ಲಿಂಗಸುಗೂರು(ರಾಯಚೂರು): ಜಿಲ್ಲೆಯ ಲಿಂಗಸುಗೂರಲ್ಲಿ ಅಖಿಲ ಭಾರತ ಕ್ರಾಂತಿಕಾರಿ ಸಭಾ ರಾಷ್ಟ್ರೀಯ ಸಮಿತಿ ಕರೆ ನೀಡಿದ್ದ ಪ್ರತಿಭಟನೆ ಬೆಂಬಲಿಸಿ ಕರ್ನಾಟಕ ರೈತ ಸಂಘ ಸದಸ್ಯರು ಮನವಿ ಸಲ್ಲಿಸಿದರು.
ಅಖಿಲ ಭಾರತ ಪ್ರತಿಭಟನೆ ಬೆಂಬಲಿಸಿ ಕರ್ನಾಟಕ ರೈತ ಸಂಘ ಮನವಿ
ಲಿಂಗಸುಗೂರಲ್ಲಿ ಅಖಿಲ ಭಾರತ ಕ್ರಾಂತಿಕಾರಿ ಸಭಾ ರಾಷ್ಟ್ರೀಯ ಸಮಿತಿ ಕರೆ ನೀಡಿದ್ದ ಪ್ರತಿಭಟನೆ ಬೆಂಬಲಿಸಿ ಕರ್ನಾಟಕ ರೈತ ಸಂಘ ಸದಸ್ಯರು ಮನವಿ ಸಲ್ಲಿಸಿದರು.
Raichur
ಕೃಷಿ ಕ್ಷೇತ್ರ ಕಾರ್ಪೋರೇಟ್ ಕಂಪೆನಿಗಳಿಗೆ ಒಪ್ಪಿಸುವ ತಿದ್ದುಪಡಿ ಕಾಯ್ದೆಗಳನ್ನು ಕೈ ಬಿಡಬೇಕು. ವಲಸೆ ಮತ್ತು ನಿರ್ಗತಿಕ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಹಾಗೂ ಬಡವರಿಗೆ ಭೂಮಿ ಮಂಜೂರು ಮಾಡುವಂತೆ ಆಗ್ರಹಿಸಿದರು.
ಅರಣ್ಯ ಇಲಾಖೆಯಿಂದ ಕಂದಾಯದ ಜಮೀನು ವಾಪಸ್ ಪಡೆದು ಅಕ್ರಮ ಸಾಗುವಳಿದಾರರಿಗೆ ತ್ವರಿತವಾಗಿ ಆದೇಶ ನೀಡಬೇಕು. ಅರಣ್ಯ ಹಕ್ಕು ಕಾಯ್ದೆ ಸಮರ್ಪಕ ಬಳಕೆಗೆ ಮುಂದಾಗಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನಗಳನ್ನು ಇಮ್ಮಡಿಗೊಳಿಸಿ, ಕೂಲಿ ಹಣವನ್ನು 400ಕ್ಕೆ ಹೆಚ್ಚಿಸುವುದು ಸೇರಿದಂತೆ ಇತರೆ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರು.