ಕರ್ನಾಟಕ

karnataka

ETV Bharat / briefs

ಪೋಷಕರ ವಿವಾಹ ವಾರ್ಷಿಕೋತ್ಸವಕ್ಕೆ ಮಗಳು 'ಸೃಷ್ಟಿ'ಯ ಕೊಡುಗೆ ನಿಜಕ್ಕೂ ಸ್ಮರಣೀಯ! - Kalburgi latest News

ತಂದೆ-ತಾಯಿ ವಿವಾಹ ವಾರ್ಷಿಕೋತ್ಸವದಂದು ಮಗಳು, ತಾನು ಕೂಡಿಟ್ಟ ಹಣದಲ್ಲಿ ದಿನಸಿ ಕಿಟ್​ ಖರೀದಿ ಮಾಡಿ ಕೊರೊನಾದಿಂದ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕರಿಗೆ ವಿತರಿಸಿದ್ದಾಳೆ. ಈ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ.

ಸೃಷ್ಟಿ ಪಾಟೀಲ್​ ಸಮಾಜಮುಖಿ ಕಾರ್ಯ
ಸೃಷ್ಟಿ ಪಾಟೀಲ್​ ಸಮಾಜಮುಖಿ ಕಾರ್ಯ

By

Published : Jun 2, 2021, 10:47 AM IST

Updated : Jun 2, 2021, 11:07 AM IST

ಕಲಬುರಗಿ: ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವದ ದಿನವನ್ನು ಸ್ಮರಣೀಯಗೊಳಿಸಬೇಕು ಎಂದು ಮುಂದಾದ ಮಗಳು, ತಾನು ಕೂಡಿಟ್ಟ ಹಣದಲ್ಲಿ ದಿನಸಿ ಕಿಟ್​ ಖರೀದಿ ಮಾಡಿ ಕೊರೊನಾದಿಂದ ಸಂಕಷ್ಟದಲ್ಲಿರುವ ಬಡ ಕೂಲಿ ಕಾರ್ಮಿಕರಿಗೆ ವಿತರಿಸಿದ್ದಾಳೆ.

ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕ ವಿಜಯಕುಮಾರ್ ತೆಗಲತಿಪ್ಪಿಯವರ ಪುತ್ರಿ ಸೃಷ್ಟಿ ಪಾಟೀಲ್‌ ತನ್ನ ಪೋಷಕರ 13ನೇ ವಿವಾಹ ವಾರ್ಷಿಕೋತ್ಸವದಂದು ಬಡ ಕೂಲಿ‌ ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸಿದ್ದಾಳೆ. ಕಲಬುರಗಿ ನಗರದ ಹೈಕೋರ್ಟ್ ಬಳಿಯ ಬಡ ಕೂಲಿ‌ ಕಾರ್ಮಿಕರಿಗೆ ಮತ್ತು ಕಲಾವಿದರಿಗೆ ದಿನಸಿ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ.

ತಾನು ಕೂಡಿಟ್ಟ ಹಣದಲ್ಲಿ ಬಡ ಕೂಲಿ ಕಾರ್ಮಿಕರಿಗೆ ದಿನಸಿ ಕಿಟ್‌ ವಿತರಿಸಿ ಪೋಷಕರ ವಿವಾಹ ವಾರ್ಷಿಕೋತ್ಸವ ಆಚರಿಸಿದ ಸೃಷ್ಟಿ ಪಾಟೀಲ್, ಚಿಕ್ಕವಯಸ್ಸಿನಲ್ಲಿ ಹೃದಯ ವೈಶಾಲ್ಯತೆ ಮೆರೆದಿದ್ದಾಳೆ.

ಪೋಷಕರ ವಿವಾಹ ವಾರ್ಷಿಕೋತ್ಸವಕ್ಕೆ ಮಗಳು 'ಸೃಷ್ಟಿ'ಯ ಕೊಡುಗೆ ನಿಜಕ್ಕೂ ಸ್ಮರಣೀಯ!

ಇಡೀ ದೇಶ ಕೊರೊನಾದಿಂದ ಸಮಸ್ಯೆ ಎದುರಿಸುತ್ತಿದೆ. ಲಾಕ್​ಡೌನ್​ನಿಂದಾಗಿ ಬಡ ಹಾಗೂ ಕೂಲಿ ಕಾರ್ಮಿಕರು ಹಸಿವಿನಿಂದ ಬಳಲುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಟಿವಿ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಿಂದಾಗಿ ನನ್ನ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವದ ಹಿನ್ನೆಲೆ ಈ ವರ್ಷ ದುಂದುವೆಚ್ಚ ಮಾಡದೆ ಸಂಕಷ್ಟದಲ್ಲಿರುವ ಬಡರಿಗೆ ಸಹಾಯ ಮಾಡಲು ಮುಂದಾಗಿದ್ದೇನೆ ಎಂದು ಬಾಲಕಿ ಸೃಷ್ಟಿ ಪಾಟೀಲ್‌ ತಿಳಿಸಿದ್ದಾಳೆ.

Last Updated : Jun 2, 2021, 11:07 AM IST

ABOUT THE AUTHOR

...view details