ನವದೆಹಲಿ: ಲಿಬಿಯಾ ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ಉಂಟಾದ ಹಿನ್ನೆಲೆಯಲ್ಲಿ ರಾಜಧಾನಿ ಟ್ರಿಪೋಲಿಯನ್ನು ತಕ್ಷಣವೇ ತೊರೆಯುವಂತೆ ಭಾರತೀಯ ನಿವಾಸಿಗಳಿಗೆ ಸುಷ್ಮಾ ಸ್ವರಾಜ್ ಟ್ವೀಟ್ ಮೂಲಕ ಮನವಿ ಮಾಡಿದ್ದಾರೆ.
ತಕ್ಷಣವೇ ಎಲ್ಲ ಭಾರತೀಯರು ಟ್ರಿಪೋಲಿಯನ್ನು ತೊರೆಯಿರಿ. ನಂತರದಲ್ಲಿ ನಿಮ್ಮನ್ನು ಸ್ಥಳಾಂತರ ಮಾಡುವುದು ಅಸಾಧ್ಯ ಎಂದು ಭಾರತೀಯ ವಿದೇಶಾಂಗ ಸಚಿವೆ ಟ್ವೀಟ್ ಮಾಡಿದ್ದಾರೆ.
ಲಿಬಿಯಾದಿಂದ ಈಗಾಗಲೇ ಸಾವಿರಾರು ಭಾರತೀಯರನ್ನು ಸುರಕ್ಷಿತವಾಗಿ ಕರೆತರಲಾಗಿದ್ದರೂ ರಾಜಧಾನಿ ಟ್ರಿಪೋಲಿಯಲ್ಲಿ ಇನ್ನೂ 500ಕ್ಕೂ ಅಧಿಕ ಭಾರತೀಯರು ವಾಸವಾಗಿದ್ದಾರೆ.