ಹೈದರಾಬಾದ್:ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಡೇಟಿಂಗ್ ಬಗ್ಗೆ ನಟ ಹರ್ಷ್ ವರ್ಧನ್ ಕಪೂರ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಆದರೆ, ಈ ಬಗ್ಗೆ ಕತ್ರಿನಾ ಬೇಸರಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿದೆ. ಆದರೆ, ವಿಕ್ಕಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲವಂತೆ.
ಇತ್ತೀಚಿನ ಸಂದರ್ಶನವೊಂದರಲ್ಲಿ, ವಿಕ್ಕಿ ಮತ್ತು ಕತ್ರಿನಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹರ್ಷ್ ವರ್ಧನ್ ಕಪೂರ್ ಖಚಿತಪಡಿಸಿದ್ದರು. ಯಾವ ಬಾಲಿವುಡ್ ಸಂಬಂಧದ ವದಂತಿಯನ್ನು ಅವರು ನಿಜವೆಂದು ನಂಬುತ್ತಾರೆ ಎಂದು ಕೇಳಿದಾಗ, ಹರ್ಷ ಅವರು "ವಿಕಿ ಮತ್ತು ಕತ್ರಿನಾ ಒಟ್ಟಿಗೆ ಇದ್ದಾರೆ, ಅದು ನಿಜ. ಇದನ್ನು ಹೇಳಿದ್ದಕ್ಕಾಗಿ ನಾನು ತೊಂದರೆಗೆ ಸಿಲುಕಲಿದ್ದೇನೆ? ನನಗೆ ಗೊತ್ತಿಲ್ಲ, ಅವರು ಸಾಕಷ್ಟು ಅದರ ಬಗ್ಗೆ ಮುಕ್ತವಾಗಿದ್ದಾರೆ ಎಂದು ಭಾವಿಸುತ್ತೇನೆ" ಎಂದು ಹೇಳಿಕೆ ನೀಡಿದ್ದರು.