ಕರ್ನಾಟಕ

karnataka

ETV Bharat / briefs

ಲಿಂಗಸುಗೂರು ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಜಯ - ರಾಯಚೂರು ಎಪಿಎಂಸಿ ಚುನಾವಣೆ

ಲಿಂಗಸುಗೂರು ಎಪಿಎಂಸಿ ಅಧ್ಯಕ್ಷರಾಗಿ ಬಿಜೆಪಿ ಅಭ್ಯರ್ಥಿಗಳಾದ ಮಲ್ಲರಡ್ಡೆಪ್ಪ ಕುರುಬರ, ಉಪಾಧ್ಯಕ್ಷರಾಗಿ ಅಮರೇಶ ಹಿರೆಹೆಸರೂರ ಆಯ್ಕೆಯಾಗಿದ್ದಾರೆ.

Lingasuguru apmc election results
Lingasuguru apmc election results

By

Published : Jun 4, 2020, 11:48 PM IST

ರಾಯಚೂರು :ಜಿಲ್ಲೆಯ ಲಿಂಗಸುಗೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಅಧ್ಯಕ್ಷರಾಗಿ ಮಲ್ಲರಡ್ಡೆಪ್ಪ ಕುರುಬರ, ಉಪಾಧ್ಯಕ್ಷರಾಗಿ ಅಮರೇಶ ಹೆಸರೂರು ಆಯ್ಕೆಗೊಂಡಿದ್ದಾರೆ.

ಗುರುವಾರ ಎಪಿಎಂಸಿ ಸಭಾಂಗಣದಲ್ಲಿ ಜರುಗಿದ ಚುನಾವಣ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲರಡ್ಡೆಪ್ಪ ಕುರುಬರ ಪ್ರತಿ ಸ್ಪರ್ಧಿಯಾಗಿ ಹನುಮಂತಪ್ಪ ಅಗಲ್ದಾಳ ನಾಮಪತ್ರ ಸಲ್ಲಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಅಮರೇಶ ಹಿರೆಹೆಸರೂರ, ಪ್ರತಿ ಸ್ಪರ್ಧಿಯಾಗಿ ಗ್ಯಾನನಗೌಡ ನಾಗಲಾಪುರ ನಾಮಪತ್ರ ಸಲ್ಲಿಸಿದ್ದರು.

ಲಿಂಗಸುಗೂರು ಎಪಿಎಂಸಿ ಚುನಾವಣೆ

ಮಧ್ಯಾಹ್ನ 15 ಜನ ನಿರ್ದೇಶಕರ ಸಭೆಯಲ್ಲಿ ನಾಮಪತ್ರ ಪರಿಶೀಲಿಸಿದ ನಂತರದಲ್ಲಿ ಮತದಾನದ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ನಡೆಸಲಾಯಿತು.

ಮಲ್ಲರಡ್ಡೆಪ್ಪ ಕುರುಬರ 10 ಮತ, ಹನುಮಂತಪ್ಪ ಅಗಲ್ದಾಳ 5 ಮತ . ಉಪಾಧ್ಯಕ್ಷ ಸ್ಥಾನದ ಅಮರೇಶ್​ ಹಿರೆಹೆಸರೂರು 09 ಮತ, ಗ್ಯಾನನಗೌಡ ನಾಗಲಾಪುರ 06 ಮತಗಳನ್ನು ಪಡೆದರು.

ಬಿಜೆಪಿ ವಿಜಯೋಯ್ಸವ

ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಬಿಜೆಪಿ ತಾಲೂಕು ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ ನೇತೃತ್ವದಲ್ಲಿ ಅಧ್ಯಕ್ಷ, ಉಪಾಧ್ಯಕ್ಷರಿಗೆ ಹೂಮಾಲೆ ಹಾಕಿ, ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.

ABOUT THE AUTHOR

...view details