ಕರ್ನಾಟಕ

karnataka

ಶ್ರೀಮಂತರು ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಂಡರೆ ಬಡವರು ಸಾಯುತ್ತಿದ್ದಾರೆ: ಕೃಷ್ಣ ಭೈರೇಗೌಡ

By

Published : Jun 4, 2021, 3:11 PM IST

Updated : Jun 4, 2021, 9:24 PM IST

ಸಿಎಂ ವರ್ಸಸ್ ಸಚಿವರ ನಡುವೆ ಮ್ಯಾಚ್ ನಡೆಯುತ್ತಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದರು. ಡಿಸಿಎಂ ವರ್ಸಸ್ ಸಚಿವರ ನಡುವೆ ಮ್ಯಾಚ್ ನಡೆಯುತ್ತಿದೆ. ಸಂಸದರು ವರ್ಸಸ್ ಡಿಸಿಗಳ ನಡುವೆ ಮ್ಯಾಚ್ ನಡೆಯುತ್ತಿದೆ. ಆದರೆ, ಲಸಿಕೆ ಕೊಡುವ ಕಡೆ ಮಾತ್ರ ಇವರ ಗಮನವಿಲ್ಲ..

ಶ್ರೀಮಂತರು ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಂಡರೆ ಬಡವರು ಸಾಯುತ್ತಿದ್ದಾರೆ: ಕೃಷ್ಣ ಭೈರೇಗೌಡ
krishnabairegowda spark against BJP govt

ಬೆಂಗಳೂರು: ಶ್ರೀಮಂತರು ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಳ್ತಿದ್ದಾರೆ. ಬಡವರು ಲಸಿಕೆ ಪಡೆಯದೆ ಸಾಯ್ತಿದ್ದಾರೆ ಎಂದು ಮಾಜಿ ಸಚಿವ ಕೃಷ್ಣ ಭೈರೇಗೌಡ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮಾನವೀಯ ಗುಣ ಸರ್ಕಾರಕ್ಕೆ ಎಲ್ಲಿದೆ?. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುವ ಇವರನ್ನು ಯಾವ ಮಾತಿನಲ್ಲಿ ಎಚ್ಚರಿಸಬೇಕೋ ಗೊತ್ತಿಲ್ಲ. ಸುಪ್ರೀಂಕೋರ್ಟ್ ಸರ್ಕಾರಕ್ಕೆ ಛೀಮಾರಿ ಹಾಕಿದೆ. 150 ರೂ.ಗೆ ಲಸಿಕೆ ಪಡೆಯುವುದಾಗಿ ಕೇಂದ್ರ ಹೇಳಿದೆ. ನಾವು ಹಣವನ್ನ ಕೇಂದ್ರಕ್ಕೆ ಕೊಡ್ತೇವೆ. 150 ರೂ.ಗೆ ನಮಗೂ ಲಸಿಕೆ ಕೊಡಲಿ ಎಂದು ಆಗ್ರಹಿಸಿದರು.

ಶ್ರೀಮಂತರು ದುಡ್ಡು ಕೊಟ್ಟು ಲಸಿಕೆ ಹಾಕಿಸಿಕೊಂಡರೆ ಬಡವರು ಸಾಯುತ್ತಿದ್ದಾರೆ: ಕೃಷ್ಣ ಭೈರೇಗೌಡ

ಖಾಸಗಿ ಆಸ್ಪತ್ರೆಗಳಲ್ಲಿ 1200 ರೂ. ದರಕ್ಕೆ ಲಸಿಕೆ ಲಭ್ಯವಿದೆ. ಕುಂಬಾರ, ಕ್ಷೌರಿಕ, ಬಡವರು ಏನು ಮಾಡಬೇಕು?. ಒಂದು ಕುಟುಂಬ ವ್ಯಾಕ್ಸಿನ್‌ಗೆ ನಾಲ್ಕೈದು ಸಾವಿರ ಕೊಡಬೇಕು. ಬೆವರು ಸುರಿಸುವವರು ಎಲ್ಲಿಂದ ತಂದು ಕೊಡಬೇಕು?. ಬಡವರ ಪ್ರಾಣವನ್ನು ಆಹುತಿ ಕೊಡುತ್ತಿದ್ದಾರಾ?. ಅಂಬಾನಿ,ಅದಾನಿ ಉದ್ಧಾರಕ್ಕೆ ಈ ಸರ್ಕಾರ ಇರೋದಾ? ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಐಪಿಎಲ್ ಮ್ಯಾಚ್ ನಡೆಯುತ್ತಿದೆ :ಸಿಎಂ ವರ್ಸಸ್ ಸಚಿವರ ನಡುವೆ ಮ್ಯಾಚ್ ನಡೆಯುತ್ತಿದೆ ಎಂದು ಶಾಸಕ ರಿಜ್ವಾನ್ ಅರ್ಷದ್ ಆರೋಪಿಸಿದರು. ಡಿಸಿಎಂ ವರ್ಸಸ್ ಸಚಿವರ ನಡುವೆ ಮ್ಯಾಚ್ ನಡೆಯುತ್ತಿದೆ. ಸಂಸದರು ವರ್ಸಸ್ ಡಿಸಿಗಳ ನಡುವೆ ಮ್ಯಾಚ್ ನಡೆಯುತ್ತಿದೆ. ಆದರೆ, ಲಸಿಕೆ ಕೊಡುವ ಕಡೆ ಮಾತ್ರ ಇವರ ಗಮನವಿಲ್ಲ. ಪ್ರಾಥಮಿಕ ಆಸ್ಪತ್ರೆಗಳಲ್ಲೇ ಸಮರ್ಪಕವಾಗಿ ಲಸಿಕೆ ಹಾಕುತ್ತಿಲ್ಲ ಎಂದು ಕಿಡಿ ಕಾರಿದರು.

ಲಸಿಕೆ ಪಡೆದ್ರೆ ಎರಡು ವರ್ಷದಲ್ಲಿ ಸಾಯ್ತಾರೆ ಎಂದು ಬಿಜೆಪಿ ಕಾರ್ಯಕರ್ತರೇ ಅಪಪ್ರಚಾರ ಮಾಡ್ತಿದ್ದಾರೆ. ಇದರಿಂದ ಲಸಿಕೆಗೆ ಜನ ಹಿಂದೇಟು ಹಾಕುವಂತೆ ಮಾಡ್ತಿದ್ದಾರೆ. ಲಸಿಕೆ ಕೊಡೋಕೆ ಆಗ್ತಿಲ್ಲ, ಅದಕ್ಕೆ ಇಂಥ ಪ್ರಯತ್ನ ಮಾಡ್ತಿದ್ದಾರೆ. ಇಂದು ಸಂಜೆ ರಾಜ್ಯಪಾಲರಿಗೆ ಲಸಿಕೆ ಅವ್ಯವಸ್ಥೆ, ಕೊರತೆ ಬಗ್ಗೆ ದೂರು ನೀಡ್ತಿದ್ದೇವೆ ಎಂದರು.

Last Updated : Jun 4, 2021, 9:24 PM IST

ABOUT THE AUTHOR

...view details