ಕರ್ನಾಟಕ

karnataka

ETV Bharat / briefs

ಸಿಬಿಎಸ್​​ಸಿ 12 ಕ್ಲಾಸ್​ ಫಲಿತಾಂಶ ಪ್ರಕಟ:  ಹನ್ಸಿಕಾ, ಕರೀಷ್ಮಾ ದೇಶಕ್ಕೆ ಟಾಪರ್ಸ್​ - ಸಿಬಿಎಸ್​​ಸಿ

ಸಿಬಿಎಸ್​ಸಿ 12ನೇ ತರಗತಿಯ ಫಲಿತಾಂಶ ಹೊರ ಬಿದ್ದಿದ್ದು, ಶೇ 83.4 ರಷ್ಟು ವಿದ್ಯಾರ್ಥಿಗಳು ದೇಶಾದ್ಯಂತ ಪಾಸ್​ ಆಗಿದ್ದಾರೆ.  ಇನ್ನು ಕೇರಳದ ತಿರುವನಂತಪುರ ಶೇ. 98.2 ರಷ್ಟು ಫಲಿತಾಂಶ ಪಡೆಯುವ ಮೂಲಕ ದೇಶಕ್ಕೆ ಮೊದಲ ಸ್ಥಾನ ಪಡೆದಿದೆ.

ಸಿಬಿಎಸ್​​ಸಿ

By

Published : May 2, 2019, 2:11 PM IST

ನವದೆಹಲಿ: ಸಿಬಿಎಸ್​ಸಿ 12ನೇ ತರಗತಿಯ ಫಲಿತಾಂಶ ಹೊರ ಬಿದ್ದಿದೆ. ಸಿಬಿಎಸ್​ಸಿ ಮಂಡಳಿ ಇಂದು ಮಧ್ಯಾಹ್ನ ಫಲಿತಾಂಶವನ್ನ ಪ್ರಕಟಿಸಿದೆ. http://cbseresults.nic.in/cbseresults_cms/Public/Home.aspx ನಲ್ಲಿ ವಿದ್ಯಾರ್ಥಿಗಳು ಫಲಿತಾಂಶವನ್ನ ನೋಡಬಹುದಾಗಿದೆ.

ಶೇ 83.4 ರಷ್ಟು ವಿದ್ಯಾರ್ಥಿಗಳು ದೇಶಾದ್ಯಂತ ಪಾಸ್​ ಆಗಿದ್ದಾರೆ. ಇನ್ನು ಕೇರಳದ ತಿರುವನಂತಪುರ ಶೇ. 98.2 ರಷ್ಟು ಫಲಿತಾಂಶ ಪಡೆಯುವ ಮೂಲಕ ದೇಶಕ್ಕೆ ಮೊದಲ ಸ್ಥಾನ ಪಡೆದಿದೆ. ಇನ್ನು ಚೆನ್ನೈ ವಿಭಾಗದ ವಿದ್ಯಾರ್ಥಿಗಳು ಶೇ 92.93 ರಷ್ಟು ಫಲಿತಾಂಶ ಪಡೆದಿದೆ. ದೆಹಲಿ ಶೇ. 91.87 ಹಾಗೂ ಇಂಟರ್​ನ್ಯಾಷನಲ್​ ಸ್ಕೂಲ್​ಗಳು ಶೇ 95.43 ರಷ್ಟು ಫಲಿತಾಂಶ ಪಡೆದಿವೆ.

500ಕ್ಕೆ 499 ಅಂಕ ಪಡೆದಿರುವ ಹನ್ಸಿಕಾ ಶುಕ್ಲಾ ಮತ್ತು ಕರೀಷ್ಮಾ ಅರೋರಾ ಜಂಟಿಯಾಗಿ ಮೊದಲ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ವಿದ್ಯಾರ್ಥಿಗಳೂ ಸೇರಿದಂತೆ ಸುಮಾರು 13 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ABOUT THE AUTHOR

...view details