ದಾವಣಗೆರೆ :ನಗರದ ಜೈನ್ ಕಾಲೇಜಿನ ಟೆನಿಸ್‌ಕೋರ್ಟ್ ನೆಟ್‌ಗೆ ಬುಲೆಟ್ ಬೈಕ್ ಡಿಕ್ಕಿಯಾಗಿ ಸೋಮವಾರ ಸಂಜೆ ವಿದ್ಯಾರ್ಥಿಯೊಬ್ಬರು ಸಾವನ್ನಪ್ಪಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಇವರು ಕಣ್ಕೊಟ್ಟ ದೇವರು.. ಮಗ ಸಾವನ್ನಪ್ಪಿದಾಗಲೂ ಮಾನವೀಯತೆ ಮರೆಯಲಿಲ್ಲ.. - undefined
ಆಕಸ್ಮಿಕ ಅಪಘಾತದಲ್ಲಿ ಸಾವನ್ನಪ್ಪಿದ ಮಗನ ಕಣ್ಣುಗಳನ್ನು ಪೋಷಕರೇ ದಾನ ಮಾಡಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ಮೃತ ಲಿಖಿತ್
ತರಳಬಾಳು ಬಡಾವಣೆಯ ಪ್ರಭಾಕರ ಎಂಬುವರ ಮಗ ಲಿಖಿತ್ (20) ಮತೃ ಯುವಕ. ಎಂಜಿನಿಯರಿಂಗ್ ಮೊದಲ ವರ್ಷದ ವಿದ್ಯಾರ್ಥಿ ಲಿಖಿತ್, ಜೈನ್ ಕಾಲೇಜಿನ ಟೆನ್ನಿಸ್ ಕೋರ್ಟ್ ನೆಟ್‌ನ ತಂತಿ ಎದೆಗೆ ತಾಗಿ ಗಂಭೀರ ಗಾಯಗೊಂಡಿದ್ದ. ಮಗ ಲಿಖಿತ್‌ನನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದ. ಈ ದು:ಖದ ನಡುವೆಯೇ ಲಿಖಿತ್ನ ಪೋಷಕರು ಆತನ ಎರಡೂ ಕಣ್ಣುಗಳನ್ನು ದಾನ ಮಾಡಿದ್ದಾರೆ. ಮಗನ ಸಾವಿನ ನಡುವೆಯೂ ಕಣ್ಣುಗಳನ್ನು ದಾನ ಮಾಡಿದ ಪ್ರಭಾಕರ ದಂಪತಿ ಮಾನವೀಯತೆಗೆ ಮೆಚ್ಚಲೇಬೇಕು.