ಅಥಣಿ :ತಾಲೂಕಿನ ಮದಬಾವಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ವೈದ್ಯರನ್ನು ನೇಮಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ಪ್ರವೀಣ್ ನಾಯಕ್ ವೈದ್ಯಾಧಿಕಾರಿಗೆ ಮನವಿ ಸಲ್ಲಿಸಿದರು.
ಮದಬಾವಿ ಆಸ್ಪತ್ರೆಗೆ ವೈದ್ಯರ ನೇಮಕಕ್ಕೆ ಮನವಿ ಸಲ್ಲಿಸಿದ ಕರವೇ.. - Karave members appealed
ಕೆಲವು ವೈದ್ಯರು ಆಸ್ಪತ್ರೆಗೆ ಸರಿಯಾಗಿ ಬರುವುದಿಲ್ಲ ಎಂದು ದೂರಿದರು. ಎಂಬಿಬಿಎಸ್ ವೈದ್ಯರ ಜೊತೆ ಹೆಚ್ಚುವರಿಯಾಗಿ ಬಿಎಎಂಎಸ್ ವೈದ್ಯರನ್ನು ನೇಮಿಸಿ ಸುಮಾರು ಮೂರು ವರ್ಷ ಕಾರ್ಯ ನಿರ್ವಹಿಸಿದರೆ ಮಾತ್ರ ಆಸ್ಪತ್ರೆ ಸುಧಾರಣೆಗೊಳ್ಳುವುದಕ್ಕೆ ಸಾಧ್ಯ.
ಇದೇ ವೇಳೆ ಮಾತನಾಡಿದ ಪ್ರವೀಣ್ ನಾಯಕ್, ಮದಬಾವಿ ಗ್ರಾಮದ ಸರ್ಕಾರಿ ಆಸ್ಪತ್ರೆ 16 ಹಳ್ಳಿಗಳ ಆರೋಗ್ಯ ಸೇತುವೆಯಾಗಿದೆ. ಇಲ್ಲಿ ಸಮರ್ಪಕ ವೈದ್ಯರು ಕೊರತೆ ಹಾಗೂ ವೈದ್ಯರನ್ನು ಮೇಲಿಂದ ಮೇಲೆ ಬದಲಾವಣೆ ಮಾಡಲಾಗುತ್ತಿದೆ. ಕೆಲವು ವೈದ್ಯರು ಆಸ್ಪತ್ರೆಗೆ ಸರಿಯಾಗಿ ಬರುವುದಿಲ್ಲ ಎಂದು ದೂರಿದರು. ಎಂಬಿಬಿಎಸ್ ವೈದ್ಯರ ಜೊತೆ ಹೆಚ್ಚುವರಿಯಾಗಿ ಬಿಎಎಂಎಸ್ ವೈದ್ಯರನ್ನು ನೇಮಿಸಿ ಸುಮಾರು ಮೂರು ವರ್ಷ ಕಾರ್ಯ ನಿರ್ವಹಿಸಿದರೆ ಮಾತ್ರ ಆಸ್ಪತ್ರೆ ಸುಧಾರಣೆಗೊಳ್ಳುವುದಕ್ಕೆ ಸಾಧ್ಯ.
ಆಸ್ಪತ್ರೆಗೆ 24/7 ಗಂಟೆ ಸೇವೆ ನೀಡಬೇಕು. ಇಲ್ಲಿಯ ಬಡಜನರಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಅಳವಡಿಸಬೇಕೆಂದು ಹಲವು ವರ್ಷಗಳಿಂದ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ದಯವಿಟ್ಟು ಆದಷ್ಟು ಬೇಗನೆ ಆಸ್ಪತ್ರೆ ಸರಿಪಡಿಸಿ ಎಂದು ವೈದ್ಯಾಧಿಕಾರಿ ಹೆಚ್ ಕೊಪ್ಪದ ಅವರಿಗೆ ಮನವಿ ಮಾಡಿಕೊಂಡರು.