ಕರ್ನಾಟಕ

karnataka

ETV Bharat / briefs

ಕಮ್ಮಾರ ಸಮಾಜಕ್ಕೆ ಆರ್ಥಿಕ ನೆರವು ನೀಡುವಂತೆ ಒತ್ತಾಯ - Koppal district news

ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಅದಕ್ಕಾಗಿ ಇತರೇ ಕುಲ ಕುಸುಬುದಾರರಿಗೆ ಪರಿಹಾರ ನೀಡಿದಂತೆ, ಕಮ್ಮಾರ ಸಮುದಾಯಕ್ಕೂ ಪರಿಹಾರ ಘೋಷಿಸುವಂತೆ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಮನವಿ ಮಾಡಲಾಯಿತು.

Kustagi blacksmith workers problem
Kustagi blacksmith workers problem

By

Published : Jun 7, 2020, 12:37 AM IST

ಕುಷ್ಟಗಿ: ಲಾಕ್​ಡೌನ್ ಸಂಧರ್ಭದಲ್ಲಿ ಕಮ್ಮಾರಿಕೆ ವೃತ್ತಿಯವರು ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದ್ದು ಸರ್ಕಾರ ನೆರವಿಗೆ ಬಂದು ಪ್ಯಾಕೇಜ್ ಪರಿಹಾರ ಘೋಷಿಸಬೇಕೆಂದು ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರಿಗೆ ಕಮ್ಮಾರ ಸಮುದಾಯದಿಂದ ಮನವಿ ಸಲ್ಲಿಸಲಾಯಿತು.

ಆರ್ಥಿಕ ನೆರವು ನೀಡುವಂತೆ ಕಮ್ಮಾರ ಸಮುದಾಯ ಮುಖಂಡರ ಮನವಿ
ಕೃಷಿ ಚಟುವಟಿಕೆಗಳನ್ನು ನಂಬಿ ಜೀವನ ನಡೆಸುವ ಕಮ್ಮಾರಿಕೆ ಸಮಾಜ, ಸದ್ಯ ಸಂಕಷ್ಟದ ಪರಿಸ್ಥಿತಿಯಲ್ಲಿದೆ. ಲಾಕ್ ಡೌನ್​ನಿಂದಾಗಿ ಗೃಹ ನಿರ್ಮಾಣ, ಕೃಷಿ ಚಟುವಟಿಕೆಗಳು ಕಡಿಮೆಯಾದ ಹಿನ್ನೆಲೆ ಜೀವನ ಸಾಗಿಸುವುದು ಕಷ್ಟಕರವಾಗಿದೆ. ಅದಕ್ಕಾಗಿ ಇತರೇ ಕುಲ ಕುಸುಬುಗಳಿಗೆ ಪರಿಹಾರ ನೀಡಿದಂತೆ, ಈ ಸಮಾಜಕ್ಕೂ ನೀಡಬೇಕು ಎಂದು ಅಧ್ಯಕ್ಷ ಪರಶುರಾಮ ಕಮ್ಮಾರ ಮನವಿ ಮಾಡಿದರು.ಮನವಿ ಸ್ವೀಕರಿಸಿದ ಶಾಸಕರು ಕಮ್ಮಾರಿಕೆ ಸಮುದಾಯದ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ABOUT THE AUTHOR

...view details