ಲಂಡನ್: ಈ ಸಲದ ಐಸಿಸಿ ವಿಶ್ವಕಪ್ನಲ್ಲಿ ವರುಣನ ಅಬ್ಬರ ಜೋರಾಗಿದೆ. ಈಗಾಗಲೇ ಕೆಲ ಪಂದ್ಯಗಳಿಗೆ ಮಳೆ ಅಡ್ಡಿಪಡಿಸಿದ್ದು, ಇಂದು ನಡೆಯಬೇಕಾಗಿದ್ದ ನ್ಯೂಜಿಲ್ಯಾಂಡ್-ಭಾರತ ಪಂದ್ಯಕ್ಕೂ ತೊಡಕಾಗಿದೆ. ಇದರ ಮಧ್ಯೆ ತಂಡದ ಆಟಗಾರ ಕೇದಾರ್ ಜಾಧವ್ ಮಳೆರಾಯನ ಬಳಿ ಮನವಿ ಮಾಡಿಕೊಂಡು ಗಮನ ಸೆಳೆದಿದ್ದಾರೆ.
ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು, ಮರಾಠಿಯಲ್ಲಿ ಕೇದಾರ್ ಜಾಧವ್ ಪ್ರಾರ್ಥನೆ! - ಕೇದಾರ್ ಜಾಧವ್
ಈ ಸಲದ ಐಸಿಸಿ ವಿಶ್ವಕಪ್ನಲ್ಲಿ ಮಳೆರಾಯನ ಅಬ್ಬರ ಜೋರಾಗಿದ್ದು, ಈಗಾಗಲೇ ಕೆಲ ಪಂದ್ಯಗಳಿಗೆ ಅಡ್ಡಿಪಡಿಸಿ ಆಹುತಿ ಪಡೆದುಕೊಂಡಿದೆ. ಇದರ ಮಧ್ಯೆ ಟೀಂ ಇಂಡಿಯಾದ ಆಟಗಾರ ವರುಣನ ಬಳಿ ಪ್ರಾರ್ಥನೆ ಮಾಡಿಕೊಂಡಿದ್ದಾರೆ.
![ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು, ಮರಾಠಿಯಲ್ಲಿ ಕೇದಾರ್ ಜಾಧವ್ ಪ್ರಾರ್ಥನೆ!](https://etvbharatimages.akamaized.net/etvbharat/prod-images/768-512-3549471-thumbnail-3x2-wdfdw.jpg)
ಕೇದಾರ್ ಜಾಧವ್
ಮಳೆರಾಯನ ಬಳಿ ಕೇದಾರ್ ಪ್ರಾರ್ಥನೆ
ನಿನ್ನೆ ಅಭ್ಯಾಸ ನಡೆಸುತ್ತಿದ್ದ ವೇಳೆ ಕೇದಾರ್ ಜಾಧವ್, ಹೋಗು ಮಳೆರಾಯ ಹೋಗು, ಮಹಾರಾಷ್ಟ್ರಕ್ಕೆ ಹೋಗು.ಇಲ್ಲಿ ನಿನ್ನ ಅವಶ್ಯಕತೆ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಸುಮಾರು 8 ಸೆಕೆಂಡ್ಗಳ ಈ ವಿಡಿಯೋದಲ್ಲಿ ಕೇದಾರ್ ಜಾಧವ್ ಕೇಳಿಕೊಂಡಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ.
ವಿಶ್ವಕಪ್ನಲ್ಲಿ ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಗೆಲುವು ದಾಖಲು ಮಾಡಿರುವ ಕೊಹ್ಲಿ ಪಡೆ ಇಂದು ನ್ಯೂಜಿಲ್ಯಾಂಡ್ ವಿರುದ್ಧ ಸೆಣಸಾಟ ನಡೆಸಲಿದ್ದು, ಅದಕ್ಕೂ ಮಳೆ ಅಡ್ಡಿಪಡಿಸಿದೆ.