ಮಂಗಳೂರು:ಕುಕ್ಕೆ ಸುಬ್ರಮಣ್ಯ ದೇಗುಲದ ರಥಕ್ಕೆ ಚಿನ್ನದ ಲೇಪನ ಮಾಡಿಸಲು ಸರ್ಕಾರದ ಬೊಕ್ಕಸದಿಂದ 85 ಕೋಟಿ ಖರ್ಚು ಮಾಡಬೇಕೆಂಬ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ನಿರ್ಧಾರ ರೈತಾಪಿ ವರ್ಗ ಹಾಗೂ ನೆಟ್ಟಿಗರನ್ನು ಕೆರಳಿಸಿದೆ.
ಹೆಚ್ಡಿಕೆ ಅವರು ರಥಕ್ಕೆ ಚಿನ್ನ ಲೇಪನ ಮಾಡಿಸಲು ಅನುಮೋದನೆ ನೀಡುವ ಬದಲು ರೈತರ ಸಾಲ ಮನ್ನಾಗಾಗಿ ಅದೇ ದುಡ್ಡನ್ನು ಏಕೆ ಕೊಡಲಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಹರಕೆ ಹೊತ್ತಿರುವ ಹೆಚ್ಡಿಕೆ ಅವರು ಅವರ ಕುಟುಂಬದ ಗುರುಗಳಾದ ದ್ವಾರಕನಾಥ್ ಅವರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೆಲವರು ಕುಟುಕಿದ್ದಾರೆ.
ರಥಕ್ಕೆ ಚಿನ್ನ ಲೇಪನ ಮಾಡಿಸಲು ಮೀಸಲಿಟ್ಟಿರುವ ಹಣವನ್ನು ನದಿ ಸ್ವಚ್ಛತೆಗಾದರೂ ಬಳಸಿ ಎಂಬ ಸಲಹೆಗಳೂ ಕೇಳಿಬರುತ್ತಿವೆ. ಕೆಲವರು ನಾಜೂಕಾಗಿ ಹೆಚ್ಡಿಕೆ ಅವರಿಗೆ ಸಲಹೆ ನೀಡಿದ್ದರೆ, ಇನ್ನೂ ಕೆಲವರು ಕಟುವಾದ ಪದಗಳಲ್ಲಿ ಕುಟುಕಿದ್ದಾರೆ.