ತಿರುವನಂತಪುರಂ(ಕೇರಳ) :ದೇವರನಾಡಿನಲ್ಲೂ ಕೊರೊನಾ ಅಬ್ಬರ ನಿಂತಿಲ್ಲ. ಇಂದು ಸೋಂಕಿತರ ಸಂಖ್ಯೆ 42 ಸಾವಿರಕ್ಕೇರಿದೆ. 4 ಲಕ್ಷ ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರತಿ ಪಂಚಾಯತ್‌ನ ವಾರ್ಡ್ ಮಟ್ಟದ ಸಮಿತಿಗಳನ್ನು ರಚಿಸಲು ನಿರ್ಧರಿಸಿತು.
ಪ್ರಸ್ತುತ ಕೊರೊನಾದ ಎರಡನೇ ಅಲೆಯಲ್ಲಿ ರಾಜ್ಯವು ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಿದೆ. ಈ ರೂಪಾಂತರಗೊಂಡ ವೈರಸ್ ಹೆಚ್ಚು ತೀವ್ರತರವಾಗಿದ್ದು, ವೇಗವಾಗಿ ಹರಡುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.