ಕಾರ್ಡಿಫ್(ಇಂಗ್ಲೆಂಡ್): ಚುಟುಕು ಕ್ರಿಕೆಟ್ನಲ್ಲಿ ನಂಬರ್ 1 ತಂಡವಾದ ಪಾಕಿಸ್ತಾನವನ್ನು 7 ವಿಕೆಟ್ಗಳಿಂದ ಬಗ್ಗು ಬಡಿಯುವ ಮೂಲಕ ಇಂಗ್ಲೆಂಡ್ ಏಕೈಕ ಪಂದ್ಯದ ಟಿ-20 ಸರಣಿಯನ್ನು ವಶಪಡಿಸಿಕೊಂಡಿದೆ.
ವಿಶ್ವಕಪ್ಗೂ ಮುನ್ನ ಪೂರ್ವಭಾವಿಯಾಗಿ ಪಾಕಿಸ್ತಾನ - ಇಂಗ್ಲೆಂಡ್ ನಡುವೆ ಟಿ -20 ಹಾಗೂ ಏಕದಿನ ಸರಣಿ ಆಯೋಜನೆಗೊಂಡಿದ್ದು, ನಿನ್ನೆ ನಡೆದ ಏಕೈಕ ಟಿ-20 ಪಂದ್ಯದಲ್ಲಿ ಪಾಕಿಸ್ತಾನ ನೀಡಿದ 173ರನ್ಗಳ ಗುರಿಯನ್ನು 19.2 ಓವರ್ಗಳಲ್ಲಿ ತಲುಪುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ನೀಡಿದೆ.
174 ರನ್ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಜೇಮ್ಸ್ ವಿನ್ಸ್ 36, ಜೋ ರೂಟ್ 47, ನಾಯಕ ಮಾರ್ಗನ್ ಔಟಾಗದೇ 57 ಹಾಗೂ ಜೊ ಡೆನ್ಲಿ ಔಟಾಗದೆ 20 ರನ್ಗಳಿಸಿ ತಂಡದ ಗೆಲುವಿಗೆ ನೆರವಾದರು. ಪಾಕಿಸ್ತಾನ ಪರ ಶಾಹಿನ್ ಅಫ್ರಿದಿ, ಇಮಾದ್ ವಾಸಿಂ ಹಾಗೂ ಹಸನ್ ಅಲಿ ತಲಾ ಒಂದು ವಿಕೆಟ್ ಪಡೆದರು.