಧ್ಯಪ್ರದೇಶದ ಗುನಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾಗೆ ಸೋಲ
- ರಾಯ್ ಬರೇಲಿ ಕ್ಷೇತ್ರದಲ್ಲಿ ಗೆದ್ದ ಸೋನಿಯಾ ಗಾಂಧಿ.
- ಭೋಪಾಲ್ ಲೋಕಸಭಾ ಕ್ಷೇತ್ರದಲ್ಲಿ ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಪ್ರಗ್ಯಾ ಸಿಂಗ್ ಠಾಕೂರ್ ಜಯ
- ತುಮಕೂರಿನಲ್ಲಿ ಹೆಚ್.ಡಿ. ದೇವೇಗೌಡರಿಗೆ ಸೋಲು. 15,433 ಮತಗಳ ಅಂತರದಿಂದ ಬಿಜೆಪಿಯ ಬಸವರಾಜು ಜಯ
- ಪವನ್ ಕಲ್ಯಾಣ್ ಎರಡೂ ಕ್ಷೇತ್ರಗಳಲ್ಲಿ ಸೋಲು
- ಗಾಜುವಾಕ ಮತ್ತು ಭೀಮಾವರಂ ಕ್ಷೇತ್ರಗಳೆರಡರಲ್ಲೂ ಪವನ್ ಕಲ್ಯಾಣ್ಗೆ ಸೋಲು
- ಇಡೀ ರಾಜ್ಯದಲ್ಲಿ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷಕ್ಕೆ ಒಂದು ಸ್ಥಾನ
2019-05-23 18:05:49
- ಲೋಕಸಭೆ ಚುನಾವಣೆಯಲ್ಲಿ ಜನರು ನೀಡಿರುವ ನಿರ್ಧಾರವನ್ನ ಸ್ವಾಗತಿಸುತ್ತೇವೆ
- ಲೋಕಸಭಾ ಚುನಾವಣೆಯಲ್ಲಿ ಗೆಲುವು ದಾಖಲು ಮಾಡಿರುವ ಮೋದಿ ಅವರಿಗೆ ಅಭಿನಂದನೆ: ಪ್ರಿಯಾಂಕಾ ಗಾಂಧಿ
2019-05-23 18:03:20
- ಇದೊಂದು ಹೊಸ ಅಧ್ಯಾಯ: ಜಗನ್ಮೋಹನ್ ರೆಡ್ಡಿ
- ಒಂದೇ ವರ್ಷದಲ್ಲಿ ಒಳ್ಳೆಯ ಮುಖ್ಯಮಂತ್ರಿ ಎಂದು ಕರೆಯಿಸಿಕೊಳ್ಳುವೆ
- ಆಂಧ್ರಪ್ರದೇಶದಲ್ಲಿ ಜಗನ್ಮೋಹನ್ ರೆಡ್ಡಿ ಸುದ್ದಿಗೋಷ್ಠಿ
- ಜನರು ತೋರಿಸಿರುವ ಪ್ರೀತಿಗೆ ನಾನು ಋಣಿ
2019-05-23 17:47:03
ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ-ರಾಹುಲ್ ಗಾಂಧಿ
- ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸುದ್ದಿಗೋಷ್ಠಿ
- ಜನರೇ ಅಂತಿಮವಾಗಿದ್ದು, ಅವರ ತೀರ್ಪನ್ನ ಸ್ವಾಗತಿಸುತ್ತೇವೆ.
- ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ಅಭಿನಂದನೆಗಳು
- ಜನರ ತೀರ್ಪನ್ನು ನಾವು ಸ್ವಾಗತಿಸುತ್ತೇವೆ, ನಮ್ಮ ವಿಚಾರಧಾರೆಳನ್ನಿಟ್ಟುಕೊಂಡು ಹೋರಾಟ
- ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದ ಮೋದಿ
- ಸ್ಮೃತಿ ಇರಾನಿ ಗೆದ್ದಿದ್ದಾರೆ ಅವರಿಗೆ ನನ್ನ ಅಭಿನಂದನೆ, ಅಮೇಠಿ ಜನರ ತೀರ್ಪನ್ನ ಸ್ವಾಗತ ಮಾಡಿವೆ.
- ಸ್ಮೃತಿ ಇರಾನಿ ಅಮೇಠಿ ಜನರನ್ನ ಪ್ರೀತಿಯಿಂದ ನೋಡಿಕೊಂಡು ಹೋಗಲಿ
- ಚುನಾವಣೆಗಳಲ್ಲಿ ಸೋಲು-ಗೆಲುವು ಒಂದೇ ನಾಣ್ಯದ ಎರಡು ಮುಖ
2019-05-23 15:42:46
ಪಕ್ಷದ ಕೇಂದ್ರ ಕಚೇರಿಗೆ ಅಮಿತ್ ಶಾ
- ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆಗಳು, ಸೋತವರೆಲ್ಲರೂ ಪರಾಭವಗೊಂಡಿಲ್ಲ:ಮಮತಾ ಬ್ಯಾನರ್ಜಿ
- ಪಕ್ಷದ ಕೇಂದ್ರ ಕಚೇರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಆಗಮನ
- ಕಾರ್ಯಕರ್ತರಿಂದ ಭರ್ಜರಿ ಸ್ವಾಗತ
- ಕೆಲವೇ ಗಂಟೆಗಳಲ್ಲಿ ಸುದ್ದಿಗೋಷ್ಠಿ ನಡೆಸಲಿರುವ ಅಮಿತ್ ಶಾ
- ಆಂಧ್ರಪ್ರದೇಶದಲ್ಲಿ ವೈಎಸ್ಆರ್ ಕಾಂಗ್ರೆಸ್ ಗೆಲುವು, ಪ್ರಧಾನಿ ಮೋದಿ ಅಭಿನಂದನೆ
- ಒಡಿಶಾದಲ್ಲಿ ಗೆದ್ದ ನವೀನ್ ಪಟ್ನಾಯಕ್ ಅವರಿಗೂ ಟ್ವೀಟ್ ಮೂಲಕ ಶುಭಾಯಶ ತಿಳಿಸಿದ್ದಾರೆ
- ಎಲ್ಕೆ ಅಡ್ವಾಣಿ ಸಂಭ್ರಮ: ಇದೇ ಮೊದಲ ಬಾರಿಗೆ ಅತಿ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಕ್ಕಾಗಿ ಬಿಜೆಪಿ ಹಿರಿಯ ಮುಖಂಡ ಎಲ್ಕೆ ಅಡ್ವಾಣಿ ಸಂಭ್ರಮಪಟ್ಟಿದ್ದಾರೆ
- ಇಷ್ಟೊಂದು ಕ್ಷೇತ್ರಗಳಲ್ಲಿ ಗೆಲುವು ದಾಖಲು ಮಾಡಿದ್ದು ನಿಜಕ್ಕೂ ಅದ್ಭುತ. ಎಲ್ಲ ಕಾರ್ಯಕರ್ತರಿಗೂ ನನ್ನ ನಮನಗಳು ಎಂದಿದ್ದಾರೆ.
2019-05-23 15:36:54
ಒಡಿಶಾದಲ್ಲಿ ಸತತ 5ನೇ ಬಾರಿ ಅಧಿಕಾರ ಹಿಡಿಯಲಿರುವ ಸಿಎಂ ನವೀನ್ ಪಾಟ್ನಾಯಕ್
ಒಡಿಶಾದ ಒಟ್ಟು ಕ್ಷೇತ್ರಗಳು 147
ಬಿಜೆಡಿ: 109
ಬಿಜೆಪಿ: 25
ಕಾಂಗ್ರೆಸ್: 10
ಇತರರು: 2
2019-05-23 15:28:13
- ಬಿಜೆಪಿ ಕೇಂದ್ರ ಕಚೇರಿಯಲ್ಲಿ ಗೆಲುವಿನ ಸಂಭ್ರಮ, ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ವಿಜಯೋತ್ಸವ
- ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಭರ್ಜರಿ ಗೆಲುವು
- ಕೇರಳದ ವಯನಾಡುವಿನಲ್ಲಿ ರಾಹುಲ್ ಗಾಂಧಿಗೆ 7,90,000 ಮತಗಳ ಮುನ್ನಡೆ
- ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಮೊದಲ ಸಲ 350ರ ಗಡಿ ದಾಟಿದ ಬಿಜೆಪಿ
- ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ ಯುಪಿ ಸಿಎಂ ಯೋಗಿ ಆದಿತ್ಯನಾಥ್
- 300ಕ್ಕೂ ಹೆಚ್ಚು ಕ್ಷೇತ್ರಗಳಳ್ಲಿ ಗೆಲುವು ದಾಖಲು ಮಾಡಿದ್ದಕ್ಕಾಗಿ ಖುಷಿಯಾಗಿದೆ ಎಂದಿದ್ದಾರೆ.
2019-05-23 14:53:14
ಸಬ್ ಕಾ ಸಾಥ್.. ಸಬ್ ಕಾ ವಿಕಾಸ್: ಮೋದಿ ಟ್ವೀಟ್
- ಮೋದಿಗೆ ಶುಭಾಶಯ ಕೋರಿದ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ
- ಉಭಯ ದೇಶಗಳ ಸಂಬಂಧ ಮತ್ತಷ್ಟು ವರ್ಧಿಸೋಣ ಎಂದ ಘನಿ
- ನರೇಂದ್ರ ಮೋದಿಗೆ ಶುಭಾಶಯ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ
- ದೂರವಾಣಿ ಕರೆಯ ಮೂಲಕ ಶುಭಾಶಯ ಕೋರಿದ ಜಪಾನ್ ಪಿಎಂ
- ಜಪಾನ್ ಪ್ರಧಾನಿ ಶಿಂಜೋ ಅಬೆರಿಂದ ಮೋದಿಗೆ ಶುಭಾಶಯ
- ಪುಟಿನ್ರಿಂದ ಮೋದಿಗೆ ಟೆಲಿಗ್ರಾಮ್ ಸಂದೇಶ
- ಮೋದಿಗೆ ಶುಭಾಶಯ ತಿಳಿಸಿದ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್
- ಎಲ್ಲರ ಜೊತೆಗೆ ಸೇರಿ ಉತ್ತಮ ಭಾರತ ನಿರ್ಮಿಸೋಣ: ಮೋದಿ
- ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂದು ಮೋದಿ ಟ್ವೀಟ್
- ಟ್ವಿಟರ್ನಲ್ಲಿ ದೇಶದ ಜನತೆಗೆ ಧನ್ಯವಾದ ತಿಳಿಸಿದ ನರೇಂದ್ರ ಮೋದಿ
2019-05-23 14:09:04
ಪ್ರಧಾನಿ ಮೋದಿಗೆ ನಟ ರಜನಿಕಾಂತ್ ಅಭಿನಂದನೆ
- ಚೀನಾ ಪ್ರಧಾನಿ ಕ್ಸಿ ಜಿನ್ ಪಿಂಗ್ರಿಂದ ಮೋದಿಗೆ ಶುಭಾಶಯ
- ಸೋಲಿನ ಹತಾಶೆಯಿಂದ ಮತಕೇಂದ್ರದಿಂದ ಹೊರನಡೆದ ಮೂನ್ ಮೂನ್ ಸೇನ್
- ಉತ್ತರಪ್ರದೇಶದ ಲಖನೌದಿಂದ ರಾಜನಾಥ್ ಸಿಂಗ್ಗೆ ಗೆಲುವು
- ಬಿಜೆಪಿ ಅಧ್ಯಕ್ಷ ಅಮಿತ್ ಶಾಗೆ ಗಾಂಧಿನಗರದಿಂದ ಗೆಲುವು
- ಪ್ರಧಾನಿ ಮೋದಿಗೆ ನಟ ರಜನಿಕಾಂತ್ ಅಭಿನಂದನೆ
- ಕೇರಳ,ತಮಿಳುನಾಡು, ಆಂಧ್ರದಲ್ಲಿ ಬಿಜೆಪಿಗೆ ಯಾವುದೇ ಗೆಲುವಿಲ್ಲ
- 2014ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು, ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಕಮಲ
2019-05-23 13:38:05
ಇಸ್ರೇಲ್ ಪ್ರಧಾನಿ ಅಭಿನಂದನೆ
- 17ನೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್ಡಿಎಗೆ ಸ್ಪಷ್ಟ ಬಹುಮತ
- ನರೇಂದ್ರ ಮೋದಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅಭಿನಂದನೆ
- ನಿಮ್ಮೊಂದಿಗೆ ನಮ್ಮ ಸ್ನೇಹ ಇದೇ ರೀತಿ ಮುಂದುವರೆಯಲಿದೆ ಎಂದು ಇಸ್ರೇಲ್ ಪ್ರಧಾನಿ
2019-05-23 13:05:30
ಒಮರ್ ಅಬ್ದುಲ್ಲಾ ಅಭಿನಂದನೆ
- ಬಿಜೆಪಿ ಗೆಲುವಿನ ನಗಾರಿ: ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅಭಿನಂದನೆ
- ಪ್ರಧಾನಿ ಮೋದಿ-ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಕೆ ಮಾಡಿ ಟ್ವೀಟ್
- ಮುಂದಿನ ಐದು ವರ್ಷಗಳ ಕಾಲ ಉತ್ತಮ ಆಡಳಿತ ನೀಡುವಂತೆ ಮನವಿ
2019-05-23 13:02:16
ಗೆಲುವಿನ ಸಂಭ್ರಮಾಚರಣೆ
- ವಾರಣಾಸಿಯಲ್ಲಿ ಪ್ರಧಾನಿ ಮೋದಿಗೆ 2,80000 ವೋಟ್ಗಳ ಮುನ್ನಡೆ
- ಜಮ್ಮು-ಕಾಶ್ಮೀರದ ಶ್ರೀನಗರ ಕ್ಷೇತ್ರದಿಂದ ಫಾರೂಖ್ ಅಬ್ದುಲ್ಲಾಗೆ ಗೆಲುವು
- ಮೇ 30ರಂದು ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಜಗನ್ಮೋಹನ್ ರೆಡ್ಡಿ ಪ್ರತಿಜ್ಞಾವಿಧಿ ಸ್ವೀಕಾರ
2019-05-23 12:10:13
ಆಂಧ್ರಪ್ರದೇಶದ ವಿಧಾನಸಭೆ ಫಲಿತಾಂಶ
ಆಂಧ್ರಪ್ರದೇಶದ ವಿಧಾನಸಭೆ ಫಲಿತಾಂಶ
- ವೈಎಸ್ಆರ್ ಕಾಂಗ್ರೆಸ್ 125 ಕ್ಷೇತ್ರದಲ್ಲಿ ಮುನ್ನಡೆ
- ಟಿಡಿಪಿ 23 ಕ್ಷೇತ್ರಗಳಲ್ಲಿ ಮುನ್ನಡೆ
- ಹೀನಾಯ ಸೋಲು ಕಾಣುವ ಹಿನ್ನಲೆ ಸಂಜೆ ರಾಜ್ಯಪಾಲರನ್ನ ಭೇಟಿ ಮಾಡಲಿರುವ ನಾಯ್ಡು
- ರಾಜ್ಯಪಾಲರನ್ನ ಭೇಟಿ ಮಾಡಿ ರಾಜೀನಾಮೆ ನೀಡುವ ಸಾಧ್ಯತೆ
- ಗಾಜುವಾಕ್, ಭೀಮಾವರಂ ಕ್ಷೇತ್ರಗಳಲ್ಲಿ ಪವನ್ ಕಲ್ಯಾಣ್ಗೆ ಹಿನ್ನಡೆ
2019-05-23 11:54:37
ಸಿಡ್ನಿ, ಮೆಲ್ಬರ್ನ್ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
- ಚೌರ್ನಿಂದ ಬಿಜೆಪಿಯ ರಾಹುಲ್ ಕುಸ್ವಾನ್ ಗೆಲುವು
- ರಾಜಸ್ಥಾನದ ಬಿಲ್ವಾರ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುಭಾಷ್ ಚಂದ್ರಗೆ ಗೆಲುವು
- ಗುಜರಾತ್ನ ರಾಜಕೋಟ್ನಲ್ಲಿ ಮೋಹನ್ ಬಾಯ್ ಕುಂದಾರಿಯಾಗೆ ಗೆಲುವು: ಬಿಜೆಪಿ ಅಭ್ಯರ್ಥಿ
- ಬಿಜೆಪಿಯ ಅನುರಾಗ್ ಸಿಂಗ್ ಠಾಕೂರ್ ಹಿಮಾಚಲ ಪ್ರದೇಶದ ಹಮೀರ್ಪುರ್ ಕ್ಷೇತ್ರದಲ್ಲಿ ಗೆಲುವು
- ಗೆಲುವಿನತ್ತ ಬಿಜೆಪಿ ಮುನ್ನಡೆ. ಸಂಜೆ 5:30ಕ್ಕೆ ಪಾರ್ಲಿಮೆಂಟರಿ ಸಭೆ, ಕಾರ್ಯಕರ್ತರ ಭೇಟಿ ಮಾಡಲಿರುವ ಪ್ರಧಾನಿ
- ಸ್ಪಷ್ಟ ಗೆಲುವಿನತ್ತ ಬಿಜೆಪಿ ದಾಪುಗಾಗಲು, ಆಸ್ಟ್ರೇಲಿಯಾದ ಸಿಡ್ನಿ, ಮೆಲ್ಬರ್ನ್ನಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ
- 2ನೇ ಅವಧಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಯವತ್ತ ದಾಪುಗಾಲಿಟ್ಟಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿ ಸಂಭ್ರಮಾಚರಣೆ
2019-05-23 11:36:15
ಪಾಕ್ನ ಭಾರತೀಯ ರಾಯಬಾರಿ ಕಚೇರಿಯಲ್ಲಿ ಫಲಿತಾಂಶದ ನೇರ ಪ್ರಸಾರ
- ಡಿಯು-ದಮನ್ನಲ್ಲಿ ಬಿಜೆಪಿಗೆ ಅಧಿಕೃತ ಗೆಲುವು, ಲಾಲು ಬಾಯಿ ಪಟೇಲ್ಗೆ ಜಯ
- ಪಾಕಿಸ್ತಾನದ ಭಾರತೀಯ ರಾಯಭಾರಿ ಕಚೇರಿಯಲ್ಲೂ ಫಲಿತಾಂಶದ ನೇರ ಪ್ರಸಾರ
- ಉತ್ತರಾಖಂಡ್ದಲ್ಲೂ ಕ್ಲೀನ್ ಸ್ವೀಪ್ ಮಾಡಿದ ಬಿಜೆಪಿ
- ಘಾಜಿಪುರ್ದಲ್ಲಿ ಕೇಂದ್ರ ಸಚಿವ ಮನೋಜ್ ಸಿನ್ಹಾ ಹಾಗೂ ಸುಲ್ತಾನಪುರದಿಂದ ಮನೇಕ ಗಾಂಧಿ ಹಿನ್ನಡೆ
- ಇದೇ ಮೊದಲ ಬಾರಿಗೆ 40 ಸಾವಿರ ಗಡಿ ದಾಟಿದ ಮುಂಬೈ ಷೇರುಪೇಟೆ
2019-05-23 11:03:37
ಅಬ್ ಕೀ ಬಾರ್ ತೀನ್ಸೌವ್ ಪಾರ್, ಸಂಭ್ರಮಾಚರಣೆಯಲ್ಲಿ ಮೋದಿ ತಾಯಿ ಹೀರಾಬೇನ್
- ಎನ್‌ಡಿಎ ಗೆಲುವಿನತ್ತ ಮುನ್ನಡೆ ಪ್ರಧಾನಿ ನರೇಂದ್ರ ಮೋದಿ ತಾಯಿಯಿಂದ ಸಂಭ್ರಮ
- ಗುಜರಾತ್ನ ತಮ್ಮ ನಿವಾಸದಲ್ಲಿ ಹೀರಾಬೇನ್ ಸಂಭ್ರಮ, ದೇಶದ ಮತದಾರರಿಗೆ ಮೋದಿ ತಾಯಿ ಧನ್ಯವಾದ
- 7600 ಮತಗಳ ಅಂತರದಿಂದ ಸ್ಮೃತಿ ಇರಾನಿ ಮುನ್ನಡೆ, ರಾಹುಲ್ ಗಾಂಧಿಗೆ ಹಿನ್ನಡೆ
- 'ಅಬ್ ಕೀ ಬಾರ್ ತೀನ್ಸೌವ್ ಪಾರ್'(ಈ ಸಾರಿ 300ರ ಗಡಿ ದಾಟುತ್ತೇವೆ): ಎಂದು ಮೋದಿ ಘೋಷಣೆ ಮೊಳಗಿಸಿದಂತೆ ಎನ್‌ಡಿಎ ಅಧಿಕಾರಕ್ಕೇರುವುದು ನಿಶ್ಚಿತ
- ವಿವಿಧ ಕ್ಷೇತ್ರಗಳಲ್ಲಿ ಪಕ್ಷಗಳ ಗೆಲುವಿನ ಮುನ್ನಡೆ
- ಬಿಜೆಪಿ: 287
- ಕಾಂಗ್ರೆಸ್: 54
- ಟಿಎಂಸಿ: 25
- ಡಿಎಂಕೆ: 22
- ವೈಎಸ್ಆರ್: 20
- ಶಿವಸೇನೆ: 19
- ಜೆಡಿಯು: 16
- ಬಿಎಸ್ಪಿ 15
- ಬಿಜೆಡಿ: 12
- ಎಸ್ಪಿ 10
- ಟಿಆರ್ಎಸ್ 9
- ಟಿಡಿಪಿ 5
- ಸಿಪಿಎಂ 4
2019-05-23 10:29:41
2ನೇ ಅವಧಿಗೆ ಅಧಿಕಾರದತ್ತ ಬಿಜೆಪಿ! 300ರ ಗಡಿ ಕ್ರಾಸ್
- ಅಧಿಕಾರದತ್ತ ಎನ್‌ಡಿಎ, 40 ಸಾವಿರ ಗಡಿದಾಟಿದ ಮುಂಬೈ ಷೇರುಪೇಟೆ
- 1400 ಅಂಕಗಳ ಏರಿಕೆ ಕಂಡ ಸೂಚ್ಯಂಕ
- ಹಿಂದಿ ಭಾಷೆಯ ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಮುನ್ನಡೆ
- ರಾಜಸ್ಥಾನ,ಮಧ್ಯಪ್ರದೇಶ,ಹಿಮಾಚಲಪ್ರದೇಶ,ನವದೆಹಲಿ,ರಾಜಸ್ಥಾನದ ಎಲ್ಲ ಕ್ಷೇತ್ರಗಳಲ್ಲೂ ಮುನ್ನಡೆ
- 329 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, 86 ಕ್ಷೇತ್ರಗಳಲ್ಲಿ ಕಾಂಗ್ರೆಸ್,128 ಕ್ಷೇತ್ರಗಳಲ್ಲಿ ಇತರೆ ಪಕ್ಷ ಮುನ್ನಡೆ
2019-05-23 09:59:42
ಕೇರಳದ 20 ಕ್ಷೇತ್ರಗಳ ಪೈಕಿ 18ರಲ್ಲಿ ಕಾಂಗ್ರೆಸ್ ಮುನ್ನಡೆ
-
ದೆಹಲಿಯ ಏಳು ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
ಒಡಿಶಾ ವಿಧಾನಸಭೆ: 146 ಕ್ಷೇತ್ರಗಳ ಪೈಕಿ, ಬಿಜು ಜನತಾದಳ 16 ಕ್ಷೇತ್ರ, ಬಿಜೆಪಿ 05ರಲ್ಲಿ ಮುನ್ನಡೆ - ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಬೃಹತ್ ಮುನ್ನಡೆ
- ಪಶ್ಚಿಮ ಬಂಗಾಳದಲ್ಲಿ 13 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ, ದಾಖಲೆಯತ್ತ ಕಮಲ
- ಕೇರಳದ 20 ಕ್ಷೇತ್ರಗಳ ಪೈಕಿ 18ರಲ್ಲಿ ಕಾಂಗ್ರೆಸ್ ಮುನ್ನಡೆ
- ಹರಿಯಾಣದ 10 ಕ್ಷೇತ್ರಗಳಲ್ಲಿ 9ರಲ್ಲಿ ಬಿಜೆಪಿ ಮುನ್ನಡೆ
- ಉತ್ತರ ಪ್ರದೇಶದಲ್ಲಿ ಬಿಜೆಪಿ 53ರಲ್ಲಿ ಮುನ್ನಡೆ; ಎಸ್ಪಿ-ಬಿಎಸ್ಪಿ ಮೈತ್ರಿಗೆ 22ರಲ್ಲಿ ಮುನ್ನಡೆ
- ಮಧ್ಯಪ್ರದೇಶದ ಗುಣ ಕ್ಷೇತ್ರದಲ್ಲಿ ಕಾಂಗ್ರೆಸ್ನ ಜ್ಯೋತಿರಾದಿತ್ಯ ಸಿಂಧ್ಯ ಅವರಿಗೆ ಹಿನ್ನಡೆ
- ಉತ್ತರ ಪ್ರದೇಶದ ರಾಮಪುರದಲ್ಲಿ ಬಿಜೆಪಿಯ ಜಯಪ್ರದಾಗೆ ಮುನ್ನಡೆ
- ಪಶ್ಚಿಮ ಬಂಗಾಳದ ಡೈಮಂಡ್ ಹಾರ್ಬರ್ ಕ್ಷೇತ್ರದಲ್ಲಿ ಮಮತಾ ಸಂಬಂಧಿ ಅಭಿಷೇಕ್ ಬ್ಯಾನರ್ಜಿಗೆ ಹಿನ್ನಡೆ
- ಕಾಶ್ಮೀರದಲ್ಲಿ ಎನ್ಸಿಯ ಫಾರೂಕ್ ಅಬ್ದುಲ್ಲಾ ಹಾಗೂ ಬಿಜೆಪಿಯ ಜಿತೇಂದ್ರ ಸಿಂಗ್ ಅವರಿಗೆ ಮುನ್ನಡೆ
- ಕೇರಳದ ವಯನಾಡಿನಲ್ಲಿ ರಾಹುಲ್ ಗಾಂಧಿಗೆ 10,910 ಮತಗಳ ಮುನ್ನಡೆ
- ಬಿಹಾರದ ಪಾಟ್ನಾ ಸಾಹಿಬ್ ಕ್ಷೇತ್ರದಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ಗೆ ಮುನ್ನಡೆ
- ಪಾಟಲಿಪುತ್ರದಲ್ಲಿ ಲಾಲೂ ಪುತ್ರಿ ಮಿಸಾ ಭಾರ್ತಿಗೆ ಮುನ್ನಡೆ
- ಒಡಿಶಾದ ಪುರಿಯಲ್ಲಿ ಬಿಜೆಪಿಯ ಸಂಬಿತ್ ಪಾತ್ರಗೆ ಹಿನ್ನಡೆ
2019-05-23 09:29:05
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ
- ಪ್ರಧಾನಿ ಮೋದಿಗೆ 20 ಸಾವಿರ, ಅಮಿತ್ ಶಾಗೆ 50 ಸಾವಿರ ಮತಗಳ ಅಂತರದಿಂದ ಮುನ್ನಡೆ
- ಕ್ರಿಕೆಟಿಗ ಗೌತಮ್ ಗಂಭೀರ್, ಸಚಿವ ರಾಜನವರ್ಧನ್ ಸಿಂಗ್ ರಾಠೋಡ್ ಮುನ್ನಡೆ
- ಜಮ್ಮು-ಕಾಶ್ಮೀರದಲ್ಲಿ ಫಾರೂಖ್ ಅಬ್ದುಲ್ಲಾ, ಉದಂಪುರದಲ್ಲಿ ಕೇಂದ್ರ ಸಚಿವ ಜೀತೇಂದ್ರ ಸಿಂಗ್ ಮುನ್ನಡೆ
- ಪಾಟ್ನಾ ಸಾಹೀಬ್ನಿಂದ ಕಾಂಗ್ರೆಸ್ ಶತೃಘ್ನ ಸಿನ್ಹಾ ವಿರುದ್ಧ ಬಿಜೆಪಿ ರವಿಶಂಕರ್ ಪ್ರಸಾದ್ ಮುನ್ನಡೆ
- ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಮುನ್ನಡೆ
- 80ರ ಪೈಕಿ 55 ಕ್ಷೇತ್ರಗಳಿಗೆ ಟ್ರೆಂಡಿಂಗ್ ಲಭ್ಯ:
- ಬಿಜೆಪಿ 41
- ಮಹಾಘಟಬಂಧನ್: 11
- ಇತರೆ 3
- ದೇಶಾದ್ಯಂತ ಪ್ರಮುಖ ಅಭ್ಯರ್ಥಿಗಳ ಮುನ್ನಡೆ ವಿವರ
- ವಾರಾಣಸಿಯಲ್ಲಿ ಬಿಜೆಪಿಯ ನರೇಂದ್ರ ಮೋದಿ ಮುನ್ನಡೆ
- ಭೋಪಾಲ್ನಲ್ಲಿ ಬಿಜೆಪಿಯ ಪ್ರಗ್ಯಾ ಠಾಕೂರ್ ಮುನ್ನಡೆ, ದಿಗ್ವಿಜಯ್ ಸಿಂಗ್ ಹಿನ್ನಡೆ
- ಚಿಂದ್ವಾರ ವಿಧಾನಸಭೆ ಉಪಚುನಾವಣೆಯಲ್ಲಿ ಮ.ಪ್ರ. ಸಿಎಂ ಕಮಲನಾಥ್ ಮುನ್ನಡೆ
- ರಾಜಸ್ಥಾನದ ಜೋಧಪುರದಲ್ಲಿ ಸಿಎಂ ಪುತ್ರ ವೈಭವ್ ಗೆಹ್ಲೋಟ್ ಮುನ್ನಡೆ
- ಕೇರಳದ ವಯನಾಡ್ನಲ್ಲಿ ರಾಹುಲ್ ಗಾಂಧಿಗೆ ಮುನ್ನಡೆ
- ಉತ್ತರ ಪ್ರದೇಶದ ರಾಮಪುರದಲ್ಲಿ ಸಮಾಜವಾದಿ ಪಕ್ಷದ ಅಜಮ್ ಖಾನ್ಗೆ ಮುನ್ನಡೆ
- ರಾಯ್ಬರೇಲಿಯಲ್ಲಿ ಸೋನಿಯಾ ಗಾಂಧಿಗೆ ಮುನ್ನಡೆ
- ನಾರ್ಥ್ ಮುಂಬೈನಲ್ಲಿ ಬಿಜೆಪಿಯ ಗೋಪಾಲ್ ಶೆಟ್ಟಿ ಎದುರು ಕಾಂಗ್ರೆಸ್ನ ಊರ್ಮಿಳಾ ಮಟೋಂಡ್ಕರ್ಗೆ ಹಿನ್ನಡೆ
- ಆಂಧ್ರಪ್ರದೇಶ ವಿಧಾನಸಭಾ ಚುನಾವಣೆ
- 175 ಕ್ಷೇತ್ರಗಳ ಆಂಧ್ರಪ್ರದೇಶ ವಿಧಾನಸಭೆ
- ವೈಎಸ್ಆರ್ ಕಾಂಗ್ರೆಸ್: 81
- ಟಿಡಿಪಿ: 16
- ಚಂದ್ರಬಾಬು ನಾಯ್ಡುಗೆ ಹಿನ್ನಡೆ
2019-05-23 09:14:36
ಕನ್ನಯ್ಹ ಕುಮಾರ್ ವಿರುದ್ಧ ಗಿರಿರಾಜ್ ಸಿಂಗ್ಗೆ ಮುನ್ನಡೆ
- ಎನ್‌ಡಿಎ ಗೆಲುವಿನ ಮುನ್ಸೂಚನೆ, 600 ಅಂಕಗಳ ಜಿಗಿತ ಕಂಡ ಮುಂಬೈ ಷೇರು ಪೇಟೆ
- ವಾರಣಾಸಿಯಲ್ಲಿ ಪ್ರಧಾನಿ ಮೋದಿ 12ಸಾವಿರಕ್ಕೂ ಹೆಚ್ಚು ಮತಗಳಿಂದ ಮುನ್ನಡೆ
- ಅಮೇಠಿಯಲ್ಲಿ ಸ್ಮೃತಿ ಇರಾನಿಗೆ 5,700 ಮತಗಳ ಮುನ್ನಡೆ
- ರಾಯ್ಬರೇಲಿಯಲ್ಲಿ ಕಾಂಗ್ರೆಸ್ ವಕ್ತಾರೆ ಸೋನಿಯಾ ಗಾಂಧಿಗೆ ಮುನ್ನಡೆ
2019-05-23 08:37:34
ಹಿಮಾಚಲಪ್ರದೇಶದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ
- ಆಂಧ್ರಪ್ರದೇಶದ ವಿಧಾನಸಭಾ ಫೈಟ್
- ಟಿಡಿಪಿ 8ಕ್ಷೇತ್ರ, YSRCP 140 ಕ್ಷೇತ್ರಗಳಲ್ಲಿ ಮುನ್ನಡೆ
- ಲಖನೌದಲ್ಲಿ ರಾಜನಾಥ್ ಸಿಂಗ್ಗೆ ಮುನ್ನಡೆ,ಸೌತ್ ಡೆಲ್ಲಿಯಲ್ಲಿ ಬಿಜೆಪಿಯ ಪ್ರವೀಶ್ ವರ್ಮಾ ಮುನ್ನಡೆ
- 6 ಸಾವಿರ ಮತಗಳಿಂದ ವಯನಾಡುವಿನಲ್ಲಿ ರಾಹುಲ್ ಗಾಂಧಿ ಮುನ್ನಡೆ
- ಗುಜರಾತ್ನ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ
- ದೆಹಲಿಯ ನೋಯ್ಡಾ, ಗಾಜಿಯಾಬಾದ್ ಕ್ಷೇತ್ರಗಳಲ್ಲಿ ಬಿಜೆಪಿ
- ಮಧ್ಯಪ್ರದೇಶದಲ್ಲಿ ಬಿಜೆಪಿ 16, ಕಾಂಗ್ರೆಸ್ 5 ಕ್ಷೇತ್ರಗಳಲ್ಲಿ ಮುನ್ನಡೆ
- ಹಿಮಾಚಲಪ್ರದೇಶದ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿಗೆ ಮುನ್ನಡೆ
- ಉತ್ತರಪ್ರದೇಶದ 45 ಕ್ಷೇತ್ರಗಳಲ್ಲಿ ಬಿಜೆಪಿಗೆ ಮುನ್ನಡೆ
- ಕೇರಳದ ವಯನಾಡುವಿನಲ್ಲಿ ರಾಹುಲ್ ಗಾಂಧಿಗೆ ಮುನ್ನಡೆ
- ರಾಯ್ಬರೇಲಿಯಲ್ಲೂ ಸೋನಿಯಾ ಗಾಂಧಿಗೆ ಹಿನ್ನಡೆ, ಬಿಜೆಪಿ ಅಭ್ಯರ್ಥಿಗೆ ಮುನ್ನಡೆ
- ಅಮೇಠಿಯಲ್ಲಿ ಸ್ಮೃತಿ ಇರಾನಿಗೆ ಮುನ್ನಡೆ, ರಾಹುಲ್ ಗಾಂಧಿ ಹಿನ್ನಡೆ
- ನಾಗ್ಪುರ್ದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಆರಂಭಿಕ ಮುನ್ನಡೆ
- ಇಲ್ಲಿಯವರೆಗೆ ಬಿಜೆಪಿ 94 ಕ್ಷೇತ್ರ, ಕಾಂಗ್ರೆಸ್ 26 ಹಾಗೂ ಇತರೆ 15 ಕ್ಷೇತ್ರಗಳಲ್ಲಿ ಮುನ್ನಡೆ
- ಭೋಪಾಲ್ನಲ್ಲಿ ಸಾಧ್ವಿ ಪ್ರಗ್ಯಾ ಸಿಂಗ್ಗೆ ಮುನ್ನಡೆ, ದಿಗ್ವಿಜಯ್ ಸಿಂಗ್ ವಿರುದ್ಧ ಸ್ಪರ್ಧೆ
- ಮೈನ್ಪುರಿಯಲ್ಲಿ ಮುಲಾಯಂ ಸಿಂಗ್ ಯಾದವ್ಗೆ ಮುನ್ನಡೆ
2019-05-23 08:02:02
ಬಿಜೆಪಿಗೆ ವಿವಿಧ ಕ್ಷೇತ್ರಗಳಲ್ಲಿ ಆರಂಭಿಕ ಮುನ್ನಡೆ
- ಗುಜರಾತ್ನ ಗಾಂಧಿನಗರದಿಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾಗೆ ಮುನ್ನಡೆ
- ಉತ್ತರಪ್ರದೇಶದ 6ಕ್ಷೇತ್ರಗಳಲ್ಲಿ ಬಿಜೆಪಿಗೆ ಆರಂಭಿಕ ಮುನ್ನಡೆ
- ಎನ್ಸಿಪಿ ಮುಖ್ಯಸ್ಥೆ ಸುಪ್ರಿಯಾಗೆ ಮಹಾರಾಷ್ಟ್ರದ ಬಾರಾಮತಿಯಿಂದ ಮುನ್ನಡೆ
- ಕಮಲಕ್ಕೆ ಆರಂಭಿಕ ಮುನ್ನಡೆ, ಬಿಜೆಪಿ-17, ಕಾಂಗ್ರೆಸ್-05, ಇತರೆ-03
- ಮಹಾರಾಷ್ಟ್ರದ ನಾಂದೇಡ್ದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಚೌಹಾಣ್ಗೆ ಮುನ್ನಡೆ
- ಅಮೇಠಿಯಲ್ಲಿ ರಾಹುಲ್ ಗಾಂಧಿಗೆ ಆರಂಭಿಕ ಮುನ್ನಡೆ
- ದೇಶಾದ್ಯಂತ ಬಹುನಿರೀಕ್ಷಿತ ಮತ ಎಣಿಕೆ ಆರಂಭ
- 542 ಕ್ಷೇತ್ರಗಳಲ್ಲಿ ಮತಎಣಿಕೆ ಆರಂಭ, ಭಾರಿ ಪೊಲೀಸ್ ಬಂದೋಬಸ್ತ್ನಲ್ಲಿ ಶುರುವಾದ ಕೌಂಟಿಂಗ್
- ಅಂಚೆ ಮತಗಳ ಎಣಿಕೆ ಕಾರ್ಯ ಆರಂಭ, 30 ನಿಮಿಷಗಳ ಕಾಲ ನಡೆಯಲಿರುವ ಕೌಂಟಿಂಗ್
2019-05-23 07:40:30
ಗೆಲುವಿಗಾಗಿ ದೇವರ ಮೊರೆ ಹೋದ ಶಶಿ ತರೂರ್
- ಕೇರಳದ ತಿರುವನಂತಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಕಾಂಗ್ರೆಸ್ ಅಭ್ಯರ್ಥಿ ಶಶಿ ತರೂರ್
- ಬೆಳ್ಳಂಬೆಳಗ್ಗೆ ದೇವರ ಮೋರೆ ಹೋದ ಕಾಂಗ್ರೆಸ್ ಅಭ್ಯರ್ಥಿ ತರೂರ್,ಗೆಲುವಿನ ವಿಶ್ವಾಸ
2019-05-23 06:46:52
ಮೋದಿ, ಮೋದಿ ಎಂಬ ಹರ್ಷೋದ್ಘಾರ... ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಗಿ
- ಭಾರಿ ಕುತೂಹಲ ಮೂಡಿಸಿರುವ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಮಹತ್ವದ ಜನಾದೇಶಕ್ಕೆ ದೇಶದ ಜನರು ತುದಿಗಾಲ ಮೇಲೆ ನಿಂತಿದ್ದಾರೆ. ಇಂದಿನ ಫಲಿತಾಂಶ ಮುಂದಿನ ಐದು ವರ್ಷಗಳ ಕಾಲ ದೇಶದ ಚುಕ್ಕಾಣಿ ಯಾರಿಗೆ ಸಿಗಲಿದೆ ಎಂಬ ತೆರೆಗೆ ಬ್ರೇಕ್ ಬೀಳಲಿದೆ.
- 543 ಕ್ಷೇತ್ರಗಳ ಪೈಕಿ 522 ಕ್ಷೇತ್ರಗಳಲ್ಲಿ ಮತದಾನ
- ಒಟ್ಟು 7 ಹಂತಗಳಲ್ಲಿ ನಡೆದಿರುವ ಮತದಾನ
- ಮ್ಯಾಜಿಕ್ ನಂಬರ್ 271
- ಒಟ್ಟು ಅಭ್ಯರ್ಥಿಗಳು 8,049
- ಮತದಾನ ಪ್ರಮಾಣ ಶೇ67.11
- ಫಲಿತಾಂಶ 4 ಗಂಟೆ ವಿಳಂಬ
- ಬಿಜೆಪಿ ನೇತೃತ್ವದ ಎನ್‌ಡಿಎ, ಕಾಂಗ್ರೆಸ್ ನೇತೃತ್ವದ ಯುಪಿಎ, ಮಹಾಘಟಬಂಧನ್, ತೃಣಮೂಲ ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ
- ಎಣಿಕೆ ಕೇಂದ್ರಗಳಲ್ಲಿ ಸ್ಟ್ರಾಂಗ್ ರೂಮ್ ಓಪನ್,8ಗಂಟೆಗೆ ಮತ ಎಣಿಕೆ ಕಾರ್ಯ ಪ್ರಾರಂಭ
- ಮೊದಲಿಗೆ ಅಂಚೆ ಮತಗಳ ಎಣಿಕೆ ಕಾರ್ಯ
- ಮಂತ ಎಣಿಕೆ ಕೇಂದ್ರಗಳಲ್ಲಿ ಭಾರಿ ಪೊಲೀಸ್ ಬಂದೋಬಸ್ತ್