ಕರ್ನಾಟಕ

karnataka

ETV Bharat / briefs

ಪ್ರಧಾನಿ ಪಟ್ಟದ ಮೇಲೆ ಕಣ್ಣಿಟ್ಟಿದೆಯೇ ಜೆಡಿಎಸ್​​... ಅನುಮಾನಕ್ಕೆ ಕಾರಣವಾದವೇ ಈ ಹೇಳಿಕೆಗಳು!? - ಅನುಮಾನ

ಫೆಬ್ರವರಿ 27ರಂದು ಸಕ್ಕರೆ ಜಿಲ್ಲೆಗೆ ಸಿಎಂ ಕುಮಾರಸ್ವಾಮಿ 5 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನಗರದ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ನೆರವೇರಿಸಿದ್ದರು.

ಸಿಎಂ ಕುಮಾರಸ್ವಾಮಿ

By

Published : Mar 12, 2019, 5:35 PM IST

ಮಂಡ್ಯ: ಜೆಡಿಎಸ್ ಸದ್ದಿಲ್ಲದೇ ಪ್ರಧಾನಿ ಹುದ್ದೆ ಮೇಲೆ ಕಣ್ಣಿಟ್ಟಿದ್ಯಾ? ಕಾಂಗ್ರೆಸ್ ಜೊತೆ ಮೈತ್ರಿಗೆ ಪ್ರಧಾನಿ ಹುದ್ದೆಯೇ ಕಾರಣವೋ? ಹೌದು ಅನ್ನುತ್ತಿದೆ ಜೆಡಿಎಸ್ ನಾಯಕರುಗಳ ಹೇಳಿಕೆಗಳು.

ಯಾಕಂದರೆ, ಮಂಡ್ಯದಲ್ಲಿ ಸಿಎಂ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಹಾಗೂ ಸಂಸದ ಶಿವರಾಮೇಗೌಡರ ಹೇಳಿಕೆ ಇದಕ್ಕೆ ಸಾಕಷ್ಟು ಪುಷ್ಠಿ ನೀಡುತ್ತಿವೆ.

ಫೆಬ್ರವರಿ 27ರಂದು ಸಕ್ಕರೆ ಜಿಲ್ಲೆಗೆ ಸಿಎಂ ಕುಮಾರಸ್ವಾಮಿ 5 ಸಾವಿರ ಕೋಟಿ ರೂಪಾಯಿಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆಯನ್ನು ನಗರದ ಬಾಲಕರ ಸರ್ಕಾರಿ ಕಾಲೇಜು ಮೈದಾನದಲ್ಲಿ ನೆರವೇರಿಸಿದ್ದರು.

ಸಿಎಂ ಕುಮಾರಸ್ವಾಮಿ ಹೇಳಿಕೆ

ಅಂದು ಸಿಎಂ ಸುಮಾರು ಒಂದೂ ಕಾಲು ಗಂಟೆ ಸುದೀರ್ಘ ಭಾಷಣ ಮಾಡಿದ್ದರು. ಭಾಷಣದಲ್ಲಿ ಕನ್ನಡಿಗರೊಬ್ಬರು ಪ್ರಧಾನಿಯಾಗುವ ಯೋಗವಿದೆ ಅನ್ನೋ ಮೂಲಕ ಪ್ರಧಾನಿ ಹುದ್ದೆಯ ಮೇಲೆ ಜೆಡಿಎಸ್ ಕಣ‍್ಣಿಟ್ಟಿದೆ ಅನ್ನೋದನ್ನ ಪರೋಕ್ಷವಾಗಿ ಹೇಳಿಕೊಂಡಿದ್ದರು.

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿಯೂ ಮಳವಳ್ಳಿ ಕಾರ್ಯಕ್ರಮವೊಂದರಲ್ಲಿ ಇದೇ ರೀತಿಯಾದ ಭಾಷಣವನ್ನು ಮಾಡಿದ್ದರು. ಕನ್ನಡಿಗರು ಮತ್ತೊಮ್ಮೆ ಪ್ರಧಾನಿ ಆಗುವ ಅವಕಾಶವಿದೆ. ಜೆಡಿಎಸ್ ಬೆಂಬಲಿಸಿ, ನಿಮ್ಮ ಗುಲಾಮನಾಗಿ ಕೆಲಸ ಮಾಡುತ್ತೇನೆ ಅಂತ ಹೇಳಿದ್ದರು.

ಇದೇ ರೀತಿಯ ಹೇಳಿಕೆಯನ್ನು ಮಂಡ್ಯ ಸಂಸದ ಶಿವರಾಮೇಗೌಡ ಪುನರುಚ್ಚರಿಸಿದ್ದಾರೆ. ಸೋಮವಾರ ಬೆಳ್ಳೂರಿನಲ್ಲಿ ಮಾಧ‍್ಯಮಗಳ ಜೊತೆ ಮಾತನಾಡಿ, ದೇವೇಗೌಡರು ಮತ್ತೊಮ್ಮೆ ಪ್ರಧಾನಿ ಆಗುವ ಸಾಧ್ಯತೆ ಇದೆ ಅಂತ ಹೇಳಿದ್ದಾರೆ.

ಜೆಡಿಎಸ್​ನ ಈ ಮೂವರು ನಾಯಕರ ಹೇಳಿಕೆಗಳು ಅಚ್ಚರಿಗೆ ಕಾರಣವಾಗಿದೆ. ಕಾಂಗ್ರೆಸ್ ಯುವರಾಜನನ್ನೇ ಹೈಜಾಕ್ ಮಾಡಿ ದೇವೇಗೌಡರು ಅಥವಾ ಅವರ ಕುಟುಂಬದವರು ಪ್ರಧಾನಿ ಆಗುತ್ತಾರಾ ಎಂಬ ಮಾತುಗಳು ಈ ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಒಂದೊಮ್ಮೆ ಜೆಡಿಎಸ್ ಪ್ರಧಾನಿ ಹುದ್ದೆ ಮೇಲೆ ಕಣ‍್ಣಿಟ್ಟಿದ್ದೇ ಆದರೆ ಕಾಂಗ್ರೆಸ್​​​ಗೆ ಇದು ನುಂಗಲಾರದ ತುತ್ತಾಗುವುದರಲ್ಲಿ ಅನುಮಾನವೇ ಇಲ್ಲ.

ABOUT THE AUTHOR

...view details