ಡಬ್ಲಿನ್:ಇಂದಲ್ಲ ನಾಳೆ ದಾಖಲೆಗಳು ಬ್ರೇಕ್ ಆಗಲೇಬೇಕು. ಕ್ರಿಕೆಟ್ ಲೋಕದಲ್ಲಿ ಈ ಮಾತು ಸರ್ವೇ ಸಾಮಾನ್ಯ. ವಿಂಡೀಸ್ನ ಆರಂಭಿಕ ಆಟಗಾರರಿಬ್ಬರು ಇಂದು ಹೊಸದೊಂದು ದಾಖಲೆ ಬರೆದಿದ್ದಾರೆ.
ಐರ್ಲೆಂಡ್, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ನಡುವಿನ ತ್ರಿಕೋನ ಸರಣಿಯ ಆರಂಭಿಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ವಿಂಡೀಸ್ನ ಆರಂಭಿಕ ಬ್ಯಾಟ್ಸ್ಮನ್ಗಳಾದ ಜಾನ್ ಕ್ಯಾಂಪ್ಬೆಲ್(179) ಹಾಗೂ ಶೈ ಹೋಪ್(170) ಮೊದಲ ವಿಕೆಟ್ಗೆ 365 ರನ್ ಬಾರಿಸಿ ದಾಖಲೆ ಬರೆದಿದ್ದಾರೆ.
ಕಳೆದ ವರ್ಷ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಇಮಾಮ್ ಉಲ್ ಹಕ್ ಹಾಗೂ ಫಕರ್ ಜಮಾನ್ 304 ರನ್ಗಳ ದಾಖಲೆ ಇಂದು ಪತನವಾಗಿದೆ.