ಒಡಿಶಾ: ಅಪರೂಪದ ಮತ್ತು ಅತ್ಯಂತ ವಿರಳವಾದ ಹಳದಿ ಆಮೆಯೊಂದನ್ನು ನಿನ್ನೆ ಸ್ಥಳೀಯರು ರಕ್ಷಿಸಿ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಸ್ತಾಂತರಿಸಿದ ಘಟನೆ ಒಡಿಶಾದ ಬಾಲಸೋರ್ ಜಿಲ್ಲೆಯ ಸೊರೊ ಬ್ಲಾಕ್‌ನ ಸುಜನ್‌ಪುರ ಗ್ರಾಮದಿಂದ ನಡೆದಿದೆ.
ಹಳದಿ ಆಮೆ ಕುರಿತು ಮಾತನಾಡಿದ ಅರಣ್ಯ ಇಲಾಖೆ ಅಧಿಕಾರಿ ಭನೂಮಿತ್ರ ಆಚಾರ್ಯ, ಇದು ಒಂದು ಅಪರೂಪದ ಸರೀಸೃಪ. ಮೊದಲು ನಾನು ರೀತಿಯ ಮಾದರಿಯನ್ನು ನೋಡಿಲ್ಲ, ಇದೇ ಮೊದಲ ಬಾರಿ ನೋಡುತ್ತಿದ್ದೇನೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
ಇನ್ನು ಆಮೆಯ ಸಂಪೂರ್ಣ ಕವಚ ಮತ್ತು ದೇಹ ಹಳದಿ ಬಣ್ಣದಿಂದ ಕೂಡಿದೆ. ಕಳೆದ ತಿಂಗಳು ಒಡಿಶಾದ ಮಯೂರ್ಭಂಜ್ ಜಿಲ್ಲೆಯ ಅಣೆಕಟ್ಟೆಯೊಂದರಲ್ಲಿ ಅಪರೂಪದ ಜಾತಿಯ ಟ್ರಯೊನಿಚಿಡೆ ಆಮೆ ಮೀನುಗಾರರು ಹಿಡಿದಿದ್ದರು. ಅದನ್ನು ಅರಣ್ಯ ಇಲಾಖೆ ಹತ್ತಿರದ ಅಣೆಕಟ್ಟೆಗೆ ಬಿಟ್ಟಿತ್ತು. ಈ ರೀತಿಯ ಆಮೆಗಳು ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕದಲ್ಲಿ ಕಂಡು ಬರುತ್ತವೆ.
ಇನ್ನು ಅರಣ್ಯ ಇಲಾಖೆಯ ಪ್ರಕಾರ, ಆಮೆ 30 ಕಿಲೋ ಗ್ರಾಂಗಳಿಗಿಂತ ಹೆಚ್ಚು ತೂಕವಿದ್ದು, ಅದರ ಗರಿಷ್ಠ ಜೀವನ ಅವಧಿ 50 ವರ್ಷಗಳು ಎಂದು ಅಂದಾಜಿಸಿದೆ.