ಕರ್ನಾಟಕ

karnataka

ETV Bharat / briefs

ಬೆಂಕಿ ಜೊತೆ ಗುದ್ದಾಡಿ, ನುಗ್ಗಿ10 ಮಂದಿಯ ಪ್ರಾಣ ರಕ್ಷಿಸಿದ ಈ ಯುವಕ!

ಕೋಚಿಂಗ್​ ಸೆಂಟರ್‌ನಲ್ಲಿ ಭೀಕರ ಬೆಂಕಿ ಅನಾಹುತ ಸಂಭವಿಸಿದ ವೇಳೆ ಯುವಕನೊಬ್ಬ ರೋಮಾಂಚನಕಾರಿ ಸಾಹಸ ಪ್ರದರ್ಶಿಸಿದ್ದಾನೆ. ಗಟ್ಟಿ ಗುಂಡಿಗೆಯ ಈ ಯುವಕ ಬೆಂಕಿಯ ಕೆನ್ನಾಲಿಗೆ ಲೆಕ್ಕಿಸದೆ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರಾಣ ರಕ್ಷಿಸಿದ ಸ್ಟೋರಿ ಇದು.

ವಿದ್ಯಾರ್ಥಿಗಳ ರಕ್ಷಣೆ ಮಾಡಿದ ಯುವಕ

By

Published : May 25, 2019, 5:44 PM IST

ಸೂರತ್(ಗುಜರಾತ್)​​:ಇಲ್ಲಿನ ಕೋಚಿಂಗ್​ ಸೆಂಟರ್​ಗೆ ಏಕಾಏಕಿ ಬೆಂಕಿ ತಗುಲಿ ಸುಮಾರು 20 ವಿದ್ಯಾರ್ಥಿಗಳು ಸಾವನ್ನಪ್ಪಿರುವ ದುರ್ಘಟನೆ ನಿನ್ನೆ ನಡೆದಿತ್ತು. ಈ ದುರಂತದ ಮಧ್ಯೆ ಯುವಕನೋರ್ವ ಬೆಂಕಿ ಕೆನ್ನಾಲಿಗೆ ಮಧ್ಯೆ ನುಗ್ಗಿ, ಅಪೂರ್ವ ಧೈರ್ಯ ಪ್ರದರ್ಶಿಸಿ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಬದುಕು ಬೆಳಗಿಸಿದ್ದಾನೆ.

ಬೆಂಕಿ ಅನಾಹುತದ ಭಯಾನಕ ದೃಶ್ಯಾವಳಿ

ಕಟ್ಟಡಕ್ಕೆ ಬೆಂಕಿ ತಾಗುತ್ತಿದ್ದಂತೆ ಕೆಲವರು ಆ ದೃಶ್ಯಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿಯುವುದರಲ್ಲೇ ಮಗ್ನರಾಗಿದ್ದರು. ಇದರ ಮಧ್ಯೆ ಕೇತನ್ ಜೊರಾವಾಡಿಯಾ ಎಂಬ ಯುವಕ ಜೀವದ ಹಂಗು ತೊರೆದು ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಟ್ಟಡದೊಳಗೆ ನುಗ್ಗಿ 10 ವಿದ್ಯಾರ್ಥಿಗಳ ಪ್ರಾಣ ರಕ್ಷಣೆ ಮಾಡಿದ್ದಾನೆ.

ಶಾರ್ಟ್​ ಸರ್ಕ್ಯೂಟ್​ನಿಂದ ಬೆಂಕಿ ತಗುಲಿದ್ದು, ವಿದ್ಯಾರ್ಥಿನಿಯೊಬ್ಬಳು ರಕ್ಷಣೆಗಾಗಿ ಕಟ್ಟಡದಿಂದ ಜಿಗಿಯುತ್ತಿದ್ದ ದೃಶ್ಯ ನೋಡಿ ಅಯ್ಯೋ ಪಾಪ ಅನಿಸಿತು. ಈ ವೇಳೆ ನಾನು ತಕ್ಷಣ ಏಣಿ ತೆಗೆದುಕೊಂಡು ಮೇಲೆ ಹೋಗಿ ಅಲ್ಲಿಂದ 8 ರಿಂದ 10 ಮಕ್ಕಳನ್ನು ಕೆಳಗೆ ಕರೆದುಕೊಂಡು ಬಂದೆ. ತದನಂತರ ಮತ್ತೆರಡು ವಿದ್ಯಾರ್ಥಿಗಳನ್ನ ಕೆಳಗೆ ಕರೆದುಕೊಂಡು ಬರುವಲ್ಲಿ ಯಶಸ್ವಿಯಾದೆ ಎಂದು ತಿಳಿಸಿದ್ದಾರೆ.

ಈ ಯುವಕನ ಅದ್ಭುತ ಸಾಹಸ, ಅಪೂರ್ವ ಧೈರ್ಯಕ್ಕೆ ಎಲ್ಲರೂ ಭೇಷ್‌ ಎನ್ನುತ್ತಿದ್ದಾರೆ.

ABOUT THE AUTHOR

...view details