ಹೈದರಾಬಾದ್:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ನಟ ಕಾರ್ತಿಕ್ ಆರ್ಯನ್, ತಮ್ಮ ಅಭಿಮಾನಿಗಳು ಹಾಗೂ ಫಾಲೋವರ್ಸ್ಗಳಿಗಾಗಿ ತಮ್ಮ ಹೆಚ್ಚಿನ ಸಮಯವನ್ನು ಮೀಸಲಿಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಹಾಸ್ಯಮಯ ಪೋಸ್ಟ್‌ಗಳಿಗೆ ಹೆಸರುವಾಸಿಯಾದ ಕಾರ್ತಿಕ್ ಅವರು, ಫೇಸ್ ಮಾಸ್ಕ್ ಧರಿಸಿದ ಹಳೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಮಾಸ್ಕ್ಗಳ ಬಳಕೆಯನ್ನು ಸೂಕ್ಷ್ಮವಾಗಿ ಒತ್ತಿ ಹೇಳಿದ್ದಾರೆ.
ಬಿಳಿ ಟಿ-ಶರ್ಟ್ ಧರಿಸಿ ಆರ್ಯನ್ ಹಸಿರು ಬಣ್ಣದ ಫೇಸ್ ಪ್ಯಾಕ್ ಹಾಕಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ನಟನು ತನ್ನ ಪ್ರಸ್ತುತ ಮೈಕಟ್ಟಿಗೆ ಹೋಲಿಸಿದರೆ ಸ್ಲಿಮ್ ಆಗಿ ಕಾಣಿಸುತ್ತಾನೆ. ಇನ್ನು ಸ್ಪೈಕೀ ಹೇರ್ಸ್ಟೈಲ್ನ್ನು ಕಾಣಬಹುದು.
ಇನ್ನು ಫೇಸ್ ಮಾಸ್ಕ್ ಹಾಕಿಕೊಂಡ ಕಾರ್ತಿಕ್ ಫೋಟೋಗೆ ನೆಟ್ಟಿಗರು ಸಕತ್ ಕಾಲೆಳೆದಿದ್ದಾರೆ. ಆ ಕೆಲ ತಮಾಷೆಯ ಕಾಮೆಂಟ್ಗಳು ಹೀಗಿವೆ ನೋಡಿ ಒಬ್ಬರು, ಅಮ್ಮ ಅಂದಿರ್ಬೇಕು.. ಹಸುವಿನ ಸಗಣಿ ಮುಖಕ್ಕೆ ಒಳ್ಳೆಯದು, ಅದಕ್ಕೆ ಹಚ್ಚಿಕೊಂಡಿದ್ದಾರೆ ಅಂದ್ರೆ, ಅದನ್ನೇ ಅನುಸರಿಸಿ ಇನ್ನೊಬ್ಬಾಕೆ ಹುಡುಗಿ ಕಡೆಯವರು ನೋಡಲು ಬರ್ತಿರ್ಬೇಕು ಎಂದು ತಮಾಷೆ ಮಾಡಿದ್ದಾರೆ.
ಇನ್ನು ಕೆರಿಯರ್ ವಿಷ್ಯಕ್ಕೆ ಬಂದ್ರೆ ಕಾರ್ತಿಕ್ ಕೈಯ್ಯಲ್ಲಿ ಸದ್ಯ ಭೂಲ್ ಭೂಲೈಯಾ 2 ಚಿತ್ರವಿದೆ. ಇದರಲ್ಲಿ ಟಬು ಮತ್ತು ಕಿಯಾರಾ ಅಡ್ವಾಣಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದು 2007 ರ ಚಲನಚಿತ್ರ ಭೂಲ್ ಭೂಲೈಯಾ ಚಿತ್ರದ ಮುಂದುವರಿದ ಭಾಗವಾಗಿದೆ. ಕರಣ್ ಜೋಹರ್ ಅವರ ಮುಂಬರುವ ಚಿತ್ರ ದೋಸ್ತಾನಾ 2 ನಿಂದ ವಿವಾದಾತ್ಮಕ ನಿರ್ಗಮನಕ್ಕಾಗಿ ಕಾರ್ತಿಕ್ ಇತ್ತೀಚೆಗೆ ಸುದ್ದಿಯಲ್ಲಿದ್ದರು.