ಕರ್ನಾಟಕ

karnataka

By

Published : Mar 30, 2019, 6:38 PM IST

Updated : Mar 30, 2019, 8:01 PM IST

ETV Bharat / briefs

ಮುಂದುವರಿದ ಅಂಪೈರ್​ಗಳ ಬೇಜವಾಬ್ದಾರಿತನ...  ಫಸ್ಟ್​ ಓವರ್​ನಲ್ಲೇ 7 ಎಸೆತ ಹಾಕಿದ ಅಶ್ವಿನ್​!

ಕೊನೆಯ ಎಸೆತದಲ್ಲಿ ನೋಬಾಲ್​ ಆಗಿದ್ದರೂ ಗಮನಿಸದ ಅಂಪೈರ್​ ಆರ್​ಸಿಬಿ ಸೋಲಿಗೆ ಕಾರಣರಾಗಿದ್ದರು. ಆದರೆ ಇಂದಿನ ಪಂದ್ಯದಲ್ಲಿ ಆರಂಭಿಕ ಓವರ್​ನಲ್ಲೆ ಓವರ್​ ಮುಗಿದಿದ್ದರು ತಿಳಿಸದೇ ಅಂಪೈರ್​ಗಳು ಪ್ರಮಾದ ಎಸೆಗಿದ್ದಾರೆ

ಅಶ್ವಿನ್

ಮೊಹಾಲಿ: ಈ ಬಾರಿ ಐಪಿಎಲ್​ನಲ್ಲಿ ವಿವಾದಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅಂಪೈರ್​ಗಳ ಬೇಜವಾಬ್ದಾರಿತನ ಇಂದಿನ ಪಂದ್ಯದಲ್ಲೂ ಮುಂದುವರಿದಿದ್ದು, ಓವರ್​ ಒಂದರಲ್ಲಿ 7 ಎಸೆತ ಎಸೆದಿರುವ ಘಟನೆ ನಡೆದಿದೆ.

ಇಂದಿನ ಪಂದ್ಯದಲ್ಲಿ ಕಿಂಗ್ಸ್​ ಇಲೆವೆನ್​ ಪಂಜಾಬ್​ ಹಾಗೂ ಮುಂಬೈ ಇಂಡಿಯನ್ಸ್​ ಮುಖಾಮುಖಿಯಾಗಿದ್ದು, ಕಿಂಗ್ಸ್​ ನಾಯಕ ಅಶ್ವಿನ್​ ಎಸೆದ ಮೊದಲ ಓವರ್​ನಲ್ಲಿ ಅಂಪೈರ್​ ಪ್ರಮಾದದಿಂದ 7 ಎಸೆತ ಎಸೆದಿದ್ದಾರೆ.

ಇನ್ನಿಂಗ್ಸ್​​ನ ಆರಂಭದ ಓವರ್​ನಲ್ಲಿ ಅಶ್ವಿನ್​ರ​ 6 ಎಸೆತ ಮುಗಿದರೂ ಅಂಪೈರ್​ ಓವರ್​ ಪೂರ್ಣಗೊಳಿಸದಿದ್ದರಿಂದ 7ನೇ ಎಸೆತವನ್ನು ಅಶ್ವಿನ್​ ಎಸೆದಿದ್ದಾರೆ. ಈ ಬಾಲನ್ನು ಕ್ವಿಂಟನ್​ ಡಿ ಕಾಕ್​ ಬೌಂಡರಿ ಬಾರಿಸಿದ್ದಾರೆ.

ಮೊನ್ನೆಯಷ್ಟೇ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ ನಿರ್ಣಾಯಕವಾಗಿದ್ದ ಕೊನೆಯ ಎಸೆತ ನೋಬಾಲ್​ ಆಗಿದ್ದರೂ ಗಮನಿಸದ ಅಂಪೈರ್​ ಆರ್​ಸಿಬಿ ಸೋಲಿಗೆ ಕಾರಣರಾಗಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ಆರ್​ಸಿಬಿ ನಾಯಕ ಇದು ಕ್ಲಬ್​ ಲೆವೆಲ್​ ಕ್ರಿಕೆಟ್​ ಅಲ್ಲ. ಅಂಪೈರ್​ಗಳು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅಂಪೈರ್​ಗಳ ವಿರುದ್ಧ ಕಿಡಿಕಾರಿದ್ದರು.

ಇದೀಗ ಕೇವಲ 2 ದಿನದಲ್ಲೇ ಅಂಪೈರ್​ಗಳು ಮತ್ತೊಂದು ಪ್ರಮಾದ ಎಸಗಿದ್ದು, ಐಪಿಎಲ್​ನಂತಹ ದೊಡ್ಡ ಮಟ್ಟದ ಟೂರ್ನಿಗಳಲ್ಲಿ ಹೀಗಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ.

Last Updated : Mar 30, 2019, 8:01 PM IST

ABOUT THE AUTHOR

...view details