ರಾಣೆಬೆನ್ನೂರು(ಹಾವೇರಿ):ಕೊರೊನಾ ಹಿನ್ನೆಲೆ ಇಂದು ವಾರದ ಕರ್ಫ್ಯೂ ಜಾರಿ ಮಾಡಲಾಗಿದ್ದು, ರಾಣೆಬೆನ್ನೂರು ನಗರದಲ್ಲಿ ಅನಾವಶ್ಯಕ ಓಡಾಟ ನಡೆಸಿದ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು.
ಇಂದು ಬೆಳಗ್ಗೆಯಿಂದ ರಾಣೆಬೆನ್ನೂರು ನಗರದಲ್ಲಿ ಯಾವುದೇ ಅಂಗಡಿ - ಮುಂಗಟ್ಟುಗಳು ಬಾಗಿಲು ತೆರೆದಿರಲಿಲ್ಲ. ಈ ನಡುವೆ ಬೆಳಗ್ಗೆ ಕಿರಾಣಿ, ತರಕಾರಿ, ಹಾಲಿನ ಅಂಗಡಿಗಳಿಗೆ ಹತ್ತು ಗಂಟೆಯವರೆಗೆ ವಿನಾಯಿತಿ ನೀಡಲಾಗಿತ್ತು. ನಂತರ ಎಲ್ಲಾ ಅಂಗಡಿಗಳನ್ನು ಪೋಲಿಸರು ಬಂದ್ ಮಾಡಿಸಿದರು. ಉಳಿದಂತೆ ಆಸ್ಪತ್ರೆ ಮತ್ತು ಔಷಧ ಅಂಗಡಿಗಳು ಎಂದಿನಂತೆ ಬಾಗಿಲು ತೆರದಿದ್ದವು.