ನವದೆಹಲಿ: ಐಪಿಎಲ್ 12 ರ ಆವೃತ್ತಿಯ 37 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ.
ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಡೆಲ್ಲಿ, ಮೊನ್ನೆ ತವರಿನಲ್ಲೆ ಮುಂಬೈ ವಿರುದ್ಧ ಸೋಲು ಕಂಡು 3 ನೇ ಸ್ಥಾನಕ್ಕೆ ಕುಸಿದಿತ್ತು. ಇದೇ ಆವೃತ್ತಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್ ತಂಡದ ಸ್ಯಾಮ್ ಕರನ್ ಮಾರಕ ದಾಳಿಗೆ ಸಿಲುಕಿ 21 ಎಸೆತಗಳಲ್ಲಿ 24 ರನ್ ಗಳಿಸಲಾಗದೆ ಡೆಲ್ಲಿ ತಂಡ ಹೀನಾಯ ಸೋಲು ಅನುಭವಿಸಿತ್ತು. ಇಂದು ಆರ್. ಅಶ್ವಿನ್ ಬಳಗವನ್ನು ಮಣಿಸಿ ಸೇಡು ತೀರಿಸಿಕೊಳ್ಳವ ತವಕದಲ್ಲಿದೆ ಡೆಲ್ಲಿ ತಂಡ.
ಕಳೆದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿರುವ ವಿಶ್ವಾಸದಲ್ಲಿರುವ ಪಂಜಾಬ್, ತನ್ನ ಜಯದ ಓಟವನ್ನು ಮುಂದುವರಿಸಿ ಪ್ಲೆ ಆಫ್ ಖಚಿತಪಡಿಸಿಕೊಳ್ಳುವ ತವಕದಲ್ಲಿದೆ.
ಮುಖಾಮುಖಿ:
ಎರಡೂ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು,ಪಂಜಾಬ್ 14 ಪಂದ್ಯಗಳಲ್ಲಿ, ಡೆಲ್ಲಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇನ್ನು ದೆಹಲಿಯಲ್ಲಿ ನಡೆದಿರುವ 10 ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ 5 ಪಂದ್ಯಗಳಲ್ಲಿ ಜಯ ಸಾಧಿಸಿವೆ.