ವಿಜಯಪುರ : ಸಾರಿಗೆ ನೌಕರರಿಗೆ ಸರ್ಕಾರಿ ಸೌಲಭ್ಯ, ಪಿಂಚಣಿ ದೊರಕಿಸಿಕೊಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪತ್ರ ಚಳವಳಿ ನಡೆಯುತ್ತಿದೆ. ಜಿಲ್ಲೆಯ ಮುದ್ಬಿದೇಹಾಳ ತಾಲೂಕಿನ ಸಾರಿಗೆ ಘಟಕದ ಎಲ್ಲಾ ವಿಭಾಗದ ನೌಕರರು ಸಹ ಈ ಚಳವಳಿಗೆ ಬೆಂಬಲ ಸೂಚಿಸಿದ್ದಾರೆ.
ಸರ್ಕಾರಿ ಸೌಲಭ್ಯ, ಪಿಂಚಣಿಗಾಗಿ ಆಗ್ರಹಿಸಿ ಪತ್ರ ಚಳವಳಿ: ಮುದ್ದೇಬಿಹಾಳದಲ್ಲೂ ಪ್ರತಿಭಟನೆ - undefined
ಸಾರಿಗೆ ನೌಕರರಿಗೆ ಸರ್ಕಾರಿ ಸವಲತ್ತು, ಸರ್ಕಾರಿ ಪಿಂಚಣಿ ದೊರಕಿಸಿಕೊಡುವಂತೆ ಆಗ್ರಹಿಸಿ ಮುದ್ದೇಬಿಹಾಳ ತಾಲೂಕಿನ ಸಾರಿಗೆ ಘಟಕದ ಎಲ್ಲಾ ವಿಭಾಗದ ನೌಕರರು ಪತ್ರ ಚಳವಳಿ ನಡೆಸಿದರು.
![ಸರ್ಕಾರಿ ಸೌಲಭ್ಯ, ಪಿಂಚಣಿಗಾಗಿ ಆಗ್ರಹಿಸಿ ಪತ್ರ ಚಳವಳಿ: ಮುದ್ದೇಬಿಹಾಳದಲ್ಲೂ ಪ್ರತಿಭಟನೆ](https://etvbharatimages.akamaized.net/etvbharat/prod-images/768-512-3575734-thumbnail-3x2-ksrtc.jpg)
ನಾವು ರಾಜ್ಯ ಸರ್ಕಾರದ ಸಾರಿಗೆ ನೌಕರರು, ಸರ್ಕಾರ ಹೇಳಿದ್ದನ್ನು ಚಾಚೂ ತಪ್ಪದೇ ಕೇಳುವಂಥವರು. ಆದರೆ, ಈವರೆಗೆ ಎಲ್ಲ ಸರ್ಕಾರಗಳು ನಮ್ಮನ್ನು ಮಲತಾಯಿ ಧೋರಣೆಯಿಂದ ನೋಡಿಕೊಂಡು ಬರುತ್ತಿವೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರುಗಳಿಗೆ ಮನವಿ ಪತ್ರ ಸಲ್ಲಿಸಿದ್ದುಮ, ಸಚಿವರಿಗೂ ಈ ವಿಷಯ ತಿಳಿಸಿದ್ದೇವೆ. ಎಲ್ಲರೂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಇನ್ನು ಸಿಎಂ ಕುಮಾರಸ್ವಾಮಿ ಅವರು ಕೂಡ ಚುನಾವಣಾ ಪೂರ್ವದಲ್ಲಿ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಆಶ್ವಾಸನೆಗಳನ್ನು ನೀಡಿದ್ದರು. ಆದ್ರೆ ಈವರೆಗೆ ಯಾವುದೇ ಭರವಸೆ ಕಾರ್ಯ ರೂಪಕ್ಕೆ ಬಂದಿಲ್ಲ. ಈ ಪತ್ರ ಚಳವಳಿ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರ ಮುಂದಿಡುತ್ತಿದ್ದೇವೆ ಎಂದು ನೌಕರರು ಹೇಳಿದರು.