ಮೊಹಾಲಿ: ಪ್ರಸಕ್ತ ಸಾಲಿನ 12ನೇ ಆವೃತ್ತಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್‌ಸಿಬಿ ಮೊದಲ ಗೆಲುವು ದಾಖಲು ಮಾಡಿದೆ. ಸತತ ಆರು ಸೋಲುಗಳಿಂದ ಕಂಗೆಟ್ಟಿದ್ದ ಆರ್‌ಸಿಬಿ ಕೊನೆಗೂ ಪಂಜಾಬ್ ವಿರುದ್ಧ 8 ವಿಕೆಟ್ಗಳ ಗೆಲುವು ದಾಖಲಿಸಿ, ಅಂಕಪಟ್ಟಿಯಲ್ಲಿ ಗೆಲುವಿನ ಖಾತೆ ತೆರೆದಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕ್ರಿಸ್ ಗೇಲ್ (99) ರನ್ಗಳ ನೆರವಿನಿಂದ 20 ಓವರ್‌ಗಳಲ್ಲಿ 4ವಿಕೆಟ್ ಕಳೆದುಕೊಂಡು173 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿತು. ಆರ್‌ಸಿಬಿ ಪರ ಚಹಾಲ್ 2ವಿಕೆಟ್, ಮೊಯಿನ್ ಅಲಿ ಹಾಗೂ ಸಿರಾಜ್ 1ವಿಕೆಟ್ ಪಡೆದರು.
174 ರನ್ಗಳ ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ನಾಯಕ ವಿರಾಟ್ ಕೊಹ್ಲಿ ಹಾಗೂ ಪಾರ್ಥಿವ್ ಪಟೇಲ್ ಮೊದಲ ವಿಕೆಟ್ನಕ್ಕೆ 3.5 ಓವರ್‌ಗಳಲ್ಲಿ 43 ರನ್ ಸೇರಸಿ ಉತ್ತಮ ಆರಂಭ ಒದಗಿಸಿದರು.
ಈ ವೇಳೆ 9 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ19 ರನ್ಗಳಿಸಿದ್ದ ಪಾರ್ಥಿವ್ ಪಟೇಲ್ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ತದನಂತರ ಒಂದಾದ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ತಂಡವನ್ನ ಜವಾಬ್ದಾರಿಯುತವಾಗಿ ಮುನ್ನಡೆಸಿದರು. ಈ ಜೋಡಿ 2ನೇ ವಿಕೆಟ್ಗೆ 85 ರನ್ಗಳ ಜೊತೆಯಾಟ ನೀಡಿದರು.
ಇನ್ನು ಅದ್ಭುತವಾಗಿ ಬ್ಯಾಟ್ ಬೀಸಿದ ಕೊಹ್ಲಿ 37ನೇ ಐಪಿಎಲ್ ಫಿಫ್ಟಿ ದಾಖಲಿಸಿ 59ರನ್ಗಳಿಸಿದ್ದ ವೇಳೆ ದೊಡ್ಡ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಆದರೆ ಎಬಿಡಿ ಮಾತ್ರ ತಮ್ಮ ಬ್ಯಾಟಿಂಗ್ ಶೈಲಿ ಮುಂದುವರೆಸಿ ಸ್ಟೋಯ್ನಿಸ್ ಜೊತೆ ಮೂರನೇ ವಿಕೆಟ್ಗೆ 46 ರನ್ಗಳ ಜೊತೆಯಾಟ ನಡೆಸಿ ಗೆಲುವಿನ ದಡ ಸೇರಸಿದರು. ಸ್ಟೋಯ್ನಿಸ್ 16 ಎಸೆತಗಳಲ್ಲಿ 28 ರನ್ಗಳಿಕೆ ಮಾಡಿ ತಂಡವನ್ನ ಗೆಲುವಿನ ದಡ ಸೇರಿಸಿದರು. ಇನ್ನು ಎಬಿಡಿ 38 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 59ರನ್ಗಳಿಕೆ ಗಳಿಸಿ ಅಜೇಯರಾಗಿ ಉಳಿದರು.
ತಂಡ ಕೊನೆಯದಾಗಿ 19.2 ಓವರ್‌ಗಳಲ್ಲಿ 2ವಿಕೆಟ್ ಕಳೆದುಕೊಂಡು174ರನ್ಗಳಿಸಿ ಗೆಲುವಿನ ಗುರಿ ಮುಟ್ಟಿತ್ತು. ಇತ್ತ ಪಂಜಾಬ್ ಪರ ಶಮಿ ಹಾಗೂ ಅಶ್ವಿನ್ ತಲಾ 1ವಿಕೆಟ್ ಪಡೆದುಕೊಂಡರು.