ಹೈದರಾಬಾದ್:ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿ ಮುಕ್ತಾಯವಾಗಿ ಮೂರು ದಿನ ಕಳೆದಿದೆ. ಕ್ರಿಕೆಟ್ ಪ್ರಿಯರ ಚಿತ್ತ ಇದೀಗ ಆಂಗ್ಲರ ನಾಡಿನಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿ ಮೇಲೆ ನೆಟ್ಟಿದೆ.
ಐಪಿಎಲ್ ಟೂರ್ನಿಯ ಮಧ್ಯಭಾಗದಲ್ಲಿ ಮಹತ್ವದ ವಿಶ್ವಕಪ್ಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿತ್ತು. ಖುಷಿಯ ವಿಚಾರವೆಂದರೆ ವಿಶ್ವಕಪ್ ತಂಡದಲ್ಲಿದ್ದ ಬಹುತೇಕ ಎಲ್ಲ ಆಟಗಾರರು ಉತ್ತಮ ಪ್ರದರ್ಶನವನ್ನೇ ತೋರಿದ್ದು ಮಹತ್ವದ ಟೂರ್ನಿಯ ಮೇಲೆ ನಿರೀಕ್ಷೆ ಹೆಚ್ಚಿಸಿದ್ದಾರೆ.
ಟೀಮ್ ಇಂಡಿಯಾ ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಕಳೆದ ವರ್ಷ ಉತ್ತಮ ಸಾಧನೆಗೈದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಗೆಲುವು, ಏಷ್ಯಾಕಪ್ ಗೆಲುವು, ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ, ಆ ಬಳಿಕ ಇಂಗ್ಲೆಂಡ್ ಸರಣಿ ಸೋಲು ಹಾಗೂ ಆಸೀಸ್ ವಿರುದ್ಧ ತವರಿನಲ್ಲಿ ಮುಖಭಂಗ ಅನುಭವಿಸಿತ್ತು.
ಕಳೆದ ಎರಡು ತಿಂಗಳ ಅವಧಿಯಲ್ಲಿ 60 ಪಂದ್ಯಗಳಲ್ಲಿ ವಿಶೇಷವಾಗಿ ಭಾರತೀಯ ಆಟಗಾರರು ಸಾಂಘಿಕ ಪ್ರದರ್ಶನ ತೋರಿದ್ದಾರೆ. ಧೋನಿ ಹಾಗೂ ಕೇದಾರ್ ಜಾಧವ್ ಗಾಯದ ಸಮಸ್ಯೆ ಹೊರತಾಗಿ ಬೇರಾವ ವಿಶ್ವಕಪ್ ತಂಡದ ಆಟಗಾರರು ಐಪಿಎಲ್ ಮಿಸ್ ಮಾಡಿಕೊಂಡಿಲ್ಲ. ಟೀಮ್ ಇಂಡಿಯಾ ಪ್ರಮುಖ ಸ್ಪಿನ್ನರ್ ಕುಲ್ದೀಪ್ ಯಾದವ್ ನೀರಸ ಪ್ರದರ್ಶನ ಆಯ್ಕೆಗಾರರಿಗೆ ಕೊಂಚ ಬೇಸರ ಮೂಡಿಸಿದೆ.
ಈ ಆವೃತ್ತಿಯಲ್ಲಿ ವಿಶ್ವಕಪ್ ತಂಡದಲ್ಲಿರುವ ಆಟಗಾರರ ಐಪಿಎಲ್ ಪ್ರದರ್ಶನ ಹೀಗಿದೆ:
ವಿರಾಟ್ ಕೊಹ್ಲಿ: 14 ಪಂದ್ಯ, 464 ರನ್( 1 ಶತಕ, 2 ಅರ್ಧಶತಕ)
ರೋಹಿತ್ ಶರ್ಮಾ: 15 ಪಂದ್ಯ, 405 ರನ್( 2 ಅರ್ಧಶತಕ)
ಶಿಖರ್ ಧವನ್:16 ಪಂದ್ಯ, 521 ರನ್( 5 ಅರ್ಧಶತಕ)
ವಿಜಯ್ ಶಂಕರ್:15 ಪಂದ್ಯ, 8 ಓವರ್ 1 ವಿಕೆಟ್, 244 ರನ್( 40 ರನ್ ಗರಿಷ್ಠ)
ಕೆ.ಎಲ್.ರಾಹುಲ್: 14 ಪಂದ್ಯ, 593 ರನ್( 1 ಶತಕ, 6 ಅರ್ಧಶತಕ)
ದಿನೇಶ್ ಕಾರ್ತಿಕ್:14 ಪಂದ್ಯ, 253 ರನ್( 2 ಅರ್ಧಶತಕ)
ಯಜುವೇಂದ್ರ ಚಹಲ್: 14 ಪಂದ್ಯ, 18 ವಿಕೆಟ್( ಎಕಾನಮಿ: 7.82)
ಎಂ.ಎಸ್.ಧೋನಿ: 15 ಪಂದ್ಯ, 416 ರನ್( 3 ಅರ್ಧಶತಕ)
ಕೇದಾರ್ ಜಾಧವ್: 14 ಪಂದ್ಯ, 162 ರನ್( 1 ಅರ್ಧಶತಕ)
ಕುಲ್ದೀಪ್ ಯಾದವ್: 9 ಪಂದ್ಯ 4 ವಿಕೆಟ್(ಎಕಾನಮಿ: 8.66)
ಭುವನೇಶ್ವರ್ ಕುಮಾರ್: 15 ಪಂದ್ಯ, 13 ವಿಕೆಟ್(ಎಕಾನಮಿ: 7.81)
ಜಸ್ಪ್ರೀತ್ ಬುಮ್ರಾ: 16 ಪಂದ್ಯ, 19 ವಿಕೆಟ್( ಎಕಾನಮಿ: 6.63)
ಹಾರ್ದಿಕ್ ಪಾಂಡ್ಯ:16 ಪಂದ್ಯ, 402 ರನ್( 1 ಅರ್ಧಶತಕ, ಈ ಆವೃತ್ತಿಯ ವೇಗದ ಅರ್ಧಶತಕ), 14 ವಿಕೆಟ್(ಎಕಾನಮಿ: 9.17)
ರವೀಂದ್ರ ಜಡೇಜಾ:16 ಪಂದ್ಯ, 15 ವಿಕೆಟ್
ಮೊಹಮ್ಮದ್ ಶಮಿ:14 ಪಂದ್ಯ, 19 ವಿಕೆಟ್(ಎಕಾನಮಿ: 8.68)