ಯಶವಂತ್ ಅವರ ನಿರ್ದೇಶನದ ಸದಭಿರುಚಿಯ ಧಾರಾವಾಹಿ ಕನ್ನಡತಿ. ಈ ಧಾರಾವಾಹಿಯಲ್ಲಿ ಬರುವ ಪ್ರತಿ ಪಾತ್ರಗಳು ವೀಕ್ಷಕರ ಮನಸ್ಸಿಗೆ ಬಹಳ ಹತ್ತಿರವಾಗಿವೆ. ಧಾರಾವಾಹಿಯಲ್ಲಿ ಬರುವ ಸೀತಾ ಆಂಟಿ ಪಾತ್ರ ಕೂಡ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಸೀತಾ ಆಂಟಿ ಪಾತ್ರದಲ್ಲಿ ನಟಿಸುತ್ತಿರುವ ಈ ಕಲಾವಿದೆಯ ಹೆಸರು ಮಧುಮತಿ. ಶಾಲಾ ದಿನದಿಂದಲೇ, ನಟನೆಯಲ್ಲಿ ಆಸಕ್ತಿ ಬೆಳೆಸಿಕೊಂಡ ಮಧುಮತಿ ಅವರು ಕಾಲೇಜಿನಲ್ಲಿ ಇದ್ದಾಗ, ಉದಯ ವಾಹಿನಿಯ "ಹೃದಯದಿಂದ" ಕಾರ್ಯಕ್ರಮದಲ್ಲಿ ಕೆಲಸ ಮಾಡಿದರು. ಆಮೇಲೆ, ಮದುವೆ, ಮಕ್ಕಳು, ಸಂಸಾರ ಎಂದು ಬ್ಯುಸಿಯಾದರು.
‘ಕನ್ನಡತಿ’ಯ ನಟಿ ಮಧುಮತಿ ನಟನೆಗೂ ಮುನ್ನ ಮಾಡುತ್ತಿದ್ದ ಕೆಲಸ ಇದೇ ನೋಡಿ.. - ಕನ್ನಡತಿ ಧಾರಾವಾಹಿ ಮಧುಮತಿ
ಯಶವಂತ್ ಅವರ ನಿರ್ದೇಶನದಲ್ಲಿ ಒಮ್ಮೆಯಾದರೂ ನಟನೆ ಮಾಡಬೇಕು ಅನ್ನೋ ನನ್ನ ಆಸೆ, ಕನಸು ಈಡೇರಿದೆ. ಕನ್ನಡತಿ, ಹಳೆ ಪೀಳಿಗೆ ಮತ್ತು ಹೊಸ ಪೀಳಿಗೆಯ ಮಿಶ್ರಣದ ಶುದ್ಧವಾದ ಧಾರಾವಾಹಿ. ತಾನು ಇದರ ಒಂದು ಭಾಗವಾಗಿದ್ದಕ್ಕೆ ಕನ್ನಡತಿ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ಮಧುಮತಿ..
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಮಧುಮತಿ ಪ್ರಾಥಮಿಕ ಶಿಕ್ಷಣವನ್ನು ಇಲ್ಲಿಯೇ ಪೂರೈಸಿದರು. ಆ ನಂತರ ಕುದುರೆಮುಖದಲ್ಲಿ ಓದು ಮುಂದುವರೆಸಿದರು. ನಂತರ ಥಿಯೇಟರ್ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿದರು. ಇನ್ನೊಂದು ಹೆಮ್ಮೆಯ ಸಂಗತಿ ಅಂದರೆ, ಇವರು ಶಿಕ್ಷಕಿ ಆಗಿ ಎನ್ಪಿಎಸ್ ಸ್ಕೂಲ್ನಲ್ಲಿ 10 ವರ್ಷ ಕೆಲಸ ಮಾಡಿದ್ದಾರೆ. ಈಗ ಆ ವೃತ್ತಿಯನ್ನು ಬಿಟ್ಟು, ಪುನಃ ನಟನೆಗೆ ಮರಳಿದ್ದಾರೆ. “ಕನ್ನಡತಿ ಧಾರಾವಾಹಿಯಲ್ಲಿ ನಟಿಸುವುದು ಕನಸಾಗಿತ್ತು, ಮೊದಲೊಮ್ಮೆ ಅವಕಾಶ ಮಿಸ್ ಆದಾಗ ದುಃಖ ಆಗಿತ್ತು. ಈಗ ಪುನಃ ಸೀತಾ ಆಂಟಿ ಆಗಿ ನಿಮ್ಮ ಮುಂದೆ ಬಂದಿದ್ದೇನೆ" ಎಂದು ಸಂತೋಷ ವ್ಯಕ್ತಪಡಿಸುತ್ತಾರೆ ಮಧುಮತಿ.
ಯಶವಂತ್ ಅವರ ನಿರ್ದೇಶನದಲ್ಲಿ ಒಮ್ಮೆಯಾದರೂ ನಟನೆ ಮಾಡಬೇಕು ಅನ್ನೋ ನನ್ನ ಆಸೆ, ಕನಸು ಈಡೇರಿದೆ. ಕನ್ನಡತಿ, ಹಳೆ ಪೀಳಿಗೆ ಮತ್ತು ಹೊಸ ಪೀಳಿಗೆಯ ಮಿಶ್ರಣದ ಶುದ್ಧವಾದ ಧಾರಾವಾಹಿ. ತಾನು ಇದರ ಒಂದು ಭಾಗವಾಗಿದ್ದಕ್ಕೆ ಕನ್ನಡತಿ ತಂಡಕ್ಕೆ ಧನ್ಯವಾದ ಹೇಳುತ್ತೇನೆ ಎನ್ನುತ್ತಾರೆ ಮಧುಮತಿ.