ನವದೆಹಲಿ: ಲೋಕಸಭಾ ಚುನಾವಣೆಯ 6ನೇ ಹಂತದ ವೋಟಿಂಗ್ ಇಂದು ನಡೆಯಲಿದ್ದು, 7 ರಾಜ್ಯಗಳ 59 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. 10 ಕೋಟಿ ಮತದಾರರು ಒಟ್ಟು 979 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧರಿಸಲಿದ್ದಾರೆ.
ಬಿಹಾರ,ಜಾರ್ಖಂಡ್,ಮಧ್ಯಪ್ರದೇಶ,ಉತ್ತರಪ್ರದೇಶ,ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ದೆಹಲಿಯಲ್ಲಿ ಮತದಾನ ನಡೆಯಲಿದೆ. ಪ್ರಮುಖವಾಗಿ ಕಣದಲ್ಲಿ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್,ಕೇಂದ್ರ ಸಚಿವೆ ಮನೇಕಾ ಗಾಂಧಿ, ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್, ದೆಹಲಿ ಮಾಜಿ ಸಿಎಂ ಶೀಲಾ ದಿಕ್ಷಿತ್, ಸಾಧ್ವಿ ಪ್ರಗ್ಯಾ ಠಾಕೂರ್, ಮನೋಜ್ ತಿವಾರಿ,ಹರ್ಷವರ್ಧನ್,ಗೌತಮ್ ಗಂಭೀರ್ ಹಾಗೂ ಬಾಕ್ಸರ್ ವಿಜೇಂದರ್ ಸಿಂಗ್ ಸೇರಿದಂತೆ ಪ್ರಮುಖ ನಾಯಕನ ಭವಿಷ್ಯ ಇಂದು ನಿರ್ಧಾರವಾಗಲಿದೆ.