ಕಲಬುರಗಿ:ಬಿಜೆಪಿ ಪಕ್ಷಾಂತರಕ್ಕೆ ಬೆಂಬಲ ನೀಡಿರುವುದೇ ಚಿಂಚೋಳಿ ಉಪ ಚುನಾವಣೆಗೆ ಕಾರಣ ಎಂದು ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.
ಪಕ್ಷಾಂತರಕ್ಕೆ ಬೆಂಬಲ ನೀಡಿದ್ದುಬಿಜೆಪಿ: ಸಿಪಿಐಎಂ ಮುಖಂಡನ ನೇರಾನೇರ ಆರೋಪ - kalburgi
ದೇಶದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಚಾಲ್ತಿಯಲ್ಲಿದ್ದರೂ ಬಿಜೆಪಿ ಅದೇ ಕೆಲಸವನ್ನು ಮಾಡುತ್ತಿದೆ. ಇಂತಹ ಕೆಲಸ ಮಾಡುವ ಬಿಜೆಪಿಯನ್ನು ಚುನಾವಣೆಯಲ್ಲಿ ಮತದಾರರು ಸೋಲಿಸಬೇಕು ಎಂದು ಸಿಪಿಐಎಂ ಮುಖಂಡ ಮಾರುತಿ ಮಾನ್ಪಡೆ ಕಲಬುರಗಿ ಮತದಾರರಿಗೆ ಕರೆ ನೀಡಿದ್ದಾರೆ.
ಮಾರುತಿ ಮಾನ್ಪಡೆ ಆರೋಪಿಸಿದ್ದಾರೆ.
ಕಲಬುರ್ಗಿಯಲ್ಲಿ ಮಾತನಾಡಿದ ಮಾನ್ಪಡೆ, ಚುನಾಯಿತ ಸರ್ಕಾರ ಉರುಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಬಿಜೆಪಿ ಹೇರಿರುವ ಒತ್ತಾಯ ಪೂರ್ವಕ ಉಪ ಚುನಾವಣೆ ಇದಾಗಿದೆ ಎಂದು ಹೇಳಿದರು.
ಉಮೇಶ್ ಜಾಧವ್ ಶಾಸಕರಾಗಿರೋ ವರೆಗೂ ಬಗರ್ ಹುಕುಂ ಸಾಗುವಳಿದಾರರ ಪರವಾಗಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ತನ್ನ ಪುತ್ರನನ್ನೇ ಚುನಾವಣೆಗೆ ನಿಲ್ಲಿಸಿದ್ದು, ಬಿಜೆಪಿ ವಿರುದ್ಧ ಮತ ಹಾಕುವ ಮೂಲಕ ಜಾಧವ್ ಪುತ್ರನನ್ನು ಸೋಲಿಸಿ ಎಂದು ಮಾನ್ಪಡೆ ಕರೆ ನೀಡಿದರು.
TAGGED:
kalburgi