ಬಳ್ಳಾರಿ: ಕೊರೊನಾ ಎರಡನೇ ಅಲೆ ಹೆಚ್ಚಾದ ಹಿನ್ನೆಲೆಯಲ್ಲಿ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆಗೆ ಬಳ್ಳಾರಿಯಿಂದ ಕಾರ್ಮಿಕರನ್ನು ಕರೆದೊಯ್ಯುವ ಬಸ್ಗಳನ್ನ ಕುಡಿತಿನಿ ಬಳಿ ಗ್ರಾಮಸ್ಥರು ತಡೆದರು.
ಕುರಿ ಹಿಂಡಿನಂತೆ ಕಾರ್ಮಿಕರನ್ನು ಕರೆದೊಯ್ದ್ರೆ ಹ್ಯಾಂಗೆ.. ಜಿಂದಾಲ್ ಬಸ್ಗಳನ್ನ ತಡೆದು ಕುಡಿತಿನಿ ಗ್ರಾಮಸ್ಥರ ಆಕ್ರೋಶ - ಜಿಂದಾಲ್ ಸಮೂಹ ಸಂಸ್ಥೆ
ಪ್ರತಿದಿನ ಬಳ್ಳಾರಿಯಿಂದ ಕುಡಿತಿನಿ ಮಾರ್ಗವಾಗಿ ಜಿಂದಾಲ್ ಸಮೂಹ ಸಂಸ್ಥೆಯ ಕಾರ್ಖಾನೆಗೆ ಕರೆದೊಯ್ಯುವ ಬಸ್ಗಳನ್ನ ಮಾರ್ಗ ಮಧ್ಯೆಯೇ ತಡೆದು ಬಸ್ಸಿನೊಳಗಿದ್ದವರನ್ನ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರತಿದಿನ ಬಳ್ಳಾರಿಯಿಂದ ಕುಡಿತಿನಿ ಮಾರ್ಗವಾಗಿ ಜಿಂದಾಲ್ ಸಮೂಹ ಸಂಸ್ಥೆಯ ಕಾರ್ಖಾನೆಗೆ ಕಾರ್ಮಿಕರನ್ನು ಕರೆದೊಯ್ಯುವ ಬಸ್ಗಳನ್ನ ಮಾರ್ಗ ಮಧ್ಯೆಯೇ ಕುಡಿತಿನಿ ಪಟ್ಟಣ ಪಂಚಾಯತ್ ಅಧ್ಯಕ್ಷ ರಾಜಶೇಖರ ಅವರು ತಡೆದು ಬಸ್ಸಿನೊಳಗಿದ್ದವರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮಿಂದಲೇ ಕೊರೊನಾ ಸೋಂಕಿನ ಭೀತಿ ಜಾಸ್ತಿಯಾಗುತ್ತಿದೆ ಎಂದು ಕುಡಿತಿನಿ ಗ್ರಾಮಸ್ಥರು ಜಿಂದಾಲ್ ಕಾರ್ಖಾನೆ ನೌಕರರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೊರೊನಾ ಹೆಚ್ಚಾಗೋಕೆ ಜಿಂದಾಲ್ ಕಾರ್ಮಿಕರೇ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ರೀತಿ ಕುರಿ ಹಿಂಡಿನಂತೆ ಬಸ್ಸಿನಲ್ಲಿ ಹೋದ್ರೆ ಹ್ಯಾಂಗೆ. ಕಾರ್ಮಿಕರ ನಡುವೆ ಸಾಮಾಜಿಕ ಅಂತರವನ್ನೇ ಕಾಯ್ದುಕೊಂಡಿಲ್ಲ. ನೀವು ಜಿಂದಾಲ್‌ನಲ್ಲಿ ಇರಿ ಅಥವಾ ನಿಮ್ಮೂರಲ್ಲಿರಿ, ಹೀಗೆ ರೂಲ್ಸ್ ಬ್ರೇಕ್ ಮಾಡಿ ಓಡಾಟ ಮಾಡ್ಬೇಡಿ. ಜಿಂದಾಲ್ ಸಮೂಹ ಸಂಸ್ಥೆಯವರಿಗೆ ಹೇಳಿ ನಿಮಗೆ ಪ್ರತ್ಯೇಕ ರಸ್ತೆಯನ್ನ ಮಾಡ್ಸಿಕೊಳ್ಳಿ. ಹೀಗೆ ತಿರುಗಾಟ ನಡೆಸಿ ಈ ಕೊರೊನಾ ಸೋಂಕನ್ನ ಎಲ್ಲೆಡೆ ಹಬ್ಬಿಸಬೇಡಿ ಎಂದು ಗ್ರಾಮಸ್ಥರು ಹೇಳಿದ್ರು. ಈ ವೇಳೆ ಕೆಲಕಾಲ ಜಿಂದಾಲ್ ಕಾರ್ಮಿಕರು ಮತ್ತು ಕುಡುತಿನಿ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.